ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಂಗಳೂರು...?

Last Updated 28 ಮೇ 2017, 19:52 IST
ಅಕ್ಷರ ಗಾತ್ರ

ಕರ್ನಾಟಕ ರಾಜ್ಯದಲ್ಲಿರುವ ಅತ್ಯಂತ ಸುಂದರ ಹೆಸರಿನ ಜಿಲ್ಲೆಗಳಲ್ಲಿ ನಮ್ಮ ಚಿಕ್ಕಮಗಳೂರು ಪ್ರಮುಖವಾದುದಾಗಿದೆ. ಮಲೆನಾಡು ಹಾಗೂ ಭಾಗಶಃ ಬಯಲುನಾಡು ಎರಡನ್ನೂ ತನ್ನ ಅಸ್ತಿತ್ವದ ನೆಲೆಯಾಗಿಸಿಕೊಂಡು ವೈವಿಧ್ಯಪೂರ್ಣ ಸಂಸ್ಕೃತಿಗೆ ಇದು ಹೆಸರಾಗಿದೆ.

ದೊರೆ ಸಖರಾಯ ಎಂಬುವನು ತನ್ನ ಕಿರಿಯ ಮಗಳನ್ನು ಇಲ್ಲಿಗೆ ವಿವಾಹ ಮಾಡಿಕೊಟ್ಟಿದ್ದರಿಂದ ಈ ಊರಿಗೆ ಚಿಕ್ಕಮಗಳೂರು ಎಂಬ ಹೆಸರು ಬಂದಿದೆ. ಈ ಸ್ಥಳನಾಮದ ಜನಪ್ರಿಯತೆಗೆ ಜಿಲ್ಲೆಯ ಕಡೂರು ತಾಲ್ಲೂಕಿನಲ್ಲಿರುವ ಸಖರಾಯ ಪಟ್ಟಣವು ಪೂರಕವಾಗಿ ಪ್ರತಿಸ್ಪಂದಿಸುತ್ತದೆ. ಜತೆಗೆ ಈಗಿನ ಚಿಕ್ಕಮಗಳೂರಿನ ನಗರಭಾಗವೇ ಎಂಬಂತೆ ತೋರುವ ಹಿರೇಮಗಳೂರು ಕೂಡ ಸಖರಾಯನ ಹಿರೇಮಗಳ ನೆನಪಿಗಾಗಿ  ನಾಮಾಂಕಿತಗೊಂಡಿದೆ ಎಂಬುದು ಇಲ್ಲಿನ ಹಿರಿಯರ ಖಚಿತ ಅಭಿಪ್ರಾಯ.

ಹೀಗಾಗಿ ಚಿಕ್ಕಮಗಳೂರೆಂದು ಸ್ತ್ರೀವಾಚಿಯಾಗಿಯೂ ಜಿಲ್ಲೆಯ ಸ್ಥಳನಾಮವು ಕನ್ನಡಿಗರ ಮನಸೂರೆಗೊಂಡಿದೆ. ಆದರೆ ಕೆಎಸ್‌ಆರ್‌ಟಿಸಿಯ ಕೆಲವು ಬಸ್ಸುಗಳ ನಿರ್ವಾಹಕರು ಪ್ರಯಾಣಿಕರಿಗೆ ಮುದ್ರಿಸಿಕೊಡುತ್ತಿರುವ ಟಿಕೆಟ್‌ಗಳಲ್ಲಿ ಚಿಕ್ಕಮಂಗಳೂರು ಎಂಬುದಾಗಿರುವುದು ಅರಿವಿಗೆ ಬಂದಿದೆ. ಬಸ್ಸುಗಳ ಮಾರ್ಗಸೂಚಿ ಬೋರ್ಡುಗಳಲ್ಲೂ ಶೂನ್ಯ(O)ವನ್ನು ಸೇರಿಸಿ ಚಿಕ್ಕಮಗಳೂರು ಹೆಸರನ್ನು ಚಿಕ್ಕಮಂಗಳೂರೆಂದು ಅರ್ಥಹೀನವಾಗಿ ಬಳಸಲಾಗುತ್ತಿದೆ.

ಇದರೊಂದಿಗೆ ಆಂಗ್ಲ ವ್ಯಾಮೋಹಿ ಧ್ವನಿಯು ಸೇರಿ ಚಿಕ್ಕಮಗಳೂರು ಬಹುತೇಕ ಚಿಕ್ಕಮ್ಯಾಂಗ್‌ಲೂರ್‌ ಆಗಿ ಜನರ ನಾಲಿಗೆಯಿಂದ ಹೊರಹೊಮ್ಮಿ ಹೃದಯಶೂನ್ಯ ಭಾವನೆಗೆ ಕಾರಣವಾಗಿದೆ. ಆದ್ದರಿಂದ ನನ್ನೊಲವಿನ ಚಿಕ್ಕಮಗಳೂರು ಚೆಲುವೆಯ ಹೆಸರು ಇನ್ನಾದರೂ ಸರಿಯಾಗಿ ನಾಲಿಗೆಯಲ್ಲಿ ನಲಿದಾಡಲಿ. ನಾಡ ರಸಿಕರ ಪ್ರೀತಿಯನ್ನು ಸದಾ ಹೀಗೇ ಕಾಯ್ದುಕೊಳ್ಳಲಿ.

ಬೆಟ್ಟಗೆರೆ, ಮೂಡಿಗೆರೆ ತಾಲ್ಲೂಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT