ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾರತಮ್ಯ ಏಕೆ?

Last Updated 11 ಫೆಬ್ರುವರಿ 2013, 13:14 IST
ಅಕ್ಷರ ಗಾತ್ರ

ಪಶುಪಾಲನೆ ಇಲಾಖೆಯಲ್ಲಿ ಅನೇಕ ಪಶುವೈದ್ಯಾಧಿಕಾರಿಗಳ ಹುದ್ದೆಗಳು ಖಾಲಿ ಇದ್ದು ಅಭ್ಯರ್ಥಿಗಳ ಅಲಭ್ಯತೆಯಿಂದ ಸರ್ಕಾರ ಗುತ್ತಿಗೆ ಆಧಾರದ ಸಂಚಿತ ವೇತನದಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಲು ನಿವೃತ್ತ ಪಶುವೈದ್ಯರ ಮರುನೇಮಕಾತಿ ಕ್ರಮ ಕೈಗೊಂಡಿರುವುದು ಸ್ವಾಗತಾರ್ಹ.

ನಿವೃತ್ತರು ಇಲಾಖೆಯಲ್ಲಿ ಸಹಾಯಕ ನಿರ್ದೇಶಕರು ಮತ್ತು ಅದಕ್ಕೂ ಮೇಲ್ಮಟ್ಟದ ಹುದ್ದೆಗಳಲ್ಲಿದ್ದು ಮರುನೇಮಕಾತಿಯಾದಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸಿ, ತಮ್ಮ ಅನುಭವ ಮತ್ತು ಕಾರ್ಯಕ್ಷಮತೆಯಿಂದ ಗ್ರಾಮಾಂತರ ಪ್ರದೇಶದ ರೈತರ ಹಾಗೂ ಜಾನುವಾರುಗಳ ಸೇವೆ ಸಲ್ಲಿಸುವುದು ಸರ್ಕಾರಕ್ಕೆ ತಿಳಿದ ವಿಷಯವೇ. ಅಲ್ಲದೇ ಹುದ್ದೆಗಳು ಗ್ರಾಮಾಂತರ ಪ್ರದೇಶದಲ್ಲಿರುವುದರಿಂದ ದಿನನಿತ್ಯ 50ಕ್ಕೂ ಹೆಚ್ಚು ಕಿ.ಮೀ.ಗಳಷ್ಟು ದೂರ ಕ್ರಮಿಸಬೇಕಾಗುತ್ತದೆ.

ಆದರೆ, ಇಲಾಖೆಯಲ್ಲಿ ಈಗ ಪಶುವೈದ್ಯಾಧಿಕಾರಿಗಳು ಹುದ್ದೆಯ ವೇತನ ್ಙ 28,000/- ಇದೆ. ಆದರೆ ನಿವೃತ್ತ ಪಶುವೈದ್ಯರಿಗೆ ್ಙ13,000/- ಸಂಚಿತ ವೇತನವನ್ನು ನಿಗದಿಪಡಿಸಿರುವುದು,  ಪಶುಚಿಕಿತ್ಸಾಲಯಗಳಲ್ಲಿನ `ಡಿ' ದರ್ಜೆ ನೌಕರರ ವೇತನಕ್ಕೂ ಕಡಿಮೆಯಾಗಿರುವುದು                 ವಿಪರ್ಯಾಸ.

ಆದ್ದರಿಂದ ಸರ್ಕಾರಕ್ಕೆ ನಿಜವಾಗಿಯೂ ರೈತರ ಹಾಗೂ ಜಾನುವಾರು ಅಭಿವೃದ್ಧಿಯಲ್ಲಿ ಕಾಳಜಿ ಇದ್ದಲ್ಲಿ “ಮೂಗಿಗೆ ತುಪ್ಪ ಸವರುವ” ಪ್ರವೃತ್ತಿ ಬಿಟ್ಟು ನಿವೃತ್ತರ ಸಂಚಿತ ವೇತನವನ್ನು ಪರಿಷ್ಕರಣೆ ಮಾಡಲಿ. ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ನಿವೃತ್ತರು ಸೇವೆ ಸಲ್ಲಿಸಲು ಮುಂದೆ ಬಂದಾರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT