ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ದೋಷಿ ಎಂದು ಬಿಂಬಿಸುವುದು ಸರಿಯೆ?

ಅಕ್ಷರ ಗಾತ್ರ

‘ರಾಘವೇಶ್ವರರ ವಿರುದ್ಧ ಹುನ್ನಾರ’ ವರದಿಗೆ ನನ್ನ ಪ್ರತಿಕ್ರಿಯೆ (ಪ್ರ.ವಾ. ಅ.13). ‘ಸಮಾಜದಲ್ಲಿ ದೊಡ್ಡ ಸ್ಥಾನ ಮತ್ತು ಅಧಿಕಾರ ಹೊಂದಿರುವವರ ವಿರುದ್ಧ ಆರೋಪ ಮಾಡುವುದು ಇತ್ತೀಚೆಗೆ ಒಂದು ಚಟವಾಗಿದೆ. ರಾಮ­ಚಂದ್ರಾ­ಪುರ ಮಠದ ರಾಘವೇಶ್ವರ ಸ್ವಾಮಿ­ಗಳ ಮೇಲೆ ಬಂದಿ­ರುವ ಅತ್ಯಾ­ಚಾರದ ಆರೋಪದ ಹಿಂದೆ ಹುನ್ನಾರ ನಡೆ­ದಿ­ರುವ ಸಾಧ್ಯತೆ ಇದೆ’ ಎಂದು ಹಿರಿಯ ವಕೀಲರಾದ ಪ್ರಮೀಳಾ ನೇಸರ್ಗಿ­ಯವರು ಹೇಳಿರುವು­ದಾಗಿ ವರದಿ­ಯಾಗಿದೆ.

ಅಧಿ­ಕಾರ­ಶಾಹಿ ವಿರುದ್ಧ ಸಾಮಾ­ನ್ಯರಿಗೆ, ಅದರಲ್ಲೂ ಮಹಿಳೆ­ಯರಿಗೆ, ನ್ಯಾಯ ಸಿಗುವುದೇ ದುರ್ಲಭ­ವಾಗಿ­ರುವ ಇಂದಿನ ದಿನ­ಗಳಲ್ಲಿ, ಯಾವುದೋ ಒಂದೆರಡು ನಿದರ್ಶನಗಳನ್ನು ಗಮನ­ದಲ್ಲಿಟ್ಟು­ಕೊಂಡು ಸಾರ್ವತ್ರಿಕ­ವೆಂಬಂತೆ, ಒಬ್ಬ ಹಿರಿಯ ವಕೀಲರಾಗಿ ಪ್ರಮೀಳಾ ನೇಸರ್ಗಿ­ಯವರು ಹೀಗೆ ಹೇಳಿ­ರುವುದು ನಿಜಕ್ಕೂ ಅಚ್ಚರಿಯ ಸಂಗತಿ. ವಿಚಾರಣೆ ನಡೆದು ಸ್ವಾಮಿ­ಗಳು ಆರೋಪದಿಂದ ಮುಕ್ತರಾಗುತ್ತಾರೆಂಬ ನಂಬಿಕೆ­ಯನ್ನು ಪ್ರಮೀಳಾ ನೇಸರ್ಗಿಯವರೂ ಸೇರಿ­ದಂತೆ ಯಾರು ಬೇಕಾ­ದರೂ ಇಟ್ಟು­ಕೊಳ್ಳಲು ಸ್ವತಂತ್ರರು.

ಆದರೆ ವಿಚಾರ­­ಣೆಗೆ ಮುನ್ನವೇ ಸ್ವಾಮಿಗಳನ್ನು ನಿರ್ದೋ­ಷಿಗಳೆಂಬಂತೆ ಬಿಂಬಿ­ಸು­ವುದು, ಕಾನೂನನ್ನು ಪ್ರತಿಪಾದಿ­ಸುವ ಹಿರಿಯ ವಕೀಲ­­ರಾದ  ನೇಸರ್ಗಿ­ಯ­ವರಿಗೆ ಅನು­ಚಿತ­ವಾದು­­ದ­ಲ್ಲವೇ? ಬಹುಶಃ ಈ ಹೇಳಿಕೆ ಅವರ ಮೇಲಿ­ಟ್ಟಿರುವ ಅತಿ­ಯಾದ ‘ಸ್ವಾಮಿ­ನಿಷ್ಠೆ’ಯ ಪ್ರತೀಕವೋ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT