ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಾ, ತೆಂಗಿನಕಾಯಿ ಮತ್ತು ಬೆಲೆ

Last Updated 8 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ತೆಂಗಿನ ಮರದಿಂದ ನೀರಾ ಇಳಿಸಲು ಅನು­ವಾ­­ಗಿಸುವಂತೆ ಅಬಕಾರಿ ಕಾಯ್ದೆಗೆ ರಾಜ್ಯ ಸರ್ಕಾರ ತಿದ್ದುಪಡಿ ತರಬೇಕು (ಪ್ರ.ವಾ., ಸೆ. 3) ಎಂದು ಕೇಂದ್ರ ಸಚಿವ  ಅನಂತಕುಮಾರ್ ಹೇಳಿದ್ದಾರೆ.

ತೆಂಗಿನಕಾಯಿ ಬೆಲೆ ಈಗ ರೂ. 25ರಿಂದ ರೂ. 30ಕ್ಕೆ ಏರಿದೆ. ಹೀಗಿರುವಾಗ ನೀರಾಗೆ ಅನು­ಮತಿ ನೀಡಿದರೆ ತೆಂಗಿಗೆ ಬರ ಬರಲಿದೆ. ಆದ್ದ­ರಿಂದ ನಿರ್ಧಾರ ಕೈಗೊಳ್ಳುವ ಮುನ್ನ ಸಾಧಕ–ಬಾಧ­ಕಗಳ ಬಗ್ಗೆ ಗಂಭೀರವಾಗಿ ಪರಿಶೀಲಿಸು­ವುದು ಒಳ್ಳೆ­ಯದು. ಗುಜರಾತ್‌ನಲ್ಲಿ ಈಗಾ­ಗಲೇ ಪಾನ­ನಿರೋಧ ಜಾರಿಯಲ್ಲಿದೆ. ಕೇರಳ­ದಲ್ಲೂ ಮುಂದಿನ 10 ವರ್ಷಗಳಲ್ಲಿ ಹಂತ ಹಂತ­ವಾಗಿ ಪಾನನಿರೋಧ ಜಾರಿಗೆ ತರಲು  ನಿರ್ಧರಿ­ಸ­ಲಾಗಿದೆ.

ನೀರಾದಲ್ಲಿ ಮದ್ಯಸಾರ ಅಂಶ ಇರುತ್ತದೆ ಎಂಬ ಅಭಿಪ್ರಾಯ ಎಲ್ಲೆಡೆ ಇದೆ. ಇದು ಎಷ್ಟ­ರ­ಮಟ್ಟಿಗೆ ನಿಜ ಎಂಬುದು ಗೊತ್ತಿಲ್ಲ. ಅದರಲ್ಲಿ ಔಷಧ ಗುಣವೂ ಇದೆ. ಈ ಗುಣಾವಗುಣಗಳು ಹೇಗಾದರೂ ಇರಲಿ, ಕಾಳಸಂತೆ­ಕೋ­ರರು ಅದ­ರಲ್ಲಿ ಮದ್ಯಸಾರ ಬೆರೆಸಿ  ಲಾಭ­ಕೋರತನಕ್ಕೆ ಇಳಿ­ಯುವುದರಲ್ಲಿ ಸಂಶಯವೇ ಇಲ್ಲ.

ಅಬಕಾರಿ­ಯಿಂದ ಸರ್ಕಾರಕ್ಕೆ ಸಾವಿರಾರು ಕೋಟಿ ರೂಪಾಯಿ ಆದಾಯ ಇದೆ. ಅಂತೆಯೇ ಸಾವಿರಾರು ಕುಟುಂಬ­­ಗಳು ಈ ಮದ್ಯದಿಂದಲೇ ಬೀದಿ­ಪಾಲಾ­ಗುತ್ತಿವೆ ಎಂಬುದನ್ನು ಮರೆಯು­ವಂತಿಲ್ಲ. ಪಾನ ನಿರೋಧದ ಸಾಧ್ಯತೆಗಳ ಬಗ್ಗೆ ನಮ್ಮ ಸರ್ಕಾರವೂ ಯೋಚಿಸಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT