ಬೇಸಿಗೆ ಈಗಾಗಲೆ ಪ್ರಾರಂಭವಾಗಿದೆ. ಬಿಸಿಲಿನ ಪ್ರಖರತೆಗೆ ಕೆರೆಕಟ್ಟೆ, ನದಿಗಳ ಒಡಲು ಬರಿದಾಗುತ್ತಿದೆ. ನೀರಿನ ಬವಣೆ ಪ್ರಾರಂಭವಾಗಿದೆ. ಮನುಷ್ಯರಾದರೋ ನೀರನ್ನು ಸಂಗ್ರಹಿಸಿ ಬಳಕೆ ಮಾಡುತ್ತಾರೆ. ಆದರೆ ಜಾನುವಾರುಗಳು, ಪಕ್ಷಿಗಳು?

ಕೆಲವು ದಯಾಳುಗಳು ತಮ್ಮ ಮನೆಯ ಮುಂದಿನ ಮರಗಳಿಗೆ ಮಣ್ಣಿನ ಪಾತ್ರೆಗಳನ್ನು ತೂಗು ಹಾಕಿ ನಿತ್ಯವೂ ನೀರು ತುಂಬಿಸಿ ಪಕ್ಷಿಗಳ ದಾಹ ತಣಿಸುತ್ತಿದ್ದಾರೆ. ನಿಜಕ್ಕೂ ಇದು ಮೇಲ್ಪಂಕ್ತಿ.

ಬೇಸಿಗೆಯಲ್ಲಿ ನೀರಿಗಾಗಿ ತಡಬಡಾಯಿಸುವ ನಾವು ಪಶುಪಕ್ಷಿಗಳ ಬಗ್ಗೆ ಗಮನವನ್ನೇ ಹರಿಸುವುದಿಲ್ಲ. ಬೇಸಿಗೆಯಲ್ಲಿ ಇದ್ದ ನೀರಿನ ಮೂಲಗಳು ಬತ್ತಿದಾಗ ಅವುಗಳ ಗೋಳು ಹೇಳತೀರದು. ಹಾಗಾಗಿ ಪ್ರತಿಯೊಬ್ಬರೂ ಪಶು ಪಕ್ಷಿಗಾಗಿ ತಮ್ಮ ಮನೆಯ ಮುಂಭಾಗದಲ್ಲಿ ಸಣ್ಣ ಪಾತ್ರೆಯಲ್ಲಿ ನೀರು ತುಂಬಿಸಿಟ್ಟು ಮಾನವೀಯತೆ ಮೆರೆಯೋಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.