ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತ್ಯೇಕತೆಯ ಜಯಂತಿ

ಅಕ್ಷರ ಗಾತ್ರ

ಮಹಾನ್ ಪುರುಷರ ಜಯಂತ್ಯುತ್ಸವಗಳನ್ನು ಸರ್ವರೂ ಆಚರಿಸಬೇಕೆಂಬ ಇರಾದೆಯಿಂದ ಅಧಿಕೃತ ರಜೆಗಳನ್ನು ಘೋಷಿಸಿರುವ ಸರ್ಕಾರದ ನಿಲುವು ಸರಿಯಾಗಿದೆ. ಆದರೆ ಈ ಜಯಂತಿಗಳ ಹಿಂದಿನ ಸದುದ್ದೇಶಗಳು ಎಷ್ಟರಮಟ್ಟಿಗೆ ಈಡೇರಿವೆ ಎಂಬುದು ಪ್ರಶ್ನಾರ್ಹ.

ಶತಶತಮಾನಗಳಿಂದ ಜಾತೀಯತೆಯಿಂದ ನಲುಗಿ ಹೋಗಿದ್ದ ನೊಂದ ಮನಸ್ಸುಗಳಿಗೆ ಹೊಂಗಿರಣಗಳಂತೆ ಮೂಡಿಬಂದ ವಚನಕಾರರು, ಕೀರ್ತನಕಾರರು ತಮ್ಮ ತತ್ವಗಳಲ್ಲಿ, ಸಂದೇಶಗಳಲ್ಲಿ ಹೇಳಿರುವುದನ್ನು ಕಿಂಚಿತ್ತಾದರೂ ಮನಗಾಣದ ಮತೀಯವಾದಿಗಳು ಹಾಗೂ ಸಮುದಾಯ ಸಂಘಟನೆಗಳು ತಮ್ಮದೇ ಆದ ಆಡಂಬರದ ಗೊಡ್ಡು ಆಚರಣೆಗಳಲ್ಲಿ ಮುಳುಗಿವೆ.

ಸಾಮಾಜಿಕ ಸಮಾನತೆಯನ್ನು ಬಲವಾಗಿ ಪ್ರತಿಪಾದಿಸಿದ ಬಸವಣ್ಣನನ್ನು, ಕುಲದ ನೆಲೆ ಯಾವುದೆಂದು ಪ್ರಶ್ನಿಸಿದ ಕನಕದಾಸನನ್ನು ಕೇವಲ ಒಂದು ಸಮುದಾಯಕ್ಕೆ ಸೀಮಿತಗೊಳಿಸಿ, ಅವರ ಮೂಲ ತತ್ವಗಳನ್ನೇ ಧಿಕ್ಕರಿಸಿ ಮತೀಯ ಚೌಕಟ್ಟಿನಲ್ಲಿ ಅವರನ್ನು ಸಮರ್ಥಿಸಿಕೊಳ್ಳುವುದು ಸಮಾಜ ಸ್ವಾಸ್ಥ್ಯದ ಹರಣ.

ಸಂವಿಧಾನದಲ್ಲಿ ಮಾತ್ರ ನಮ್ಮದು ಜಾತ್ಯತೀತ ರಾಷ್ಟ್ರ. ಆದರೆ ಎಲ್ಲೆಡೆಯಲ್ಲೂ ಜಯಂತಿಗಳು ಜಾತಿ ಪ್ರತ್ಯೇಕತೆಯ ಆಯಾಮಗಳಲ್ಲಿ ಸ್ಪರ್ಧಾತ್ಮಕವಾಗಿ ಜರುಗುತ್ತಲೇ ಇವೆ.

ಪ್ರತಿಯೊಬ್ಬರ ಮನಪರಿವರ್ತನೆಯಾಗದ ಹೊರತು ಮತ್ಯಾವ ಸಮಾಜ ಸುಧಾರಕರ ಅವತಾರದಿಂದಲೂ ಪರಿಹಾರವಾಗದ ವಾಸ್ತವ ಸಮಸ್ಯೆ ಇದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT