ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯಾಣಿಕರ ಮೇಲೆ ದಯೆ ಇರಲಿ

Last Updated 13 ಮೇ 2014, 19:30 IST
ಅಕ್ಷರ ಗಾತ್ರ

ದೂರ ಪ್ರಯಾಣದ ಕೆಎಸ್‌ಆರ್‌ಟಿಸಿ ಲಕ್ಷುರಿ ಬಸ್ಸುಗಳು ಈಗ ಚಲಿಸುವ  ತಿಗಣೆ  ಸಾಕಣೆ  ಕೇಂದ್ರಗಳಾಗಿ  ಮಾರ್ಪಾಟಾಗಿವೆ. ಈ ಬಸ್ಸುಗಳಲ್ಲಿ ರಾತ್ರಿ ದೂರ ಪ್ರಯಾಣ ಮಾಡುವವರು ಒಂದು ಯೂನಿಟ್  ರಕ್ತದಾನಕ್ಕಾದರೂ ಸಿದ್ಧರಾಗಿರಬೇಕು.

ಈ ‘ತಿಗಣೆ- ಸಾರಿಗೆ’ ಬಸ್ಸುಗಳಲ್ಲಿ ಒಮ್ಮೆ ಪ್ರಯಾಣಿಸಿದರೆ  ತಿಗಣೆ ಮತ್ತು ಪ್ರಯಾಣಿಕನ  ರಕ್ತ ಸಂಬಂಧ ಅಲ್ಲಿಗೇ ಮುಗಿಯುವುದಿಲ್ಲ. ಕಾರಣ ಈ ಬಸ್ಸಿನ  ಕೆಲವು ಸ್ನೇಹಮಯಿ  ತಿಗಣೆಗಳು ತಮ್ಮ ಕುಟುಂಬ ಸಮೇತ ನಮ್ಮ ಬಟ್ಟೆ ಬ್ಯಾಗುಗಳಲ್ಲಿ ಸೇರಿಕೊಂಡು ನಮ್ಮ ಮನೆಗೂ ವಲಸೆ ಬಂದು ಅಲ್ಲಿಯೂ ತಮ್ಮ ಸಂಸಾರ ಭರ್ಜರಿಯಾಗಿ ಬೆಳೆಸುತ್ತವೆ.  ಸರ್ಕಾರಿ ಬಸ್ಸಿನವರು ಇದರ ನಿರ್ಮೂಲನೆಯ ಕೆಲಸದ ಹೊರಗುತ್ತಿಗೆ ಯಾಕೆ ಕೊಡುತ್ತಿಲ್ಲ ಎನ್ನುವುದು ಅರ್ಥವಾಗುತ್ತಿಲ್ಲ.                                                  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT