ಮುಖ್ಯಮಂತ್ರಿ ಸದಾನಂದಗೌಡರು ಬಿ.ಎಸ್.ಯಡಿಯೂರಪ್ಪ ಅವರ ಮಾದರಿಯಲ್ಲಿಯೇ ಬಜೆಟ್ ಮಂಡಿಸುವುದಾಗಿ ಹೇಳಿದ್ದಾರೆ. `ನಾನು ಕರ್ನಾಟಕದ ಜನರ ಕೂಲಿಯಾಳು, ನಾನು ಯಾರೊಬ್ಬರ ಸೊತ್ತಲ್ಲ~ ಎಂದು ಸ್ವಾಭಿಮಾನದ ಮಾತನಾಡಿದ್ದ ಅವರು ಈಗ ಯಡಿಯೂರಪ್ಪಮಾದರಿಯನ್ನು ಅನುಸರಿಸುವ ಮಾತುಗಳನ್ನು ಆಡುತ್ತಿರುವುದು ದುರದೃಷ್ಟಕರ ಬೆಳವಣಿಗೆ.

ಯಡಿಯೂರಪ್ಪ ಮಠ ಮಾನ್ಯಗಳಿಗೆ ಬಜೆಟ್ನಲ್ಲಿ ಹಣ ನೀಡುವ ಮೂಲಕ ಕೆಟ್ಟ ಪರಂಪರೆಯನ್ನು ಹಾಕಿದರು. ಯಡಿಯೂರಪ್ಪ ಅವರಿಂದ ಆರ್ಥಿಕ ಲಾಭ ಪಡೆದ ಮಠಾಧಿಪತಿಗಳು ತಮ್ಮ ಘನತೆಯನ್ನೂ ಮರೆತು ಅವರನ್ನು ಓಲೈಸುತ್ತಿದ್ದಾರೆ. ಮಠಾಧಿಪತಿಗಳ ನಡವಳಿಕೆಗಳಿಂದ ರಾಜ್ಯದ ಜನರಿಗೆ ಭ್ರಮನಿರಸನ ಆಗಿದೆ.

ಈಗ ಯಡಿಯೂರಪ್ಪನವರ ಮಾದರಿ ಎಂದರೆ ಮಠಗಳಿಗೆ ಹಣ ಕೊಡುವ ಕೆಟ್ಟ ಪರಂಪರೆ ಅಲ್ಲವೇ? ಕಳೆದ ಮೂರು ವರ್ಷಗಳ ಆಯವ್ಯಯದಲ್ಲಿ ಅವರು ಅನುತ್ಪಾದಕ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಸಾವಯವ ಕೃಷಿಯೂ ಸೇರಿದಂತೆ ರೈತರ ಅನುಕೂಲಕ್ಕಾಗಿ ರೂಪಿಸಿದ ಕಾರ್ಯಕ್ರಮಗಳೆಲ್ಲವೂ ವಿಫಲವಾಗಿವೆ. ಅಂತಹ ದುಃಸ್ಸಾಹಸಕ್ಕೆ ಸದಾನಂದ ಗೌಡರು ಕೈಹಾಕಬಾರದು.

ಬಜೆಟ್ ಮಂಡನೆಯಲ್ಲಿ ಯಡಿಯೂರಪ್ಪನವರ ಸಲಹೆಯನ್ನೂ ಕೇಳುವ ಅಗತ್ಯವಿಲ್ಲ. ಎಲ್ಲ ವಿಚಾರಗಳಲ್ಲೂ ಗೌಡರು ಮುಖ್ಯಮಂತ್ರಿಗಳು. ಇದರಲ್ಲಿ ಬೇರೆಯವರ ಹಸ್ತಕ್ಷೇಪಕ್ಕೆ ಅವಕಾಶ ಇರಬಾರದು. ಬಜೆಟ್ ಮಂಡನೆಯಲ್ಲಿ ಗೌಡರು ಸ್ವಂತಿಕೆಯನ್ನು ತೋರಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.