ರಾಜ್ಯದಲ್ಲಿ ಶೀಘ್ರದಲ್ಲೇ ಮುಂಗಾರು ಪ್ರವೇಶಿಸಲಿದ್ದು, ರೈತಸಮುದಾಯ ಹದಗೊಳಿಸಿರುವ ಜಮೀನಿನೊಂದಿಗೆ ಹರ್ಷೋನ್ಮುಖರಾಗಿ ಮುಂಗಾರು ಮಳೆಯನ್ನು ಸ್ವಾಗತಿಸಲು ಕಾತರರಾಗಿದ್ದಾರೆ.

ಕೃಷಿಗೆ ಪೂರಕ ಬಿತ್ತನೆ ಬೀಜ, ಸಾವಯವ ಗೊಬ್ಬರ, ಕ್ರಿಮಿನಾಶಕ ರಾಸಾಯನಿಕಗಳನ್ನು ಪೂರೈಸುವುದು ಸರ್ಕಾರದ ಆದ್ಯಕರ್ತವ್ಯ. ಆದರೆ ರಾಜ್ಯದ ಅನೇಕ ತಾಲೂಕು ಕೃಷಿಕೇಂದ್ರಗಳಲ್ಲಿ ಸಾಕಷ್ಟು ಬಿತ್ತನೆ ಬೀಜ,ರಸಗೊಬ್ಬರಗಳ ದಾಸ್ತಾನು ಇಲ್ಲದಿರುವುದು ರೈತರನ್ನು ಆತಂಕಕ್ಕೆ ಈಡುಮಾಡಿದೆ.

ಬರಗಾಲ, ಅತಿವೃಷ್ಟಿ,ಆಲಿಕಲ್ಲಿನ ಅಕಾಲ ಮಳೆಯಿಂದ ಪ್ರತಿವರ್ಷ ಒಂದಿಲ್ಲೊಂದು ರೀತಿ ನಷ್ಟದಲ್ಲಿರುವ ರೈತ ಈ ಬಾರಿಯಾದರೂ ಒಳ್ಳೆ ಫಸಲಿನ ನಿರೀಕ್ಷೆಯಲ್ಲಿದ್ದಾನೆ. ಸರ್ಕಾರ ರೈತರ ಬೇಡಿಕೆಗೆ ಅನುಗುಣವಾಗಿ ದಾಸ್ತಾನು ಒದಗಿಸಲಿ. ಕೃಷಿ ಅಧಿಕಾರಿಗಳು ರೈತರಿಗೆ ಲಾಭಕರ ಬೆಳೆಗಳ ಬಗ್ಗೆ ಮಾಹಿತಿಯನ್ನು ನೀಡಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.