ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಕು ಇಚ್ಛಾಶಕ್ತಿ

Last Updated 15 ಜುಲೈ 2016, 19:30 IST
ಅಕ್ಷರ ಗಾತ್ರ

ಮಳೆನೀರು ಸಂಗ್ರಹ ಕಡ್ಡಾಯಗೊಳಿಸುವ ಕಾಯ್ದೆಗೆ ತಂದಿರುವ ತಿದ್ದುಪಡಿಗೆ  ವಿಧಾನಸಭೆಯಲ್ಲಿ ಅಂಗೀಕಾರ ದೊರೆತಿದೆ. ಈ ತಿದ್ದುಪಡಿಯ ಅಗತ್ಯ ಏನಾದರೂ ಆಗಿರಲಿ.ಆದರೆ  ಮಳೆನೀರು ಸಂಗ್ರಹ  ಅಗತ್ಯವಾಗಿ ಆಗಬೇಕಾಗಿರುವ ಕೆಲಸ. ದಂಡ ಭಯದ ಮೂಲಕವಾದರೂ ಅದನ್ನು ಜಾರಿಗೆ ತರಬೇಕಾದುದು ಅನಿವಾರ್ಯ.

ಮಳೆ ನೀರನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳುವುದರಿಂದ ಆಗುವ ವಿವಿಧ ಪ್ರಯೋಜನಗಳ ಬಗ್ಗೆ ಜನರಲ್ಲಿ ತಿಳಿವಳಿಕೆ ಮೂಡಿಸುವುದು ಅಗತ್ಯ. ಬಹಳ  ದೂರದಿಂದ ನಗರಗಳಿಗೆ ನೀರು ಪೂರೈಸುವ ಹೊರೆ ಕೂಡ ಇಳಿಸಬಹುದು. ನೀರನ್ನು ಇಂಗಿಸಿದರೆ ಜಲ ಮರುಪೂರಣ ಆಗುತ್ತದೆ. ಅಂತರ್ಜಲ ಮಟ್ಟ ಏರುತ್ತದೆ. ಹೀಗಾಗಿ ಮಳೆನೀರು ಸಂಗ್ರಹಕ್ಕೆ ಜನರು ಮುಂದಾಗಬೇಕು. ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಅಧಿಕಾರಿಗಳು ಇಚ್ಛಾಶಕ್ತಿ ಪ್ರದರ್ಶಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT