ಮುಂದಿನ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಒಂದು ಪಕ್ಷ ಅಧಿಕಾರಕ್ಕೆ ಬಂದರೆ ರಾಜಕೀಯದಿಂದ ನಿವೃತ್ತನಾಗುತ್ತೇನೆ ಎಂದಿದ್ದಾರೆ ಎಚ್.ಡಿ. ದೇವೇಗೌಡರು. ಅವರು ಎಂದಾದರೂ ಆಡಿದಂತೆ ನಡೆದುಕೊಂಡಿದ್ದಾರಾ ಎಂಬುದನ್ನು ಮೊದಲು ನೆನಪಿಸಿಕೊಳ್ಳಲಿ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ, ಇದು ನನ್ನ ಕೊನೆಯ ಚುನಾವಣೆ, ಜಾತ್ಯತೀತ ಜನತಾದಳವನ್ನು (ಜೆಡಿಎಸ್) ಅಧಿಕಾರಕ್ಕೆ ತಾರದಿದ್ದಲ್ಲಿ ನನಗೊಂದು ತೊಟ್ಟು ವಿಷ ಕೊಟ್ಟು ಬಿಡಿ ಎಂದು ಜನರ ಬಳಿ ಅತ್ತಿದ್ದರು. ಫಲಿತಾಂಶ ಏನಾಯ್ತು? ಎಲ್ಲರಿಗೂ ತಿಳಿದಿದೆ. ಇನ್ನು ಅವರ ಸುಪುತ್ರ ವಚನಭ್ರಷ್ಟರಾಗಿ ೨೦--–೨೦ ಪಂದ್ಯದಿಂದ ಹೊರನಡೆದಿದ್ದನ್ನು ರಾಜ್ಯದ ಜನತೆ ಮರೆತಿಲ್ಲ. ವಚನ ಭ್ರಷ್ಟತೆ ಗೌಡರಿಗೂ ಹೊಸತೇನಲ್ಲ. ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟಬೇಕೆನ್ನಿಸುವ ಅವರಿಗೆ ಈ ಜನ್ಮದಲ್ಲಿಯೇ ಸರಿಯಾದ ನಿಲುವುಗಳಿಲ್ಲ. ಅವರ ಭ್ರಮೆ ಬಗ್ಗೆ ಕನಿಕರ ಮೂಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.