ಜ್ಯೋತಿಷಶಾಸ್ತ್ರ ಮುಂತಾದ ಮೂಢನಂಬಿಕೆಗಳೆಲ್ಲಾ ತೀರಾ ವಯಕ್ತಿಕ ವಿಷಯಗಳು. ಕೆಲವರು ಅದನ್ನು ವಂಚನೆಯ ಮತ್ತು ಸಂಪಾದನೆಗಾಗಿ ಬಳಸಿಕೊಂಡರೆ ಮತ್ತೆ ಕೆಲವರು ಅಂತಹ ವಂಚನೆಗೆ ನಿತ್ಯ ತಲೆ ಕೊಡುತ್ತಲೇ ಜೀವನ ಸವೆಸುತ್ತಾರೆ.

ಒಟ್ಟಿನಲ್ಲಿ ಇವರ ಸಂಖ್ಯೆ ಸಮಾಜದಲ್ಲಿ ತೀರಾ ಕಮ್ಮಿ. ಪ್ರಶ್ನೆ ಏನೆಂದರೆ ಇಂತಹ ವಂಚನೆಯ ವಯಕ್ತಿಕ ವಿಷಯಗಳನ್ನು ಸಾರ್ವತ್ರೀಕರಣಗೊಳಿಸುತ್ತಿರುವುದು ದುರಂತ.

ಇಡೀ ಒಂದು ಜಿಲ್ಲೆಯೇ ಶಾಪಗ್ರಸ್ತವಾಗಿದೆ ಎಂದು ಅದರ ಶಾಪವನ್ನು ಬಿಡಿಸುತ್ತೇವೆಂದು ಸರ್ಕಾರಿ ಬೊಕ್ಕಸದ ವೆಚ್ಚದಲ್ಲಿ ಮಾಡುತ್ತಿರುವುದು ವಿಪರ್ಯಾಸ.

ರಾಜ್ಯದ ಬೊಕ್ಕಸದ ಹಣವನ್ನು ಇಂತಹ ವಂಚನೆಯ, ಮೂಢನಂಬಿಕೆಗೆ ಬಳಸಿ ಬರೋಬ್ಬರಿ 12 ಲಕ್ಷ ರೂಪಾಯಿಯ ದುಂದುವೆಚ್ಚದ ಕ್ರಿಯೆ ನಡೆದಿರುವುದು ಚಾಮರಾಜನಗರದಲ್ಲಿ. ಅದೂ ಆ ನಗರದ ಹಿತಚಿಂತನೆಯ ಹೆಸರಲ್ಲಿ! ನಮ್ಮ ಜಿಲ್ಲೆ ಶಾಪಗ್ರಸ್ತವಲ್ಲ, ನಾವು ಶಾಪಗ್ರಸ್ತ ಜನರಲ್ಲ ಎಂದು ಜನರು ಎದೆ ತಟ್ಟಿ ಸ್ವಾಭಿಮಾನಿಗಳಾಗಿ ಇದನ್ನೆಲ್ಲ ಪ್ರತಿಭಟಿಸಬೇಕಿತ್ತು.

ಲಕ್ಷಾಂತರ ರೂಪಾಯಿಯನ್ನು ಸರ್ಕಾರ ಖರ್ಚು ಮಾಡಬೇಕಿರುತುವುದು ಹೋಮಹವನಕ್ಕಲ್ಲ! ನಮ್ಮೂರಿನ ಕಿತ್ತುಹೋದ ರಸ್ತೆಗಳಿಗೆ, ಕೊಠಡಿಗಳಿಲ್ಲದ ಶಾಲೆಗಳಿಗೆ, ಶೌಚಾಲಯಗಳಿಲ್ಲದ ಮನೆಗಳಿಗೆ, ಸೂರಿಲ್ಲದ ಬಡವರಿಗೆ ಎಂಬುದನ್ನು ಸರ್ಕಾರದ ಕಿವಿ ಕಿತ್ತು ಹೋಗುವ ಹಾಗೆ ಕೂಗಿ ಹೇಳಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.