ರಾಜ್ಯದ ಸೌಮ್ಯ ಸ್ವಭಾವದ ಕೆಲವೇ ನಾಯಕರಲ್ಲಿ ಡಾ. ಜಿ. ಪರಮೇಶ್ವರರೂ ಒಬ್ಬರು. ಬೆಂಗಳೂರಿನಲ್ಲಿ ನಡೆದ ‘ಸಾರ್ಥಕ ಸಮಾವೇಶ’ದಲ್ಲಿ ದಲಿತರ ಸ್ಥಿತಿ ಬಗ್ಗೆ ಅವರು ಹೇಳಿದ ಮಾತು ಮನ ಕದಡಿತು. ದಲಿತನಾಗಿ ಬಾಲ್ಯದ ದಿನಗಳನ್ನು ನೆನೆಯುತ್ತಾ ಕ್ಷೌರದ ಅಂಗಡಿಯವರು ತಮ್ಮ ಸಮುದಾಯದ ಜನರಿಗೆ ಕ್ಷೌರ ಮಾಡಲು ನಿರಾಕರಿಸುತ್ತಿದ್ದುದರಿಂದ, ತಮ್ಮ ತಂದೆಯೇ ತಮಗೆ ಕ್ಷೌರ ಮಾಡುತ್ತಿದ್ದರು ಎಂದೂ, ಅನ್ಯರ ಮನೆಗಳಲ್ಲಿ ಕುಡಿಯಲು ನೀರನ್ನು ಲೋಟದಲ್ಲಿ ಕೊಡದೆ ಮೇಲಿಂದ ನೀರನ್ನು ಸುರಿಯುತ್ತಿದ್ದರೆಂದು ನೆನೆದು ಕಣ್ಣೀರಿಟ್ಟರೆಂಬ ವರದಿ (ಪ್ರ.ವಾ., ಅ. 31) ಓದಿ ದುಃಖ ಒತ್ತರಿಸಿತು.
ರಾಷ್ಟ್ರಕ್ಕೆ ಸ್ವಾತಂತ್ರ ಬಂದು ಆರೂವರೆ ದಶಕಗಳು ಕಳೆದರೂ ಇಂಥ ಸ್ಥಿತಿ ಪೂರ್ತಿ ನಿವಾರಣೆ ಆಗಿಲ್ಲ. ಇದು ವಿಪರ್ಯಾಸ. ಆದರೆ ‘ದಲಿತರನ್ನು ಅಪಮಾನ ಮಾಡುವ ಸಿದ್ಧಾಂತವನ್ನು ನೆಚ್ಚಿಕೊಂಡವರು ಬಿಜೆಪಿಯವರು’ ಎಂದು ಪರಮೇಶ್ವರ್ ಹೇಳಿರುವುದು ಸರಿಯಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.