ಚಿತ್ರದುರ್ಗವು ಐತಿಹಾಸಿಕ ಮತ್ತು ಚಾರಿತ್ರಿಕ ಹಿನ್ನೆಲೆ ಹೊಂದಿದ್ದು, ಕರ್ನಾಟಕದಲ್ಲೇ ತನ್ನದೇ ಆದ ಛಾಪು ಮೂಡಿಸಿ, `ಏಳು ಸುತ್ತಿನ ಕೋಟೆ~ ಹೊಂದಿ ಪ್ರಖ್ಯಾತಿ ಹೊಂದಿದೆ.

`ಒನಕೆ ಓಬವ್ವ~ ಯಾರಿಗೆ ಗೊತ್ತಿಲ್ಲ? ರಾಜ್ಯ ಸರ್ಕಾರವು ಐತಿಹಾಸಿಕ ಪ್ರಸಿದ್ಧಿ ಹೊಂದಿರುವ ಜಿಲ್ಲೆಗಳಲ್ಲಿ ಉತ್ಸವಗಳನ್ನು ಆಚರಿಸಲು ತೀರ್ಮಾನಿಸಿ ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ 1991 ರಲ್ಲಿ ದುರ್ಗೋತ್ಸವ ಆಚರಿಸಲಾಯಿತು.

ಆನಂತರ 1992 ರಲ್ಲಿ ಪ್ರತಿ ವರ್ಷ ಉತ್ಸವವನ್ನು ಆಚರಿಸಬೇಕೆಂಬ ತೀರ್ಮಾನದ ಹಿನ್ನೆಲೆಯಲ್ಲಿ ವೈಭವೋಪೇತವಾಗಿ ಆಚರಿಸಲು ನಿರ್ಣಯಿಸಲಾಗಿತ್ತು. ಆದರೆ ಆ ವರ್ಷ ಪ್ರಾರಂಭಿಕ ತಯಾರಿ ಮಾಡಲಾಗಿದ್ದರೂ ಅತಿವೃಷ್ಟಿಯಿಂದ ಉತ್ಸವ ಮುಂದೂಡಲಾಯಿತು. ನಂತರ ಅದು ಹಾಗೆಯೇ ಸತತವಾಗಿ ಒಂದಲ್ಲಾ ಒಂದು ಕಾರಣದಿಂದ 6 ವರ್ಷಗಳ ಕಾಲ ಮುಂದೂಡಲ್ಪಡುತ್ತಾ ಬಂದಿತು.

1998 ರಲ್ಲಿ ಸ್ವಲ್ಪ ಮಟ್ಟಿಗೆ ಬರಗಾಲದ ಛಾಯೆಯಿದ್ದರೂ, ಹಲವಾರು ಅಡಚಣೆಗಳು ಬಂದರೂ ಚಿತ್ರದುರ್ಗದ ಹಿರಿಮೆ, ಪರಂಪರೆ, ಸಂಸ್ಕೃತಿಗಳ ಬಗ್ಗೆ ಅಭಿಮಾನ ಹೊಂದಿರುವ ಹಿರಿಯರು `ದುರ್ಗೋತ್ಸವ 98~ ರಲ್ಲಿ ಆಚರಿಸಲು ಸಹಕಾರಿಯಾದರು!

ಚಿತ್ರದುರ್ಗದ ಅಭಿವೃದ್ಧಿಗೆ ಪೂರಕವಾಗಿ ಹಮ್ಮಿಕೊಂಡಿದ್ದ `ಪ್ರವಾಸೋದ್ಯಮ~ ಹಾಗೂ `ಜಿಲ್ಲಾ ಅಭಿವೃದ್ಧಿ~ ಕುರಿತ ವಿಚಾರ ಸಂಕಿರಣಗಳು ಮತ್ತು ಕವಿಗೋಷ್ಠಿ ತಮ್ಮದೇ ಆದ ಅರ್ಥಪೂರ್ಣ ಕಳೆ ನೀಡಿದವು.

ಅಂದಿನಿಂದ ನಡೆದು ಬಂದ ಆಚರಣೆ ಇಂದಿಗೂ ಕೂಡ ಹಂಪಿ, ಬಾದಾಮಿ, ಮೈಸೂರು, ಕಿತ್ತೂರು, ಇನ್ನಿತರೆ ಪ್ರವಾಸಿ ತಾಣಗಳಲ್ಲಿ ಪ್ರತಿ ವರ್ಷ ನಡೆಯುತ್ತಿದ್ದ ಜಿಲ್ಲಾ ಉತ್ಸವ ಕಾಲಾನುಕ್ರಮೇಣ ಇವುಗಳನ್ನು ಮೂರು ವರ್ಷಕ್ಕೊಮ್ಮೆ ಮಾರ್ಪಾಡು ಮಾಡಲಾಯಿತು.

ಅಂತೆ ಚಿತ್ರದುರ್ಗ ಮರೆತು ಬೇರೆ ಕಡೆ ಉತ್ಸವಗಳನ್ನು ಆಚರಿಸುತ್ತಾ ಬಂದಿದ್ದು, ದುರ್ಗವನ್ನು ಮರೆತಿರುವುದು ದುರ್ಗದ ದುರಂತವೇ ಸರಿ! ಹೈದರಾಲಿಯ ವಿರುದ್ಧ ಹೋರಾಡಿದ ವೀರ ಮದಕರಿ ನಾಯಕನಿಗೆ ಸಲ್ಲಿಸುವ (ಅ) ಗೌರವವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.