ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ವಿಭಜಕದಲ್ಲಿ ಗೋಡೆ ನಿರ್ಮಿಸಿ

ಕುಂದು ಕೊರತೆ
Last Updated 30 ಮೇ 2016, 19:30 IST
ಅಕ್ಷರ ಗಾತ್ರ

ಆನಂದರಾವ್‌ ವೃತ್ತದಿಂದ ಕೃಷ್ಣರಾಜೇಂದ್ರ ವರ್ತುಲದ ಮಧ್ಯೆ ಇರುವ ಶೇಷಾದ್ರಿ ರಸ್ತೆಯ ಸ್ವಾತಂತ್ರ್ಯ ಉದ್ಯಾನವನದಿಂದ ಕೆ.ಆರ್‌. ವರ್ತುಲ ಮಧ್ಯದ ರಸ್ತೆಯ ಎರಡೂ ಬದಿಗೆ ಮಹಾರಾಣಿ ಕಲೆ, ವಿಜ್ಞಾನ, ವಾಣಿಜ್ಯ, ಕೇಂದ್ರೀಯ ಗೃಹವಿಜ್ಞಾನ ಮಹಾವಿದ್ಯಾಲಯ, ಜಯಚಾಮರಾಜೇಂದ್ರ ಪಾಲಿಟೆಕ್ನಿಕ್‌ ಮತ್ತು ಇತರ ವಿದ್ಯಾಸಂಸ್ಥೆಗಳಿವೆ. ಮಲ್ಲೇಶ್ವರ, ಯಶವಂತಪುರ, ಗಾಯತ್ರಿನಗರ, ನಂದಿನಿ ಬಡಾವಣೆಗಳಿಂದ, ರಾಜಾಜಿನಗರ ಭಾಗಗಳಿಂದ ಬರುವ ವಿದ್ಯಾರ್ಥಿಗಳು ಜೆ.ಸಿ. ಪಾಲಿಟೆಕ್ನಿಕ್‌ ಬಳಿಯ ಬಸ್‌ ನಿಲ್ದಾಣದಲ್ಲಿ ಇಳಿಯುತ್ತಾರೆ.

ಶಿವಾಜಿಗರ, ಬಾಬುಸಾಬನಪಾಳ್ಯ, ಹೆಗಡೆನಗರ ಮುಂತಾದ ಭಾಗಗಳಿಂದ ಬರುವ ವಿದ್ಯಾರ್ಥಿಗಳು ಶೇಷಾದ್ರಿ ರಸ್ತೆಯಲ್ಲಿರುವ ಕೃಷಿ ಕಲಾಖೆಯ ಕಚೇರಿಯ ಬಳಿ ಇಳಿದು ರಸ್ತೆ ದಾಟಿ ಮಹಾವಿದ್ಯಾಲಯಗಳಿಗೆ ಹೋಗಬೇಕಾಗುತ್ತದೆ. ವಿದ್ಯಾರ್ಥಿಗಳ ಅನುಕೂಲಕ್ಕೆ ಸುರಂಗ ಪಾದಚಾರಿ ಮಾರ್ಗ ನಿರ್ಮಿಸಲಾಗಿದೆ. ಶೇಷಾದ್ರಿ ರಸ್ತೆಯು ಏಕಮುಖಿ ರಸ್ತೆಯಾಗಿದ್ದು ವಾಹನಗಳ ಸುಗಮ ಸಂಚಾರಕ್ಕೆ ಇದರಿಂದ ತೊಂದರೆಯಾಗುತ್ತಿದೆ. ಸ್ವಾತಂತ್ರ್ಯ ಉದ್ಯಾನವನದಿಂದ ಕೆ.ಆರ್‌. ವೃತ್ತದವರೆಗೆ ರಸ್ತೆ ವಿಭಜಕವನ್ನು ನಿರ್ಮಿಸಲಾಗಿದೆ.

ವಿಭಜಕ ಕೇವಲ ಒಂದಡಿ ಎತ್ತರವಿರುವದರಿಂದ ಕಾಲೇಜಿಗೆ ಬರುವ, ಹೋಗುವ, ವಿವಿಧ ಕಚೇರಿಗಳಿಗೆ ಹೋಗುವವರು ವಾಹನನಿಬಿಡ ರಸ್ತೆಯಲ್ಲಿ ವಿಭಜಕವನ್ನು ದಾಟಲು ಪ್ರಯತ್ನಿಸುತ್ತಾರೆ. ಇದರಿಂದಾಗಿ ಅವಘಡ, ಅಪಘಾತ ಸಂಭವಿಸುವ ಸಾಧ್ಯತೆಗಳಿವೆ. ಮಹಿಳಾ ಕಾಲೇಜುಗಳ ಬಳಿ ಪಾದಚಾರಿ ಮೇಲುಸೇತುವೆ ಹಾಗೂ ಪಾಲಿಟೆಕ್ನಿಕ್‌ಗಳ ಬಳಿ ಸುರಂಗ ಸೇತುವೆ ಮಾರ್ಗಗಳಿದ್ದು ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು  ಸಾಧ್ಯವಾಗುತ್ತಿಲ್ಲ.

ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಸ್ವಾತಂತ್ರ್ಯ ಉದ್ಯಾನವನದಿಂದ ಕೆ.ಆರ್‌. ವರ್ತುಲದ ಮಧ್ಯೆ ಇರುವ ರಸ್ತೆ ವಿಭಜಕದಲ್ಲಿ ಸುಜಾತ ಟಾಕೀಸ್‌ ಬಳಿಯ ವಾಟಾಳ್‌ ನಾಗರಾಜ್‌ ರಸ್ತೆಯ ಮಧ್ಯೆ ನಿರ್ಮಿಸಿರುವ ರೀತಿಯಲ್ಲಿ ನಾಲ್ಕಡಿ ಎತ್ತರದ ಗೋಡೆ ನಿರ್ಮಿಸಬೇಕಿದೆ.
ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಹಾಗೂ ಟ್ರಾಫಿಕ್ ಪೊಲೀಸರು ಗಮನ ಹರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT