ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಸ್ತವಾಂಶಕ್ಕೆ ತದ್ವಿರುದ್ಧ

ಅಕ್ಷರ ಗಾತ್ರ

ಬೆಂಗಳೂರಿನಲ್ಲಿ ನಡೆದ ವಿರಾಟ್‌ ಹಿಂದೂ ಸಮಾಜೋತ್ಸವದಲ್ಲಿ ಧರ್ಮಸ್ಥಳದ  ಧರ್ಮಾ­ಧಿಕಾರಿ ವೀರೇಂದ್ರ ಹೆಗ್ಗಡೆಯವರು ವಿಶ್ವ ಹಿಂದೂ ಪರಿಷತ್‌ ಕುರಿತು ಹೇಳಿರುವ ಮಾತು (ಪ್ರ.ವಾ., ಫೆ.9) ವಾಸ್ತವಾಂಶಕ್ಕೆ ತದ್ವಿರುದ್ಧ­ವಾಗಿದ್ದು, ಅಚ್ಚರಿಯನ್ನು ಮೂಡಿಸುವಂತಿದೆ.  ಆದರೆ ಅವರು ಹೇಳಿರುವುದರಲ್ಲಿ ಒಂದು ಮಾತಂತೂ ಖಂಡಿತಾ ಸತ್ಯ. ಏನೆಂದರೆ, ‘ಸ್ವಾತಂತ್ರ್ಯ ಬಂದ ನಂತರ ರಾಷ್ಟ್ರದಲ್ಲಿ ಹಿಂದುತ್ವದ ಕಲ್ಪನೆ ಇರಲಿಲ್ಲ’. ಹೌದು, ಏಕೆಂದರೆ ಆಗ ಸಂವಿಧಾನದ ಆಶಯದಂತೆ ಭಾರತೀಯರೆಲ್ಲರೂ ‘ಒಂದು’ (ಹಿಂದೂ ಅಲ್ಲ) ಎಂಬ ಭಾವನೆ ಎಲ್ಲೆಲ್ಲೂ ಮೊಳಗಿತ್ತು. ಆದರೆ ವಿಶ್ವ ಹಿಂದೂ ಪರಿಷತ್‌ ಈ ಐವತ್ತು ವರ್ಷಗಳಲ್ಲಿ ಈ ವಿಶಾಲ ಮನೋಭಾವಕ್ಕೆ ಕೋಮುದ್ವೇಷದ ವಿಷ ಹಿಂಡುತ್ತಿದೆ.

‘ವಿಎಚ್‌ಪಿ ಇಡೀ ಸಮಾಜವನ್ನು ಒಂದು­ಗೂಡಿಸುವ ಕೆಲಸ ಮಾಡಿತು’ ಎಂಬ ಹೆಗ್ಗಡೆ­ಯವರ ಮಾತು ಕೇಳಿದವರು ನಕ್ಕಾರು. ಒಂದು­ಗೂಡಿಸುವ ಕೆಲಸ ವಿಎಚ್‌ಪಿಯ ಅಜೆಂಡಾನೇ ಅಲ್ಲ. ನಾನಾ ಜಾತಿ– ಧರ್ಮ, ಬಹುಸಂಸ್ಕೃತಿ­ಗಳಿಂದ ವೈವಿಧ್ಯದಲ್ಲೂ  ಏಕತೆ ಮೆರೆಯು­ತ್ತಿ­ರುವ ನಮ್ಮ ಭಾರತವನ್ನು ಸಂವಿಧಾನಬದ್ಧವಾಗಿ ಹಿಂದೂ ರಾಷ್ಟ್ರವನ್ನಾಗಿ ಮಾಡಲು ಹೊರಟಿ­ರುವ ವಿಎಚ್‌ಪಿ ನಿಲುವು ವಿಚ್ಛಿದ್ರಕಾರಿ­ಯಾದುದು. ಈ ಸಂಘಟನೆ, ಜಾತಿ– ಮತ– ಧರ್ಮದ ಬಗ್ಗೆ ಎಲ್ಲರಲ್ಲೂ ವಿಶಾಲ ಮನೋ­ಭಾವ ಬೆಳೆಸಿದೆ ಎಂಬ ಹೆಗ್ಗಡೆಯವರ ಮಾತು, ಅದರ ಸಿದ್ಧಾಂತ, ಕಾರ್ಯಚಟುವಟಿಕೆಗಳಿಗೆ ತದ್ವಿರುದ್ಧವಾದುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT