ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯವಸ್ಥೆಯ ಕೈಗನ್ನಡಿ

Last Updated 6 ಜೂನ್ 2016, 19:31 IST
ಅಕ್ಷರ ಗಾತ್ರ

ಕೂಡ್ಲಿಗಿ ಉಪ ವಿಭಾಗದ ಡಿವೈಎಸ್ಪಿಯಾಗಿ ಅನುಪಮಾ ಶೆಣೈ ಅವರು ಮಾಡಿದ್ದು ವ್ಯಾಪ್ತಿ ಮೀರಿದ ಕೆಲಸವಲ್ಲ. ನಿಯಮಗಳ ಅನ್ವಯ ಸಾರ್ವಜನಿಕರ ದೂರಿಗೆ ಮನ್ನಣೆ ನೀಡಿ ಅವರು ಕರ್ತವ್ಯ ನಿರ್ವಹಿಸಿದ್ದಾರೆ. ತಮ್ಮ ಕಾರ್ಯವೈಖರಿಯ ಮೂಲಕ ಜನ ಮನ ಗೆದ್ದ ಅಧಿಕಾರಿಯ ರಾಜೀನಾಮೆ ವಿಷಯ ಪ್ರಸ್ತುತ ರಾಜಕೀಯ ವ್ಯವಸ್ಥೆಯನ್ನು ಬಿಂಬಿಸುವ ಕೈಗನ್ನಡಿಯಾಗಿದೆ.

ಈ ಮುಂಚೆಯೂ ಅವರು ವರ್ಗಾವಣೆಯ ಬ್ರಹ್ಮಾಸ್ತ್ರಕ್ಕೆ ಸಿಲುಕಿ ನಲುಗಿದ್ದರು. ಈ ವಿದ್ಯಮಾನಗಳನ್ನು ನೋಡಿದರೆ ಪ್ರಜಾಪ್ರಭುತ್ವದ ವ್ಯಾಖ್ಯಾನದ ಬಗ್ಗೆ ಪುನರ್‌ವಿಮರ್ಶೆ ಮಾಡಿಕೊಳ್ಳುವಂತಾಗಿದೆ. ಜಾತಿ ಬಲ, ಧನ ಬಲ, ರಾಜಕೀಯ ಬಲಗಳ ಒತ್ತಡದಲ್ಲಿ ಸಿಲುಕಿದ ಸರ್ಕಾರಿ ಅಧಿಕಾರಿಗಳ ಹಾಗೂ ಅವರನ್ನೇ ನಂಬಿದ ಸಾರ್ವಜನಿಕರ ಸಹನೆಗೆ ಮಿತಿಯಿಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT