ವಿಶ್ವದಲ್ಲೇ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ– ಬಿಸಿಸಿಐ. ಇತ್ತೀಚಿನ ವರ್ಷಗಳಲ್ಲಿ ಸ್ಪಾಟ್ ಫಿಕ್ಸಿಂಗ್, ಕ್ರಿಕೆಟ್ ಬೆಟ್ಟಿಂಗ್‌ನಿಂದ ತೀವ್ರ ಅಪಖ್ಯಾತಿಗೆ ಒಳಗಾಗಿದ್ದ ಬಿಸಿಸಿಐ, ಪಟ್ಟಭದ್ರ ಹಿತಾಸಕ್ತಿ ಹೊಂದಿದವರ ಕಪಿಮುಷ್ಟಿಯಿಂದ ಈಗ ಹೊರಗೆ ಬಂದಿದೆ. ಈಗಿನ ಅಧ್ಯಕ್ಷ ಶಶಾಂಕ್ ಮನೋಹರ್ ಕೆಲವು ದಿಟ್ಟ ಕ್ರಮಗಳನ್ನು ಕೈಗೊಂಡಿರುವುದು ಸ್ವಾಗತಾರ್ಹ. ಇತ್ತೀಚಿನ ದಿನಗಳಲ್ಲಿ ಜನ ಕ್ರಿಕೆಟ್ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಕಳೆದ ವಾರ ಮೊಹಾಲಿಯಲ್ಲಿ ನಡೆದ ಭಾರತ–ದಕ್ಷಿಣ ಆಫ್ರಿಕಾ ನಡುವಣ ಟೆಸ್ಟ್ ಪಂದ್ಯ ನೋಡಲು ಬಂದವರು ಕೆಲವೇ ಮಂದಿ ಎಂಬುದು ಇದಕ್ಕೆ ಸಾಕ್ಷಿ.

ಕಳೆದ ದಶಕದಲ್ಲಿ ವಿಶ್ವದಲ್ಲಿ ಅನೇಕ ಬದಲಾವಣೆಗಳನ್ನು ಕಂಡಿದ್ದೇವೆ. ಅಂತೆಯೇ ಭಾರತ ಕ್ರಿಕೆಟ್‌ನಲ್ಲೂ ಅಧ್ಯಕ್ಷರಿಂದ ಆಯ್ಕೆದಾರರವರೆಗೂ, ನಾಯಕನಿಂದ ಕೊನೆಯ ಆಟಗಾರನವರೆಗೂ ಬದಲಾವಣೆ ನೋಡಿದ್ದೇವೆ. ಆದರೆ ಒಂದು ‘ಗುಂಪು’ ಮಾತ್ರ ಹಾಗೇ ಇದೆ.

ಅದು, ವೀಕ್ಷಕ ವಿವರಣೆ ನೀಡುವ ಸುನಿಲ್ ಗಾವಸ್ಕರ್, ಹರ್ಷ ಭೋಗ್ಲೆ, ರವಿ ಶಾಸ್ತ್ರಿ ಮತ್ತು ಸಂಜಯ್ ಮಾಂಜ್ರೇಕರ್ ‘ಗುಂಪು.’ ಶತಕೋಟಿ ಮೀರಿ ಜನಸಂಖ್ಯೆ ಹೊಂದಿರುವ, ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳಿರುವ ಈ ರಾಷ್ಟ್ರದಲ್ಲಿ, ವೀಕ್ಷಕ ವಿವರಣೆ ನೀಡುವ ಸಾಮರ್ಥ್ಯ ಇರುವ ಬೇರೆಯವರು ಇಲ್ಲವೇ? ಕೆಲ ಹೊಸ ಮುಖಗಳು ಕಾಣಿಸುತ್ತಿವೆಯಾದರೂ ಅದು ಸಾಲದು. ಹೊಸಬರಿಗೆ ಇನ್ನೂ ಹೆಚ್ಚಿನ ಅವಕಾಶ ಸಿಗಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.