ಮೂರಕ್ಕಿಂತ ಹೆಚ್ಚು ಬಾರಿ ಅಪಘಾತ ಮಾಡುವ ವಾಹನ ಚಾಲಕರ ಪರವಾನಗಿಯನ್ನು (ಡಿ ಎಲ್) ರದ್ದು ಪಡಿಸುವುದಾಗಿ ಸಚಿವ ಆರ್. ಅಶೋಕ್ ಹೇಳಿದ್ದಾರೆಂಬ ಮಾಹಿತಿಯನ್ನು ಪತ್ರಿಕೆಗಳಲ್ಲಿ ಓದಿದೆ. ಅವರ ಆಲೋಚನೆ ಸರಿಯಾಗಿದೆ.

ದೇಶದಲ್ಲಿ ಪ್ರತಿ ವರ್ಷ ಬಹಳಷ್ಟು ಜನರು ವಾಹನ ಅಪಘಾತಗಳಲ್ಲಿ ಸಾಯುತ್ತಿದ್ದಾರೆ. ಯುವಕರು ವೀಲಿಂಗ್, ಡ್ರ್ಯಾಗ್ ರೇಸ್‌ನ ಹುಚ್ಚಿಗೆ ತುತ್ತಾಗಿ ಅಪಘಾತ ಮಾಡಿ ಅಮಾಯಕರನ್ನು ಗಾಯಗೊಳಿಸುತ್ತಿದ್ದಾರೆ ಮತ್ತು ಅವರೂ ಗಾಯಗೊಳ್ಳುತ್ತಾರೆ. ವೀಲಿಂಗ್, ಡ್ರ್ಯಾಗ್ ರೇಸ್‌ಗಳಿಂದ ಆಗುವ ಕರ್ಕಶ ಧ್ವನಿಯಿಂದ ವೃದ್ಧರಿಗೆ ಮತ್ತು ಮಕ್ಕಳಿಗೆ ಕಿರಿಕಿರಿಯಾಗುತ್ತದೆ.

ರಾತ್ರಿ ವೇಳೆ ಪಾನಮತ್ತರಾಗಿ ವಾಹನ ಚಾಲನೆ ಮಾಡುವುದರ ಸಂಖ್ಯೆ ಹೆಚ್ಚಾಗಿ ಅಪಘಾತಗಳಾಗುತ್ತಿವೆ. ಈ ಹಿನ್ನೆಲೆಯಲ್ಲಿ ಸಚಿವರ ಆಲೋಚನೆ ಸರಿಯಾಗಿದೆ. ಸಚಿವರ ನಿರ್ಧಾರ ಆದಷ್ಟು ಬೇಗ ಕಾರ್ಯರೂಪಕ್ಕೆ ಬರಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.