ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಸ್ಕೃತಿಕ ಶ್ರೀಮಂತಿಕೆ ಹೆಚ್ಚಿಸಿದವರು...

Last Updated 11 ನವೆಂಬರ್ 2014, 19:30 IST
ಅಕ್ಷರ ಗಾತ್ರ

ವಾಚಕರವಾಣಿಯ ನನ್ನ ಪತ್ರಕ್ಕೆ ರಾಜು ಚಿಂಗಳೆಯವರು ನೀಡಿದ ಸ್ಪಂದನಕ್ಕೆ (ಪ್ರ.ವಾ., ನ.10) ನನ್ನ ಮರುಸ್ಪಂದನ. ಅರುಂಧತಿ ನಾಗ್ ಅವರ ಹೇಳಿಕೆಗೆ ಪ್ರತಿಯಾಗಿ ಕೆಲವು ಹೊಸ ತಲೆಮಾರಿನ ನಾಟಕಕಾರರ ಹೆಸರನ್ನು ಪಟ್ಟಿ ಉದ್ದವಾಗಬಾರದೆಂದು ಸಾಂಕೇತಿಕವಾಗಿ ಉಲ್ಲೇಖಿ­ಸಿದ್ದೆ ಅಷ್ಟೇ.

ಹಾಗೆ ನೋಡಿದರೆ ನಾನು ಹೆಸರಿಸಿದ ವ್ಯಕ್ತಿಗಳು ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಬಂದು ಬೆಂಗಳೂರಿನಲ್ಲಿ ನೆಲಸಿರುವವರು. ಆದರೆ ಚಿಂಗಳೆ ಯವರ ಪಟ್ಟಿಯಲ್ಲಿ ಡಿ.ಎಸ್. ಚೌಗಲೆ ಅವರನ್ನು ಹೊರತುಪಡಿಸಿ ಉಳಿದವರು ಯಾರೂ ಉತ್ತರ ಕರ್ನಾಟಕ­ದವರಲ್ಲ, ಹಾಗೆ ಆಗಬೇಕಾ­ಗಿಯೂ ಇಲ್ಲ! ಮೇಲಾಗಿ ನಾವಿಬ್ಬರೂ ಹೆಸರಿಸಿದವರೆಲ್ಲರೂ ತಮ್ಮ ಬರವಣಿಗೆಯ ಮೂಲಕ ಕರ್ನಾಟಕದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೆಚ್ಚಿಸಿ­ರುವವರು ಎಂಬುದನ್ನು ಅರಿಯಲು ಬೇಕಾದ್ದು ಅಧ್ಯಯನ ಅಲ್ಲ ಸಾಮಾನ್ಯ ಜ್ಞಾನ.
(ಇಲ್ಲಿಗೆ ಈ ಪತ್ರ ವ್ಯವಹಾರವನ್ನು ಮುಕ್ತಾಯ­ಗೊಳಿಸಲಾಗಿದೆ)                                                          
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT