ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರ್ಥಕ ಕೆಲಸ ಮಾಡಲಿ

Last Updated 24 ಜೂನ್ 2012, 19:30 IST
ಅಕ್ಷರ ಗಾತ್ರ

ಮುಜರಾಯಿ ಇಲಾಖೆಗೆ ಸೇರಿದ ಹಿಂದೂ ಧಾರ್ಮಿಕ ದೇವಾಲಯಗಳ ಅರ್ಚಕರ ಹಣಕಾಸಿನ ಪರಿಸ್ಥಿತಿಯನ್ನು ಉತ್ತಮ ಪಡಿಸದಿದ್ದರೆ, ದೇವಾಲಯಗಳನ್ನು ಬಂದ್ ಮಾಡುವುದಾಗಿ ತತ್‌ಸಂಬಂಧಿತವಾದ ವ್ಯಕ್ತಿಗಳು ಮೈಸೂರಿನ ಸಮಾರಂಭವೊಂದರಲ್ಲಿ ಬೆದರಿಕೆಯನ್ನೊಡ್ಡಿದ್ದಾರೆ (ವರದಿ: ಪ್ರಜಾವಾಣಿ, ಜೂ. 21) ಇದೊಂದು ಸ್ವಾಗತಾರ್ಹ ಕ್ರಮವೇ ಸರಿ.

ನಿರ್ಜೀವ ದೇವಾಲಯಗಳಲ್ಲಿ ಪೂಜಾರಿಗಳು ಬಣ ಬಣ ಮಂತ್ರ ಹೇಳುತ್ತ, ಭಣ ಭಣಗುಟ್ಟುವ ಬದುಕನ್ನು ಬದುಕುವುದಕ್ಕಿಂತ ಬೇರೆ ಯಾವುದಾದರೂ ಸಾರ್ಥಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು ಮೇಲು. ಅದೇ ರೀತಿ ಮಸೀದಿ, ಚರ್ಚ್, ಬಸ್ತಿ ಈ ಮುಂತಾದವುಗಳಿಗೂ ಬೀಗ ಹಾಕಿ ಆಯಾ ಧರ್ಮದ ದೇವರುಗಳು ಮೆಚ್ಚುವಂಥ, ಶ್ರಮಸಹಿತವಾದ ಕಾಯಕದಲ್ಲಿ ತತ್‌ಸಂಬಂಧಿತವಾದ ವ್ಯಕ್ತಿಗಳು ತೊಡಗಿಸಿಕೊಳ್ಳುವುದು ಮೇಲು.

ಹೇಗಿದ್ದರೂ ಕುವೆಂಪು ಅವರು `ಗುಡಿ ಚರ್ಚು ಮಸೀದಿಗಳ ಬಿಟ್ಟು ಹೊರಬನ್ನಿ~ ಎಂದು ಎಪ್ಪತ್ತು ವರ್ಷಗಳ ಹಿಂದೆಯೇ ಸಾರಿದ್ದಾರೆ ಆದರೆ, ಹಾಗೆಯೇ ಬಿಟ್ಟು ಬರಬೇಡಿ, ಅವುಗಳ ಬಾಗಿಲಿಗೆ ಬೀಗ ಹಾಕಿ ಬನ್ನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT