ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಕ್ಕು ಕಸಿಯದಿರಿ

Last Updated 7 ಸೆಪ್ಟೆಂಬರ್ 2015, 19:48 IST
ಅಕ್ಷರ ಗಾತ್ರ

ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಸಿಗರನಹಳ್ಳಿಯಲ್ಲಿ ದಲಿತರು ದೇವಾಲಯ ಪ್ರವೇಶಿಸಿದರೆಂಬ ಕಾರಣಕ್ಕೆ ಮೇಲ್ಜಾತಿಯವರು ಸ್ತ್ರೀಶಕ್ತಿ ಸಂಘದ ಮಹಿಳೆಯರಿಗೆ 1000 ರೂಪಾಯಿ ದಂಡ ವಿಧಿಸಿರುವುದಲ್ಲದೆ ನಿಂದಿಸಿರುವುದು ಅಮಾನವೀಯ. ಮೈಲಿಗೆ ಆಗಿರುವ ದೇವರನ್ನು ಮಡಿ ಮಾಡುವ ಕಾರ್ಯ ಕೈಗೊಂಡಿದ್ದನ್ನು ಓದಿ ಅಚ್ಚರಿಯೆನಿಸಿತು.

12ನೇ ಶತಮಾನದಲ್ಲೇ ಬಸವಣ್ಣನವರು ಸಮಾಜದಲ್ಲಿ ಜಾತಿ ಪದ್ಧತಿಯನ್ನು ಹೋಗಲಾಡಿಸಲೆಂದು, ಸಮಾನತೆ, ಏಕತೆ ಮೂಡಬೇಕೆಂದು ತಮ್ಮ ವಚನಗಳ ಮೂಲಕ ಎಚ್ಚರಿಸಿದ್ದರು. ಹೀಗೆ ಸಾರಿದ ಬಸವಣ್ಣನ ದೇಗುಲದಲ್ಲೇ ಜಾತೀಯತೆಯನ್ನು ಜೀವಂತವಿಟ್ಟು ದಲಿತರಿಗೆ ಪ್ರವೇಶ ನಿರಾಕರಿಸಿದ್ದು ಖಂಡನೀಯ.

21ನೇ ಶತಮಾನದಲ್ಲೂ ಇಂತಹ ಅಮಾನವೀಯ ಆಚರಣೆಗಳಿರುವುದು ತಪ್ಪಲ್ಲವೇ? ಅದೂ ಅಲ್ಲದೆ ಸಂಸದರ ನಿಧಿಯಿಂದ ಕಟ್ಟಿದ ಸಮುದಾಯ ಭವನಕ್ಕೂ ದಲಿತರಿಗೆ ನಿಷೇಧ ಹೇರಿರುವುದು ಖಂಡನೀಯ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕು. ಸಮಾಜದಲ್ಲಿ ಎಲ್ಲರಿಗೂ ಸಮಾನತೆಯ ಹಕ್ಕಿದೆ. ಸಾರ್ವಜನಿಕ ಸ್ಥಳಗಳನ್ನು ಯಾವುದೇ ತಾರತಮ್ಯವಿಲ್ಲದೆ ಉಪಭೋಗಿಸುವ ಹಕ್ಕಿದೆ. ಅದನ್ನು ಯಾರಿಂದಲೂ ಕಸಿಯಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT