ರಾಜ್ಯದ ಹಲವು ರೈಲುಗಳು, ರೈಲು ನಿಲ್ದಾಣಗಳು ಹಾಗೂ ನಗರಗಳ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ವಾಹನ ಸವಾರರಿಂದ ಬಲವಂತವಾಗಿ ಹಣ ವಸೂಲಿ ಮಾಡುವ ಲೈಂಗಿಕ ಅಲ್ಪಸಂಖ್ಯಾತರ ಕಾಟ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ರಾತ್ರಿ ವೇಳೆಯಂತೂ ರೈಲು ಬೋಗಿಗಳಲ್ಲಿ ಪ್ರಯಾಣಿಕರಿಗೆ ಇವರು ಕೊಡುವ ಕಷ್ಟ ಅಷ್ಟಿಷ್ಟಲ್ಲ. ಮೂರರಿಂದ ನಾಲ್ಕು ಜನರನ್ನು ಒಳಗೊಂಡ ಗುಂಪು, ಮಲಗಿರುವ ಪ್ರಯಾಣಿಕರನ್ನು ಎಚ್ಚರಗೊಳಿಸಿ ಚಪ್ಪಾಳೆ ತಟ್ಟುತ್ತಾ ಹಣ ಕೇಳುತ್ತದೆ.

ಒಂದು ವೇಳೆ ಹಣ ಕೊಡದಿದ್ದರೆ ಅವಾಚ್ಯ ಶಬ್ದಗಳಿಂದ ಅವರನ್ನು ನಿಂದಿಸುತ್ತದೆ. ಎರಡು ಅಥವಾ ಐದು ರೂಪಾಯಿ ಕೊಟ್ಟರೆ ತೆಗೆದುಕೊಳ್ಳದೆ ಕನಿಷ್ಠ ಹತ್ತು ರೂಪಾಯಿಯನ್ನಾದರೂ ಕೊಡಬೇಕೆಂದು ಆಗ್ರಹಿಸುತ್ತದೆ.

ಸಾವಿರಾರು ಪ್ರಯಾಣಿಕರಿರುವ ರೈಲು ಬೋಗಿಗಳಲ್ಲಿ ಒಬ್ಬ ಪ್ರಯಾಣಿಕರಿಗೆ ಹತ್ತು ರೂಪಾಯಿ ಎಂದು ಇಟ್ಟುಕೊಂಡರೆ ಕೇವಲ ಒಂದು ದಿನದಲ್ಲಿ ಇವರು ಸಾವಿರಾರು ರೂಪಾಯಿ ಗಳಿಸಬಹುದೆಂಬುದನ್ನು ನಾವು ಅಂದಾಜಿಸಬಹುದು.

ಹೀಗೆ ರೌಡಿಗಳಂತೆ ವರ್ತಿಸುತ್ತಾ ಜನರ ದರೋಡೆ ಮಾಡುತ್ತಿರುವ ಇವರ ವಿರುದ್ಧ ರೈಲ್ವೆ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಜರುಗಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.