ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅನಂತ’ ನಮನಗಳು

ಅಕ್ಷರ ಗಾತ್ರ

ಅನಂತಮೂರ್ತಿಯವರ ಸಾವಿನಿಂದ ಲಕ್ಷಾಂತರ ಅಭಿಮಾನಿಗಳಲ್ಲಿ ಅನಾಥ ಭಾವವೊಂದನ್ನು ಹುಟ್ಟು­ಹಾಕಿದೆ.  ಆದರೆ ಅವರ ಸಾವನ್ನೂ ಕೂಡ ಸಂಭ್ರಮಿಸಿದ ಮನಸುಗಳದ್ದು ಅದೆಂಥಾ -ವಿಕೃತ ಮನ­­ಸ್ಥಿತಿ! ಇಂಥವರನ್ನು ಸೃಷ್ಟಿಸಿದ ಆ ಧರ್ಮದ ವಕ್ತಾರರೆಂಬಂತೆ ವರ್ತಿಸುವ ಹಿರಿಯರು ಈ ಬಗ್ಗೆ ಗಾಢವಾಗಿ ಯೋಚಿಸಬೇಕು.

ಏಕೆಂದರೆ ಹಿಂದೂ ಮತ ಅತ್ಯಂತ ವಿಶಾಲ ಮನೋಧರ್ಮದ ಮತ. ಇಲ್ಲಿ ಆಸ್ತಿಕತೆಯೂ ಇದೆ. ನಾಸ್ತಿಕತೆಯೂ ಇದೆ. ಗೊಡ್ಡು ಆಚರಣೆಗಳೂ ಇವೆ. ವೈಜ್ಞಾನಿಕ ದೃಷ್ಟಿ­ಕೋನ­­­ಗಳೂ ಇವೆ. ವೈಜ್ಞಾನಿಕವಾದ ನೂರಾರು ಆಚರಣೆಗಳು ಬರುಬರುತ್ತಾ ಗೊಡ್ಡಾಗಿ ಮಾರ್ಪಟ್ಟವೂ ಇವೆ. ವಿವೇಚಿಸುವ, ವಿಷಯದಾಳಕ್ಕಿಳಿವ, ಆಚರಣೆಗಳ ಹಿಂದಿನ ಉದ್ದೇಶವನ್ನು ಅರಿ­ಯುವ ಮನಸ್ಥಿತಿಗಳು ಕುರುಡಾಗುತ್ತಾ, ಬರಿದೇ ಶಾಸ್ತ್ರಕ್ಕಾಗಿ ಆಚರಿಸುವವರೆ ಒಂದು ಧರ್ಮದಲ್ಲಿ ತುಂಬುತ್ತಾ ಹೋದಂತೆ ಆಗುವ ಅಪಾಯಗಳಿಗೆ ಸಾಕ್ಷಿಯೇ ಈ ಕೊಳೆತ ಮನಸ್ಸುಗಳು ಹಾಗೂ ಅವು­ಗಳ ಸೃಷ್ಟಿಕರ್ತರು. ನಿಜವಾದ ಹಿಂದೂ ಮತಾನುಯಾಯಿ ಹೀಗೆಲ್ಲಾ ಮಾಡಲಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT