ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಸಟೈಲ್ ರಾಜಕಾರಣಿಯ ವೈಶಿಷ್ಟ್ಯ ಬದುಕು...

Last Updated 31 ಆಗಸ್ಟ್ 2020, 14:09 IST
ಅಕ್ಷರ ಗಾತ್ರ

ಭಾರತದಮಾಜಿ ರಾಷ್ಟ್ರಪತಿ, ಭಾರತ ರತ್ನ ಪ್ರಣಬ್‌ ಮುಖರ್ಜಿ ಅವರು ಇಂದು ಇಹಲೋಕ ತ್ಯಜಿಸಿದ್ದಾರೆ. ದೇಶದ ಅತ್ಯುನ್ನತ ಸ್ಥಾನವನ್ನು ಅಲಂಕರಿಸಿದ್ದ ಪ್ರಣವ್‌ ಅವರ ವಿಶಿಷ್ಠ ಜೀವನದ ಕುರಿತು ಇಲ್ಲಿ ವಿವರಿಸಲಾಗಿದೆ.

-ಪ್ರಣಬ್ ಮುಖರ್ಜಿ, ಇತಿಹಾಸ ಮತ್ತು ರಾಜಕೀಯ ವಿಜ್ಞಾನ ಶಾಸ್ತ್ರದಲ್ಲಿ ಕಾನೂನು ವಿಷಯದಲ್ಲಿ ಉನ್ನತಪದವಿ ಪಡೆದಿದ್ದವರು. 1963ರಲ್ಲಿ ಪಶ್ಚಿಮ ಬಂಗಾಳದ ದಕ್ಷಿಣ 247 ಪರಗಣಗಳಲ್ಲಿನ ವಿದ್ಯಾನಗರ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕೆಲಸಮಾಡಿದ್ದಾರೆ.

-ಬಂಗಾಲಿ ಭಾಷೆಯ ಮಾಸಪತ್ರಿಕೆ, ವಾರಪತ್ರಿಕೆಯಲ್ಲಿ ಸಂಪಾದಕರೂ ಆಗಿದ್ದರು.

-1969ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ಸಲಹೆಯೊಂದಿಗೆ ರಾಜ್ಯಸಭೆ ಸದಸ್ಯರಾಗಿ ರಾಜಕೀಯ ಪ್ರವೇಶ.

-ನಾಲ್ಕು ಅವಧಿಗೆ ರಾಜ್ಯಸಭಾ ಸದಸ್ಯರಾಗಿದ್ದ ಅವರು ರಕ್ಷಣೆ, ವಾಣಜ್ಯ, ವಿದೇಶಾಂಗ ಮತ್ತು ಹಣಕಾಸು – ಪ್ರಮುಖ ನಾಲ್ಕು ಸಚಿವಾಲಯಗಳನ್ನು ನಿರ್ವಹಿಸಿದ ಏಕೈಕ ಸಚಿವ.

-ಹಣಕಾಸು ಸಚಿವರಾಗಿ ಹೆಚ್ಚು ಹೆಸರು ಮಾಡಿದವರು. ಏಳು ಬಜೆಟ್ ಮಂಡಿಸಿದ ಏಕೈಕ ಹಣಕಾಸು ಸಚಿವ ಎಂಬ ಖ್ಯಾತಿಯೂ ಇವರಿಗಿದೆ. 1984 ರಲ್ಲಿ, ಯೂರೋಮನಿ ನಿಯತಕಾಲಿಕೆಯು ಮುಖರ್ಜಿ ಅವರನ್ನು ವಿಶ್ವದ ಅತ್ಯುತ್ತಮ ಹಣಕಾಸು ಸಚಿವ ಎಂದು ಆಯ್ಕೆ ಮಾಡಿತ್ತು.

-ಇಂದಿರಾಗಾಂಧಿ ಹತ್ಯೆ ನಂತರ, ಪ್ರಣಬ್‌ ಅವರಿಗೆ ಪ್ರಧಾನಿ ಹುದ್ದೆ ಕೈತಪ್ಪಿತ್ತು. ಆಗ ರಾಜೀವ್‌ಗಾಂಧಿ ಪ್ರಧಾನಿಯಾದರು. ಪ್ರಣ‌ಬ್ ಮುಖರ್ಜಿ ಕಾಂಗ್ರೆಸ್ ತ್ಯಜಿಸಿ, ರಾಷ್ಟ್ರೀಯ ಸಮಾಜವಾದಿ ಪಕ್ಷ ಸ್ಥಾಪಿಸಿದ್ದರು. 1989ರಲ್ಲಿ ರಾಜೀವ್‌ ಗಾಂಧಿ ಜತೆ, ತಮ್ಮ ಪಕ್ಷವನ್ನು ವಿಲೀನವಾಗಿಸಿದರು.

-ಭಾರತದ 13 ನೇ ರಾಷ್ಟ್ರಪತಿಯಾಗಿ ನೇಮಕಗೊಂಡ ನಂತರ ಪ್ರಣಬ್‌ ಮುಖರ್ಜಿ ಅವರು ಉಗ್ರ ಅಫ್ಜಲ್ ಗುರು ಮತ್ತು ಅಜ್ಮಲ್ ಕಸಬ್ ಸೇರಿದಂತೆ ಏಳು ಕೈದಿಗಳ ಕ್ಷಮಾದಾನದ ಅರ್ಜಿಗಳನ್ನು ತಿರಸ್ಕರಿಸಿದ್ದಾರೆ.

-ಸೆಪ್ಟೆಂಬರ್ 5, 2015ರ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ನವದೆಹಲಿಯ ಪ್ರೆಸಿಡೆಂಟ್ ಎಸ್ಟೇಟ್‌ನಲ್ಲಿರುವ ಸರ್ಕಾರಿ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಭಾರತದ ರಾಜಕೀಯ, ಇತಿಹಾಸ ಕುರಿತು ಪಾಠ ಮೂಲಕ ಇತಿಹಾಸ ನಿರ್ಮಿಸಿದರು.

-ಪ್ರಣಬ್‌ ಮುಖರ್ಜಿಯವರಿಗೆ 40 ವರ್ಷಗಳಿಂದ ನಿತ್ಯ ಡೈರಿ ಬರೆಯುವ ಹವ್ಯಾಸ. ಆ ಡೈರಿಯಲ್ಲಿರುವ ಮಾಹಿತಿಗಳನ್ನು ಪುಸ್ತಕ ರೂಪದಲ್ಲಿ ತರುವ ಕುರಿತು ಅನೇಕ ಬಾರಿ ಚರ್ಚೆ ನಡೆದಿತ್ತು. ಪುತ್ರಿ ಶರ್ಮಿಷ್ಠ ಮುಖರ್ಜಿ ಅವರು ಪುಸ್ತಕ ಪ್ರಕಟಿಸುತ್ತಾರೆಂದು ಹೇಳಲಾಗುತ್ತಿತ್ತು.

-ನಿತ್ಯ ಹದಿನೆಂಟು ಗಂಟೆ ಕೆಲಸ ಮಾಡುತ್ತಿದ್ದರು ಪ್ರಣಬ್‌ ಮುಖರ್ಜಿ. ದುರ್ಗಾಪೂಜೆಯ ದಿನ, ತಪ್ಪದೇ ತಮ್ಮ ತವರು ಮಿರತಿಗೆ ಭೇಟಿ ನೀಡುತ್ತಿದ್ದರು. ಆ ದಿನ ಹೊರತುಪಡಿಸಿ, ಇನ್ನು ಎಂದೂ ಕೆಲಸಕ್ಕೆ ರಜೆ ಹಾಕುತ್ತಿರಲಿಲ್ಲ.

ಇವುಗಳನ್ನು ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT