ಶನಿವಾರ, ಜುಲೈ 2, 2022
27 °C

21 ಸಂಘಟನೆಗಳ 50 ಸಾವಿರ ಉಗ್ರರು ಅಫ್ಘಾನಿಸ್ತಾನದಲ್ಲಿದ್ದಾರೆ: ರಕ್ಷಣಾ ಇಲಾಖೆ

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ಬೀಜಿಂಗ್‌(ಚೀನಾ): ತಮ್ಮ ದೇಶದಲ್ಲಿ ಸುಮಾರು 21 ಸಂಘಟನೆಗಳಿಗೆ ಸೇರಿದ 50 ಸಾವಿರಕ್ಕೂ ಹೆಚ್ಚು ಭಯೋತ್ಪಾದಕರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅಫ್ಘಾನಿಸ್ತಾನ ರಕ್ಷಣಾ ಸಚಿವ ಹಿಲಾವುದ್ದೀನ್‌ ಹೆಲಾಲ್‌ ಹೇಳಿದ್ದಾರೆ.

8ನೇ ಬೀಜಿಂಗ್‌ ಕ್ಸಿಯಾಂಗ್ಶಾನ್‌ ಫೋರಂನಲ್ಲಿ ಮಾತನಾಡಿದ ‘ಸದ್ಯ ದೇಶದಲ್ಲಿ 21 ಸಂಘಟನೆಗಳು ಕಾರ್ಯನಿರ್ವಹಿಸುತ್ತಿವೆ. ಎಲ್ಲಾ ಸಂಘಟನೆಗಳ ಒಟ್ಟು ಉಗ್ರರ ಸಂಖ್ಯೆ 50,200. ಈ ಪೈಕಿ ವಿದೇಶಿ ಉಗ್ರರ ಸಂಖ್ಯೆ 8,023’ ಎಂದು ಒತ್ತಿ ಹೇಳಿದರು.

ಉಗ್ರ ಸಂಘಟನೆಗಳು ಈ ಪ್ರದೇಶದಲ್ಲಿ ಪ್ರಭಾವ ಹೆಚ್ಚಿಸಿಕೊಳ್ಳಲು ಹೋರಾಡುತ್ತಿದ್ದು, ಅಫ್ಘಾನಿಸ್ತಾನವು ಯುದ್ಧಭೂಮಿಯಾಗಿ ಮಾರ್ಪಾಡಾಗುತ್ತಿದೆ. 38 ಸಾವಿರ ಉಗ್ರರನ್ನು ಹೊಂದಿರುವ ತಾಲಿಬಾನ್‌ ಎಂದು ಅತ್ಯಂತ ದೊಡ್ಡ ಸಂಘಟನೆಯಾಗಿದ್ದು, ಐಎಸ್‌ಗೆ ಸೇರಿದ 2 ಸಾವಿರಕ್ಕೂ ಹೆಚ್ಚು ಉಗ್ರರು ದೇಶದಲ್ಲಿದ್ದಾರೆ ಎಂದರು.

‘ದೇಶದಲ್ಲಿರುವ ಒಟ್ಟು ಉಗ್ರರಲ್ಲಿ ಶೇ. 70 ರಷ್ಟು ಉಗ್ರರು ಪಾಕಿಸ್ತಾನದವರು. ಉಜ್ಬೇಕಿಸ್ತಾನ ಮೂಲದ ಶೇ. 6, ಚೆಚೆನ್ಯಾ ಮೂಲದ ಶೇ. 4, ಚೀನಾ ಮೂಲದ ಶೇ. 1 ಹಾಗೂ ಅರಬ್‌ ದೇಶಗಳ ಶೇ. 3 ರಷ್ಟು ಉಗ್ರರು ಇದ್ದಾರೆ. ಉಳಿದಂತೆ ಶೇ. 14 ರಷ್ಟು ಉಗ್ರರು ಅಘ್ಘಾನಿಸ್ತಾನದವರೇ’ ಎಂದು ಮಾಹಿತಿ ನೀಡಿದರು.

ದೀರ್ಘಕಾಲದಿಂದ ತಾಲಿಬಾನ್‌ ಉಗ್ರ ಸಂಘಟನೆಯ ಬಂಡಾಯ ಎದುರಿಸುತ್ತಿರುವ ಅಫ್ಘಾನಿಸ್ತಾನ ರಾಜಕೀಯ, ಸಾಮಾಜಿಕ ಅಸ್ಥಿರತೆಯಿಂದ ಬಳಲುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು