ರಾಯಚೂರು: ನಗರದ ನಂದೀಶ್ವರ ದೇವಸ್ಥಾನದ ಬಳಿಯ ಸಾಯಿಬಾಬಾ ಮಂದಿರದಲ್ಲಿ ಆಗಸ್ಟ್ 27ರಂದು ಶಿರಡಿ ಸಾಯಿಬಾಬ ಅವರು ಧರಿಸಿದ್ದ ಕಫ್ನಿ ಮತ್ತು ಪಾದುಕೆಗಳನ್ನು ಪ್ರದರ್ಶನಕ್ಕಿಡಲಾಗುತ್ತದೆ ಎಂದು ಸಾಯಿಕಿರಣ ಆದೋನಿ ಫೌಂಡೇಶನ್ ಅಧ್ಯಕ್ಷ ಕಿರಣ್ ಆದೋನಿ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಯಿಬಾಬಾ ಅವರ ಭಕ್ತ ಮ್ಹಾಳಾ ಸಾಪತಿ ಅವರ ನೇತೃತ್ವದಲ್ಲಿ ಈ ಪ್ರದರ್ಶನ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಬಂದು ದರ್ಶನ ಪಡೆಯಬೇಕು ಎಂದರು.

ಸಾಯಿಬಾಬಾ ಜೀವನದುದ್ದಕ್ಕೂ ಅವರ ಜೊತೆಯಲ್ಲಿದ್ದ ಸಾಪತಿ ಅವರಿಗೆ ಬಾಬಾ ಅವರು ಕಫ್ನಿ ಮತ್ತು ಪಾದುಕೆಗಳನ್ನು ನೀಡಿದ್ದಾರೆ. ಅವುಗಳನ್ನು ಜೋಪಾನವಾಗಿಟ್ಟುಕೊಂಡಿರುವ ಸಾಪತಿ ಅವರು ಭಕ್ತರಿಗೆ ದರ್ಶನ ಕಲ್ಪಿಸಲು ನಗರಕ್ಕೆ ಬರಲಿದ್ದಾರೆ ಎಂದು ಹೇಳಿದರು.

ಬುಜ್ಜಿ ವಿನಯ, ರವಿ, ಮುರಳಿ, ಪ್ರಭುಶೆಟ್ಟರ್, ಅಂಬಾಜಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.