4

ಪಿಣರಾಯಿ ವಿಜಯನ್‍ಗೆ ನಾಲ್ಕನೇ ಬಾರಿ ಭೇಟಿ ನಿರಾಕರಿಸಿದ ಪ್ರಧಾನಿ ಕಚೇರಿ

Published:
Updated:

ನವದೆಹಲಿ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಲು ಅವಕಾಶ ಕೋರಿದ್ದು, ಸತತ ನಾಲ್ಕನೇ ಬಾರಿ ಪ್ರಧಾನಿಯವರ ಕಚೇರಿ ಭೇಟಿಗೆ ನಿರಾಕರಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿಯು ಪಿಣರಾಯಿ ವಿಜಯನ್ ಮತ್ತು ಅವರ ಪಕ್ಷದ ಪ್ರತಿನಿಧಿಗಳಿಗೆ ಭೇಟಿಗೆ ಅವಕಾಶ ನಿರಾಕರಿಸಿದೆ ಎಂದು ಪಿಣರಾಯಿ ಅವರ ಕಚೇರಿಯ ಮೂಲಗಳು ತಿಳಿಸಿವೆ.

ಪಿಣರಾಯಿ ಮತ್ತು ತಂಡ ಕೇರಳದಲ್ಲಿ ಪಡಿತರ ವಿತರಣೆ ವಿಷಯದ ಬಗ್ಗೆ ಭಿನ್ನಾಭಿಪ್ರಾಯಗಳಿರುವುದರಿಂದ ಈ ಬಗ್ಗೆ ಚರ್ಚಿಸುವುದಕ್ಕಾಗಿ ಪ್ರಧಾನಿಯವರ ಭೇಟಿಗೆ ಅವಕಾಶ ಕೋರಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ಕಚೇರಿ, ಅಗತ್ಯವಿದ್ದರೆ ಪಿಣರಾಯಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರನ್ನು ಭೇಟಿ ಮಾಡಲಿ ಎಂದಿದೆ. ಇದೇ ವಿಷಯನ್ನು ಚರ್ಚಿಸಲು ಕಳೆದ ವಾರವೂ ಪಿಣರಾಯಿ ಪ್ರಧಾನಿ ಕಚೇರಿಯನ್ನು ಸಂಪರ್ಕಿಸಿದರೂ. ಭೇಟಿಗೆ ಅವಕಾಶ ಸಿಕ್ಕಿಲ್ಲ 

ಈ ಹಿಂದೆ ಮಾರ್ಚ್ 20, 2017 ರಂದು ಬಜೆಟ್ ಬಗ್ಗೆ ಚರ್ಚಿಸಲು, ನೋಟು ರದ್ಧತಿಯ ಬಗ್ಗೆ ಚರ್ಚಿಸಲು ನವೆಂಬರ್ 24, 2016ರಂದು ಅವಕಾಶ ಕೋರಿದಾಗ ಅದನ್ನೂ ನಿರಾಕರಿಸಲಾಗಿತ್ತು.

ಸಿಪಿಐ(ಎಂ) ಕೇಂದ್ರ ಸಮಿತಿ ಸಭೆಯಲ್ಲಿ ಭಾಗವಹಿಸುವುದಕ್ಕಾಗಿ ಈಗ ಪಿಣರಾಯಿ ದೆಹಲಿಯಲ್ಲಿದ್ದಾರೆ. 
 

ಬರಹ ಇಷ್ಟವಾಯಿತೆ?

 • 18

  Happy
 • 2

  Amused
 • 2

  Sad
 • 2

  Frustrated
 • 7

  Angry

Comments:

0 comments

Write the first review for this !