ಚಿಂತಕ ಪ್ರೊ. ಕೇಶವ್ ರಾವ್ ಜಾಧವ್ ನಿಧನ

7

ಚಿಂತಕ ಪ್ರೊ. ಕೇಶವ್ ರಾವ್ ಜಾಧವ್ ನಿಧನ

Published:
Updated:
ಜಾಧವ್‌

ಹೈದರಾಬಾದ್: ಹಿರಿಯ ಸಮಾಜವಾದಿ ನಾಯಕ, ಚಿಂತಕ ಪ್ರೊ. ಕೇಶವ್ ರಾವ್ ಜಾಧವ್ (86) ಇತ್ತೀಚೆಗೆ ನಿಧನರಾದರು. 

ಸಮಾಜವಾದಿ ಜನಪರಿಷದ್‌ನ ಸಂಸ್ಥಾಪಕ ಉಪಾಧ್ಯಕ್ಷರಲ್ಲಿ ಒಬ್ಬರಾಗಿದ್ದ ಅವರು, ಹೃದಯಾಘಾತದಿಂದ ಸಾವಿಗೀಡಾದರು. ಆಂಧ್ರಪ್ರದೇಶದಲ್ಲಿ ಮಾನವ ಹಕ್ಕುಗಳ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದರು. ಹೈದರಾಬಾದ್‌ನ ಒಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್‌ ಸಾಹಿತ್ಯ ಪ್ರೊಫೆಸರ್‌ ಆಗಿ ಕಾರ್ಯನಿರ್ವಹಿಸಿದ್ದ ಅವರು, ಅಕಾಡೆಮಿಕ್‌ ಸ್ಟಾಫ್‌ ಕಾಲೇಜಿನ ನಿರ್ದೇಶಕರಾಗಿ ನಿವೃತ್ತರಾಗಿದ್ದರು. ಲೇಖಕರಾಗಿ, ಸಂಘಟಕರಾಗಿ, ಕವಿಯಾಗಿ ಗುರುತಿಸಿಕೊಂಡಿದ್ದರು. ತೆಲುಗು, ಹಿಂದಿ, ಉರ್ದುವಿನಲ್ಲಿ ಕವನಗಳನ್ನು ರಚಿಸಿದ್ದರು. ತೆಲಂಗಾಣ ರಾಜ್ಯನಿರ್ಮಾಣಕ್ಕಾಗಿ ಹೋರಾಟ ಮಾಡಿದ ಪ್ರಮುಖರಲ್ಲಿ ಜಾಧವ್‌ ಅವರೂ ಒಬ್ಬರು. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !