ದಾಖಲೆ ಸೃಷ್ಟಿಸಿದ ‘ಸೂರ್ಯ ನಮಸ್ಕಾರ’

7
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್‌ ತಾಲ್ಲೂಕಿನ ಬಾಲಗಾಂವ್‌ನ ಗುರುದೇವ ಆಶ್ರಮದಲ್ಲಿ ಸಮಾರಂಭ

ದಾಖಲೆ ಸೃಷ್ಟಿಸಿದ ‘ಸೂರ್ಯ ನಮಸ್ಕಾರ’

Published:
Updated:

ವಿಜಯಪುರ: ನೆರೆಯ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್‌ ತಾಲ್ಲೂಕಿನ ಬಾಲಗಾಂವ್‌ನ ಗುರುದೇವ ಆಶ್ರಮದ ಆವರಣದಲ್ಲಿ ಗುರುವಾರ ನಡೆದ ಸಾಮೂಹಿಕ ಸೂರ್ಯ ನಮಸ್ಕಾರ, ಯೋಗ ಕಾರ್ಯಕ್ರಮ ಮೂರು ದಾಖಲೆಗಳನ್ನು ನಿರ್ಮಿಸಿದೆ.

ಆಶ್ರಮ ಆಯೋಜಿಸಿದ್ದ ‘ಲಕ್ಷ ಜನರಿಂದ ಸೂರ್ಯ ನಮಸ್ಕಾರ’ ಕಾರ್ಯಕ್ರಮದಲ್ಲಿ 1.10 ಲಕ್ಷ ಜನರು ಭಾಗಿಯಾಗಿದ್ದರು. ಇದನ್ನು ಹೈರೇಂಜ್‌ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್‌, ಏಷಿಯನ್‌ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್‌, ಮಾರ್ವಲೆಸ್‌ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್‌ ಸಂಸ್ಥೆಗಳು ದಾಖಲೆಯಾಗಿ ನಮೂದಿಸಿವೆ ಎಂದು ಸಾಂಗ್ಲಿ ಜಿಲ್ಲಾಧಿಕಾರಿ ಕಾಳಮ್ ಪಾಟೀಲ ಘೋಷಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಲಿಮ್ಕಾ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್‌ ಸಂಸ್ಥೆ ಸಹ ಕಾರ್ಯಕ್ರಮದ ಚಿತ್ರೀಕರಣ ಮಾಡಿದೆ. 15 ದಿನಗಳಲ್ಲಿ ದಾಖಲೆಯ ಬಗ್ಗೆ ಘೋಷಣೆ ಮಾಡಲಿದೆ’ ಎಂದು ತಿಳಿಸಿದರು.

ಸೂರ್ಯ ನಮಸ್ಕಾರದಲ್ಲಿ ಪಾಲ್ಗೊಳ್ಳಲು ಶಾಲಾ– ಕಾಲೇಜುಗಳ ವಿದ್ಯಾರ್ಥಿಗಳಿಗೆ ಕಡ್ಡಾಯಗೊಳಿಸಲಾಗಿತ್ತು. ಕರ್ನಾಟಕದ ವಿಜಯಪುರ, ಇಂಡಿ, ಚಡಚಣ ತಾಲ್ಲೂಕಿನ ಜನರು ಸ್ವಯಂ ಪ್ರೇರಿತರಾಗಿ ಭಾಗಿಯಾಗಿದ್ದರು.

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !