ಕದ್ದು ಹಾಲು ಕುಡಿವುದು ಕಲಿಸುವುದೇ ಆರ್‌ಎಸ್‌ಎಸ್ ತರಬೇತಿ:ಸಚಿವ ಶ್ರೀನಿವಾಸ್ ಟೀಕೆ

ಶುಕ್ರವಾರ, ಏಪ್ರಿಲ್ 26, 2019
33 °C

ಕದ್ದು ಹಾಲು ಕುಡಿವುದು ಕಲಿಸುವುದೇ ಆರ್‌ಎಸ್‌ಎಸ್ ತರಬೇತಿ:ಸಚಿವ ಶ್ರೀನಿವಾಸ್ ಟೀಕೆ

Published:
Updated:

ತುಮಕೂರು: ಕಳ್ಳ ಬೆಕ್ಕು ಪಕ್ಕದ ಮನೆಗೆ ಹೋಗಿ ಹೇಗೆ ಹಾಲು ಕುಡಿದು ಬರಬೇಕು ಎಂಬುದನ್ನು ಕಲಿಸಿ ಕೊಡುವುದೇ ಆರ್‌ಎಸ್‌ಎಸ್‌ ನಲ್ಲಿ ಕೊಡುವ ತರಬೇತಿ ಎಂದು ಸಣ್ಣ ಕೈಗಾರಿಕಾ ಸಚಿವ ಎಸ್.ಆರ್. ಶ್ರೀನಿವಾಸ್ ಟೀಕಿಸಿದರು.

ಜೆಡಿಎಸ್ - ಕಾಂಗ್ರೆಸ್ ತುಮಕೂರು ನಗರ ಘಟಕದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು

ಆರ್‌ಎಸ್‌ಎಸ್‌ ಹೆಸರು ಹೇಳಿಕೊಂಡು ಬಿಜೆಪಿ ಅಭ್ಯರ್ಥಿ ಜಿ.ಎಸ್ ಬಸವರಾಜ್ ಮತ ಕೇಳುತ್ತಿದ್ದಾರೆ. ನಾಲ್ಕು ಬಾರಿ ಸಂಸದರಾದರೂ ಒಂದು ಅಭಿವೃದ್ಧಿ ಕೆಲಸ ಕಾಣುತ್ತಿಲ್ಲ. ಏನು ಕೆಲಸ ಮಾಡಿದ್ದೀರಿ ಎಂಬ ಪ್ರಶ್ನೆಗೂ ಉತ್ತರವಿಲ್ಲ. ಜಿಲ್ಲೆಗೆ ಬಸವರಾಜ್ ದಗಲ್ ಬಾಜಿ, ಸುಳ್ಳಿನ ಸರದಾರ ಆಗಿದ್ದಾರೆ ಎಂದು ಟೀಕಿಸಿದ್ದಾರೆ.

ಕೆಲಸಕ್ಕೆ ಬಾರದ ಪ್ರಧಾನಿ ನರೇಂದ್ರ ಮಹಾ ಸುಳ್ಳುಗಾರ. ₹15 ಲಕ್ಷ ಹಾಕುತ್ತೇನೆ ಖಾತೆಗೆ ಎಂದರು. ₹ 2 ಕೋಟಿ ಉದ್ಯೋಗ ನೀಡುತ್ತೇನೆ ಎಂದರು. ಯಾವುದನ್ನೂ ಮಾಡಿಲ್ಲ ಎಂದರು.

ಉಪಮುಖ್ಯಮಂತ್ರಿ ಡಾ.ಜಿಪರಮೇಶ್ಚರ ಮಾತನಾಡಿ, ನಮಗೆ ಬಿಜಿಪಿ ಅಭ್ಯರ್ಥಿ ಬಸವರಾಜ್ ಸೋಲಿಸುವುದಷ್ಟೇ ಮುಖ್ಯವಲ್ಲ. ಕೇಂದ್ರದಲ್ಲಿ ಮತ್ತೆ ನರೇಂದ್ರ ಮೋದಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದನ್ನು ತಡೆಯುವುದಷ್ಟೇ ಆದ್ಯತೆ ಎಂದರು.

ನರೇಂದ್ರ ಮೋದಿ ಅವರು ಚುನಾವಣೆಗೆ ಮೊದಲು ಕಳೆದ ಬಾರಿ ಬಹಳ ಸತ್ಯ ಹೇಳಿದರು. ಅಚ್ಚೆ ದಿನ್, ಇಂಡಿಯಾ ಶೈನಿಂಗ್ ಅಂದ್ರು. ದೇಶದ ಜನರು ನಂಬಿ ಮತ ಹಾಕಿದರು. ಮಾಧ್ಯಮಗಳು ಪ್ರಚಾರ ಮಾಡಿದವು. ಆದರೆ, ಏನೂ ಕೊಡಲಿಲ್ಲ. ರೈತರು ಆತ್ಮಹತ್ಯೆ ಮಾಡಿಕೊಂಡಾಗ ಪ್ರಧಾನಿಗೆ ನೆನಪು ಬರಲಿಲ್ಲ. ಚುನಾವಣೆ ಘೋಷಣೆ ಮುನ್ಮ ಮೋದಿಗೆ ರೈತರು ನೆನಪಾಗಿ ₹ 6 ಸಾವಿರ ಕೊಡುತ್ತೇವೆ ಎಂದಿದ್ದಾರೆ. ರಾಜ್ಯದಿಂದ ನಿಯೋಗದಲ್ಲಿ ತೆರಳಿ ಹಲವು ಬಾರಿ ಮನವಿ ಮಾಡಿದರೂ ಸ್ಪಂದಿಸಲಿಲ್ಲ ಎಂದು ವಾಗ್ದಾಳಿ ನಡೆಸಿದರು.

ಬ್ಯಾಂಕುಗಳನ್ನು ಲೂಟಿ ಮಾಡಿದರೂ ಕಣ್ತೆರೆದು ನೋಡಲಿಲ್ಲ. ಪೆಟ್ರೋಲ್ ಬೆಲೆ ಹೆಚ್ಚಾದರೂ ಗಮನಿಸಲಿಲ್ಲ. ಶಾಂತಿಗೆ ಭಂಗ ತರುವ ಕೃತ್ಯ ನಡೆದರೂ ಎಚ್ಷೆತ್ತುಕೊಳ್ಳಲಿಲ್ಲ. ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆದರೂ ಗಮನಹರಿಸಲಿಲ್ಲ ಎಂದು ಟೀಕಿಸಿದರು.
ಮತ್ತೆ ಈಗ ಮೋದಿ ಹೇಳುತ್ತಿದ್ದಾರೆ. ದೊಡ್ಡ ಬದಲಾವಣೆ ಮಾಡಿ ಬಿಡುತ್ತೇವೆ. ಚಂದ್ರಲೋಕಕ್ಕೆ ಕರೆದುಕೊಂಡು ಹೋಗುವುದಾಗಿ ಹೇಳುತ್ತಿದ್ದಾರೆ.  ನಂಬಬೇಡಿ ಎಂದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !