ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಜೆಡಿಎಸ್ ಅಭ್ಯರ್ಥಿಯಾಗಿ ಎಚ್.ಡಿ.ದೇವೇಗೌಡ ನಾಮಪತ್ರ ಸಲ್ಲಿಕೆ

Last Updated 25 ಮಾರ್ಚ್ 2019, 9:53 IST
ಅಕ್ಷರ ಗಾತ್ರ

ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದ ಜೆಡಿಎಸ್ ಆಭ್ಯರ್ಥಿಯಾಗಿ ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ನ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ಜಿಲ್ಲಾ ಚುನಾವಣಾಧಿಕಾರಿ ಡಾ. ರಾಕೇಶ್ ಕುಮಾರ್ ಅವರಿಗೆ ಸೋಮವಾರ ಮಧ್ಯಾಹ್ನ ನಾಮಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ರಮೇಶ್ ಬಾಬು, ಮಾಜಿ ಶಾಸಕರಾದ ಷಡಕ್ಷರಿ, ಡಾ.ರಫೀಕ್ ಅಹಮದ್ ಹಾಜರಿದ್ದರು. ದೇವೇಗೌಡರ ಪತ್ನಿ ಚನ್ನಮ್ಮ ಅವರು ಹೊರಗಡೆ ಕಾರಿನಲ್ಲಿ ಕುಳಿತಿದ್ದರು.

ಚುನಾವಣಾಧಿಕಾರಿ ಕಚೇರಿಯೊಳಗಡೆ ತೆರಳಿದ ಚನ್ನಮ್ಮ
ದೇವೇಗೌಡರು ನಾಮಪತ್ರ ಸಲ್ಲಿಸಲು ಮೊದಲೇ ಚುನಾವಣಾಧಿಕಾರಿ ಕಚೇರಿಯೊಳಗಡೆ ತೆರಳಿದ್ದರಿಂದ ಚುನಾವಣಾಧಿಕಾರಿಗಳ ಕಚೇರಿಗೆ ತಡವಾಗಿ ಬಂದ ಅವರ ಪತ್ನಿ ಚನ್ನಮ್ಮ ಅವರು ಚುನಾವಣಾಧಿಕಾರಿ ಕಚೇರಿ ಒಳಗಡೆ ಹೋಗಲಿಲ್ಲ. ಕಾರಿನಲ್ಲಿಯೇ ಕುಳಿತಿದ್ದರು.

ಚನ್ನಮ್ಮ ಅವರು ಬಂದಿರುವ ಮಾಹಿತಿ ತಿಳಿದ ಬಳಿಕ ಒಳಗಡೆ ಬರಲು ದೇವೇಗೌಡರು ಹೇಳಿ ಕಳಿಸಿದ್ದರಿಂದ ಚುನಾವಣಾಧಿಕಾರಿ ಕಚೇರಿಗೆ ತೆರಳಿದರು.

ನಿರ್ಬಂಧಿತ ಪ್ರದೇಶದೊಳಗಡೆ ಕಾರಿನಲ್ಲಿ ತೆರಳಲು ಅವಕಾಶ ಇಲ್ಲದೇ ಇದ್ದುದರಿಂದ ಚುನಾವಣಾಧಿಕಾರಿ ಕಚೇರಿ ಒಳಗಡೆ ನಡೆದುಕೊಂಡೇ ತೆರಳಿದರು.

ಮೆರವಣಿಗೆ ಮೊಟಕು

ನಾಮಪತ್ರ ಸಲ್ಲಿಕೆಗೆ ಪೂರ್ವ ನಿಗದಿತ ಸಮಯ ಮೀರುತ್ತದೆ ಎಂಬ ಕಾರಣಕ್ಕೆ ಮೆರವಣಿಗೆ ಮೊಟಕುಗೊಳಿಸಿ ಮೈತ್ರಿ ಅಭ್ಯರ್ಥಿ ದೇವೇಗೌಡರು ನಾಮಪತ್ರ ಸಲ್ಲಿಸಲು ಚುನಾವಣಾಧಿಕಾರಿಗಳ ಕಚೆರಿಗೆ ಧಾವಿಸಿದರು.

ಪೂರ್ವ ನಿಗದಿಯಂತೆ ಮಧ್ಯಾಹ್ನ 2.15 ಕ್ಕೆ ನಾಮಪತ್ರ ಸಲ್ಲಿಕೆಗೆ ಸಮಯ ನಿಗದಿಪಡಿಸಿದ್ದರು. ಸರ್ಕಾರಿ ಜೂನಿಯರ್ ಕಾಲೇಜಿನಿಂದ ನಾಮಪತ್ರ ಸಲ್ಲಿಕೆಗೆ ಮೆರವಣಿಗೆಯಲ್ಲಿ ಮಧ್ಯಾಹ್ನ 1.30ಕ್ಕೆ ಹೊರಟರು.ಆದರೆ, ನಾಮಪತ್ರ ಸಲ್ಲಿಕೆಗೆ ಸಮಯ ಮೀರುತ್ತದೆ ಎಂಬುದನ್ನು ಅರಿತು ಚುನಾವಣಾಧಿಕಾರಿ ಕಚೇರಿಗೆ ತೆರಳಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT