ಈಗಂತೂ ಮಾರುಕಟ್ಟೆಯಲ್ಲಿ ದ್ರಾಕ್ಷಿಗಳದ್ದೇ ಅಬ್ಬರ. ಗೊಂಚಲು ಗೊಂಚಲಾಗಿ ಹಸಿರು, ಕಪ್ಪು, ತಿಳಿನೇರಳೆ ಬಣ್ಣದ ದ್ರಾಕ್ಷಿ ಹಣ್ಣುಗಳು ಬೇಸಿಗೆಯನ್ನು ಬರಮಾಡಿಕೊಳ್ಳಲು ಸಿದ್ಧವಾಗಿವೆ.

ಆರೋಗ್ಯಕ್ಕೆ ಹಿತವಾದ ದ್ರಾಕ್ಷಿ ಹಣ್ಣುಗಳು ರಸಭರಿತವಾಗಿಯೂ, ರುಚಿಕರವಾಗಿಯೂ ಇರುತ್ತವೆ. ಆದರೆ ದ್ರಾಕ್ಷಿಹಣ್ಣುಗಳನ್ನು ಬೆಳೆಯುವಾಗ, ಸಂರಕ್ಷಿಸಿಡುವಾಗ ಸಾಕಷ್ಟು ಪ್ರಮಾಣದ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಹೀಗಾಗಿ ಬಳಕೆಗೂ ಮುನ್ನ ಸರಿಯಾದ ಕ್ರಮದಲ್ಲಿ ಸ್ವಚ್ಛಗೊಳಿಸುವುದು ಅಗತ್ಯವಾಗಿರುತ್ತದೆ.

ದ್ರಾಕ್ಷಿ ಹಣ್ಣುಗಳನ್ನು ಸುಲಭ ವಿಧಾನದಲ್ಲ ಹೇಗೆ ಸ್ಚಚ್ಛಗೊಳಿಸಬಹುದು ಎನ್ನುವ ಮಾಹಿತಿ ಇಲ್ಲಿದೆ.

ಉಪ್ಪು ನೀರು

ದ್ರಾಕ್ಷಿ ಹಣ್ಣುಗಳನ್ನು ಗೊಂಚಲುಗಳಿಂದ ಬಿಡಿಸಿಕೊಳ್ಳಿ. ಒಂದು ಪಾತ್ರೆಗೆ ನೀರು, 1–2 ಚಮಚ ಉಪ್ಪು ಹಾಕಿಕೊಳ್ಳಿ. ಈ ಉಪ್ಪು ನೀರಿಗೆ ಗೊಂಚಲನಿಂದ ಬಿಡಿಸಿಕೊಂಡ ದ್ರಾಕ್ಷಿ ಹಣ್ಣುಗಳನ್ನು ಹಾಕಿ 5–10 ನಿಮಿಷ ನೆನೆಸಿಕೊಳ್ಳಿ. ನಂತರ ಸ್ವಚ್ಛವಾದ ನೀರಿನಿಂದ ತೊಳೆದು ನಂತರ ತಿನ್ನಬಹುದು.

ದ್ರಾಕ್ಷಿ ಹಣ್ಣುಗಳನ್ನು ಉಪ್ಪು ನೀರಿನಲ್ಲಿ ನೆನೆಸುವುದರಿಂದ ಕೊಳೆ, ಕೀಟನಾಶಕಗಳು ಸ್ವಚ್ಛವಾಗುತ್ತವೆ.

ವಿನೆಗರ್ ಬಳಕೆ

ಆರಂಭದಲ್ಲಿ ಗೊಂಚಲುಗಳಿಂದ ಹಣ್ಣುಗಳನ್ನು ಬೇರ್ಪಡಿಸಿಕೊಳ್ಳಿ. ನಂತರ 30 ಸೆಕೆಂಡ್ ತಣ್ಣನೆಯ ನೀರಿನಲ್ಲಿ ನೆನೆಸಿಡಿ. ಇದರಿಂದ ಕೊಳೆ ನಿವಾರಣೆಯಾಗುತ್ತದೆ.

ಒಂದು ಬೌಲ್ನಲ್ಲಿ 1 ಚಮಚ ವಿನೆಗರ್ ಹಾಕಿ ದ್ರಾಕ್ಷಿ ಹಣ್ಣುಗಳನ್ನು 5 ರಿಂದ 10 ನಿಮಿಷ ನೆನೆಸಿಡಿ. ಇದರಿಂದ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ. ಜತೆಗೆ ಹಣ್ಣುಗಳಿಗೆ ಸಿಂಪಡಿಸಿರುವ ರಾಸಾಯನಿಕ ಅಂಶ ನಿವಾರಣೆಯಾಗುತ್ತದೆ.

ನಂತರ ಹೊರತೆಗೆದು ಸ್ವಚ್ಛವಾದ ನೀರಿನಲ್ಲಿ ಹಾಕಿ ವಿನೆಗರ್ ಅಂಶ ಹೋಗುವಂತೆ ತೊಳೆದುಕೊಳ್ಳಿ. ನಂತರ ಶುಚಿಯಾದ ಒಣಬಟ್ಟೆಯ ಮೇಲೆ ಹಣ್ಣುಗಳನ್ನು ಹರಡಿ ನೀರನ್ನು ಒಣಗಿಸಿಕೊಂಡು ಪ್ರಿಡ್ಜ್ನಲ್ಲಿ ಇಟ್ಟುಕೊಳ್ಳಿ. ತಿನ್ನುವ 5 ನಿಮಿಷ ಮೊದಲು ಹೊರತೆಗೆದು ಇಟ್ಟುಕೊಂಡು ತೊಳೆದು ತಿನ್ನಿ.

ಬೇಕಿಂಗ್ ಸೋಡ, ಉಪ್ಪು

ಒಂದು ಪಾತ್ರೆಗೆ ನೀರು ಹಾಕಿ 1 ಚಮಚ ಬೇಕಿಂಗ್ ಸೋಡ (ಅಡುಗೆ ಸೋಡ), 1 ಚಮಚ ಉಪ್ಪು ಸೇರಿಸಿ ನಂತರ ದ್ರಾಕ್ಷಿ ಹಣ್ಣುಗಳನ್ನು ಹಾಕಿಕೊಳ್ಳಿ. 10 ನಿಮಿಷ ಬಿಟ್ಟು ನಂತರ ಸ್ವಚ್ಛವಾದ ನೀರಿನಿಂದ ತೊಳೆದುಕೊಂಡು ತಿನ್ನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.