ಸಿನಿಲೋಕದ ಬೆರಗಿಗೆ, ಬಿನ್ನಾಣಕ್ಕೆ ತಾರೆಯರೇ ಭೂಷಣ. ಪ್ರಶಸ್ತಿ ಪ್ರದಾನ ಸಮಾರಂಭಗಳು, ಪಾರ್ಟಿಗಳಿಗೆ ಈ ತಾರೆಯರು ಅಚ್ಚುಕಟ್ಟಾಗಿ ತಯಾರಾಗುತ್ತಾರೆ. ಅವರು ಧರಿಸುವ ಉಡುಗೆಗಳು ಫ್ಯಾಷನ್ ಲೋಕದಲ್ಲಿ ಟ್ರೆಂಡ್ ಸೆಟ್ಟರ್ಗಳಾಗುತ್ತವೆ.

ಮೊನ್ನೆಮೊನ್ನೆಯಷ್ಟೇ ನಡೆದ ‘ಜೀ ಸಿನಿ ಅವಾರ್ಡ್’ ಕಾರ್ಯಕ್ರಮದಲ್ಲಿಯೂ ಹಾಗೇ ಆಯಿತು. ಜನಪ್ರಿಯ ವಿನ್ಯಾಸಕರ ಕಲ್ಪನೆಯಲ್ಲಿ ಅರಳಿದ ದಿರಿಸುಗಳನ್ನು ತೊಟ್ಟು ನಟಿಮಣಿಯರು ಒಬ್ಬೊಬ್ಬರಾಗಿ ನಡೆದು ಬರುತ್ತಿದ್ದರೆ ನೆರೆದವರ ಕಣ್ಣೆಲ್ಲಾ ಅವರ ಮೇಲೆಯೇ. ಈ ಬಾರಿ ತಮ್ಮ ವಿಶೇಷ ದಿರಿಸಿಗಾಗಿ ನಿಂದ ಹೆಚ್ಚು ಹೊಗಳಿಸಿಕೊಂಡವರು ರಾಧಿಕಾ ಆಪ್ಟೆ. ಮನೀಶ್ ಮಲ್ಹೋತ್ರಾ ಅವರ ವಸ್ತ್ರವಿನ್ಯಾಸ ಮಾಡಿದ್ದರು. ಹೂವಿನೆಸಳು ಚೆಲ್ಲಿದಂತೆ ಕಾಣುತ್ತಿದ್ದ ಬಿಳಿಯ ಸ್ಕರ್ಟ್. ಅದಕ್ಕೊಪ್ಪುವ ಬೆಳ್ಳಿಬಣ್ಣದ ಎದೆ ಸೀಳು ತೋರುವ ರವಿಕೆ. ಕುತ್ತಿಗೆಯನ್ನಾವರಿಸಿದ ಬಿಳಿಯ ಗರಿ ವಿನ್ಯಾಸ ಅದಕ್ಕಿತ್ತು. ಅವರ ಸ್ಮೋಕಿ ಐ ಹಾಗೂ ನ್ಯೂಡ್ ಲಿಪ್ಸ್ ಮೇಕಪ್ ಸಹ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು.

ಜಾಕ್ವೆಲಿನ್ ಫರ್ನಾಂಡಿಸ್

ತಿಳಿ ಗುಲಾಬಿ ಬಣ್ಣದ ಗೌನ್ ತೊಟ್ಟಿದ್ದ ಜಾಕ್ವೆಲಿನ್ ಫರ್ನಾಂಡಿಸ್ ಡಿಸ್ನಿ ರಾಣಿಯಂತೆ ಕಂಗೊಳಿಸಿದರೆ, ಪ್ರಿಯಾಂಕಾ ಚೋಪ್ರ ಗಾಢ ಗುಲಾಬಿ ಬಣ್ಣದ ದಿರಿಸಿನಲ್ಲಿ ಮಿಂಚಿದರು. ದ ಅಟೆಲಿಯರ್ ಜುಹ್ರಾ ವಿನ್ಯಾಸದ ಗಾಢ ನೀಲಿ ಗೌನ್ ಅಲಿಯಾ ಚೆಲುವನ್ನು ಹೆಚ್ಚಿಸಿದರೆ, ಕತ್ರಿನಾ ಮನೀಶ್ ಮಲ್ಹೋತ್ರಾ ವಿನ್ಯಾಸದ ಚರ್ಮದ ಬಣ್ಣದ ಲೆಹೆಂಗಾದಲ್ಲಿ ಕಾಣಿಸಿಕೊಂಡರು. ಫ್ಲೋರಲ್ ವಿನ್ಯಾಸದ ಕೆಂಪು ಪ್ಯಾಂಟ್ ಸೂಟ್ ಧರಿಸಿದ್ದ ರಣವೀರ್ ಕೂಡ ಫ್ಯಾಷನ್ ಮಂದಿಯ ಮೆಚ್ಚುಗೆ ಪಡೆದರು.

ಬಗೆಬಗೆ ವಿನ್ಯಾಸದೊಂದಿಗೆ ರತ್ನಗಂಬಳಿ ತುಳಿದ ಚೆಲುವೆಯರಲ್ಲಿ ಹೆಚ್ಚಿನವರು ನ್ಯೂಡ್ ಲಿಪ್ಸ್ಟಿಕ್ಗೆ ಮೊರೆಹೋಗಿದ್ದರು ಎನ್ನುವುದು ವಿಶೇಷ.

ರಣವೀರ್ ಸಿಂಗ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.