ಕೃಷಿ ಹಳ್ಳಿಗಳಿಗೆ ಸೀಮಿತ ಎಂದುಕೊಂಡು, ನಗರದ ನಮ್ಮ ಮನೆಗಳಲ್ಲಿ ಪುಟ್ಟ ಕೈ ತೋಟ ಮಾಡಿ ಖುಷಿ ಪಡುವವರು ನಾವು. ಕಚೇರಿಗಳಲ್ಲೂ ಹಸಿರು ಉಳಿಯಲಿ ಎಂಬ ಕಾರಣಕ್ಕೆ ಕಿಟಕಿ ಬಳಿಯೋ, ಗಾರ್ಡನ್ನಲ್ಲೋ ಗಿಡಮರ ಬೆಳೆಸಿ ಸುಮ್ಮನಾಗುತ್ತೇವೆ.

ಆದರೆ ಈ ಕಚೇರಿಯಲ್ಲಿ ಹೀಗಿಲ್ಲ. ಕಚೇರಿ ಒಳಗೆ ಹೋದಾಕ್ಷಣ ಭತ್ತದ ಹೊಲ. ಅಲ್ಲೇ ಕ್ಯಾಬಿನ್ ಒಳಗೆ ಹೋದರೆ ಕೈಗೆಟುಕುವಂತೆ ಬೆಳೆದಿರುವ ಬೆಂಡೇಕಾಯಿ, ಟೊಮೆಟೊ, ಬೀನ್ಸ್, ಬದನೆಕಾಯಿ... ಮೀಟಿಂಗ್ಗೆ ಹೋದಾಗಲೂ ಅಷ್ಟೆ. ಹೈಡ್ರೋಪೋನಿಕ್ನಲ್ಲಿನ ಟೊಮೆಟೊ ಗಿಡಗಳ ನೆರಳಲ್ಲೇ ಮೀಟಿಂಗ್ ನಡೆಯುವುದು.

ಅದಕ್ಕೆ ‘ಟೊಮೆಟೊ ಗೆಸ್ಟ್ ರೂಂ’ ಎಂದು ಹೆಸರಿಟ್ಟಿದ್ದಾರೆ. ಸೆಮಿನಾರ್ ಹಾಲ್ಗಳಲ್ಲೂ ಸೊಪ್ಪುಸದೆ. ಕೆಲಸಕ್ಕೆ ಕೂತರೆ ಅಕ್ಕ ಪಕ್ಕ ಗಿಡಗಳದ್ದೇ ಘಮಲು. ತಿಂಡಿ ತಿನ್ನುವಾಗಲೂ ಎರಡೂ ಬದಿಯ ಶೆಲ್ಫ್ಗಳಲ್ಲಿ ಇಣುಕುತ್ತದೆ ಬೀನ್ಸ್. ಬೇಜಾರಾಯಿತೆಂದು ಮೇಲೆ ಹೋದರೆ ಥರಾವರಿ ಹೂವಿನ ಗಿಡಗಳು ಹಿತ ನೀಡುತ್ತವೆ.

ಮೆಟ್ಟಿಲು ಹತ್ತುವಾಗಲೂ ಅಲ್ಲೇ ಕೈಗೆ ತಾಕುತ್ತದೆ ಕುಂಬಳಕಾಯಿ ಬಳ್ಳಿ. ಹೀಗೆ ಇಡೀ ಕಚೇರಿಯಲ್ಲಿ ಗಿಡಗಳನ್ನು ಬೆಳೆಸಿ, ತನ್ನ ನೌಕರರಿಗೆ ಗುಣಮಟ್ಟದ ಜೀವನ ಪರಿಚಯ ಮಾಡಿಕೊಡುವ ಪ್ರಯತ್ನ ಮಾಡಿರುವುದು ಟೋಕಿಯೊದ ಪಸೋನಾ ಗ್ರೂಪ್. ಹೆಚ್ಚು ಜನಸಂಖ್ಯೆ ಹೊಂದಿರುವ, ಸ್ಥಳಾವಕಾಶದ ಕೊರತೆ ಎದುರಿಸುತ್ತಿರುವ ಜಪಾನ್ನಲ್ಲಿ, ತನ್ನ ಆಫೀಸನ್ನು ಹಸಿರುಗೊಳಿಸಲು ಆರಿಸಿಕೊಂಡಿದ್ದು ಈ ಮಾರ್ಗ.

ಇತ್ತೀಚೆಗೆ ಹೆಚ್ಚು ಪ್ರಚಲಿತವಿರುವ ‘ನಗರ ಕೃಷಿ’ ಪರಿಕಲ್ಪನೆಯನ್ನೇ ಬಳಸಿಕೊಂಡು ತುಂಬಾ ಬುದ್ಧಿವಂತಿಕೆಯಿಂದ ಕಚೇರಿಯ ಪ್ರತಿ ಜಾಗವನ್ನೂ ಬಳಸಿ ಇಡೀ ಆಫೀಸಿನಲ್ಲಿ ತರಕಾರಿ, ಹೂವು, ಹಣ್ಣಿನ ಗಿಡಗಳನ್ನು ಬೆಳೆಸಲಾಗಿದೆ. ಕಚೇರಿಯ 4,000 ಚದರ ಮೀಟರ್ ಜಾಗವನ್ನು ಗಿಡ ಮರಗಳಿಗೆ ಮೀಸಲಿಡಲಾಗಿದೆ. ಒಟ್ಟು ಇನ್ನೂರು ತಳಿಯ ಗಿಡ ಮರಗಳು ಕಚೇರಿ ಒಳಗಿವೆ.

ಹಳ್ಳಿಯಲ್ಲಿ ಕೃಷಿ ಬಿಟ್ಟು ನಗರ ಸೇರುವ ಮಂದಿಗೆ, ಕೃಷಿಯೇ ನಮ್ಮ ಮೂಲ ಎಂಬ ಸಂದೇಶ ನೀಡುವುದೂ ಇದರ ಹಿಂದಿನ ಉದ್ದೇಶವಂತೆ. ಕಚೇರಿಯನ್ನು ಹಸಿರುಮಯವಾಗಿಸುವ ಕೆಲಸ ಆರಂಭವಾಗಿದ್ದು 2010ರಲ್ಲಿ. ಇದರ ವಿನ್ಯಾಸ ಮಾಡಿದ್ದು ಕೋನೊ ಡಿಸೈನ್ ಎಂಬ ಸಂಸ್ಥೆ.

50 ವರ್ಷ ಹಳೆಯದಾದ ಒಂಬತ್ತು ಮಹಡಿಯ ಈ ಕಟ್ಟಡವನ್ನು ಮರುವಿನ್ಯಾಸಗೊಳಿಸಿದ್ದು, ‘ಫಾರ್ಮ್ ಟು ಟೇಬಲ್’ ಎಂಬ ಪರಿಕಲ್ಪನೆಯನ್ನು ಶೇಕಡಾ ನೂರರಷ್ಟು ಇಲ್ಲಿ ಆಚರಣೆಗೆ ತರಲಾಗಿದೆ. ಪ್ರವೇಶದಲ್ಲೇ ಸಾವಿರ ಚದರ ಅಡಿ ಜಾಗದಲ್ಲಿ ಭತ್ತವನ್ನು ಬೆಳೆಯಲಾಗಿದೆ.

ನೆಲಮಹಡಿ ಹಾಗೂ ಮೊದಲ ಮಹಡಿಯಲ್ಲಿ ಗದ್ದೆಯಂತೆ ಮಾಡಲಾಗಿದೆ. ಹೂವುಗಳು, ಔಷಧೀಯ ಸಸ್ಯಗಳು, ತರಕಾರಿಗಳನ್ನು ಕ್ಯಾಬಿನ್ಗಳಲ್ಲಿ ಬೆಳೆಸಲಾಗಿದೆ. ಎರಡನೇ ಮಹಡಿಯಲ್ಲಿ ಹೈಡ್ರೋಪೋನಿಕ್ ಪದ್ಧತಿಯಲ್ಲಿ ಸೊಪ್ಪು, ಟೊಮೆಟೊಗಳನ್ನು ಬೆಳೆಯಲಾಗುತ್ತಿದೆ. ಬೆರ್ರಿಗಳು, ಕುಂಬಳಕಾಯಿ, ಬದನೆಕಾಯಿ, ನಿಂಬೆ ಗಿಡ, ಪಪ್ಪಾಯ, ಬ್ರೊಕೋಲಿ...

ಹೀಗೆ ಬರೋಬ್ಬರಿ ಇನ್ನೂರು ವಿಧದ ಗಿಡಗಳು ಇಲ್ಲಿವೆ. ಕಚೇರಿಯಲ್ಲಿ ಹೆಚ್ಚು ಗೋಡೆಗಳನ್ನು ಕಟ್ಟಲಾಗಿಲ್ಲ. ಬದಲಾಗಿ ಗಿಡಗಳನ್ನೇ ವಿಭಜಕಗಳಂತೆ ರೂಪಿಸಿಕೊಳ್ಳಲಾಗಿದೆ. ಶೆಲ್ಫ್ಗಳಲ್ಲಿ ಔಷಧೀಯ ಗಿಡಗಳನ್ನು ಹಾಕಲಾಗಿದೆ. ಚಿಕ್ಕ ಪುಟ್ಟ ಜಾಗವನ್ನೂ ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಡ್ರಾಯರ್ಗಳಲ್ಲಿ ಬೀಜಗಳನ್ನು ಮೊಳಕೆಯೊಡೆಸಲಾಗುತ್ತದೆ.

ಇದೆಲ್ಲಾ ಸಾಧ್ಯವೇ? ಸೂರ್ಯನ ಕಿರಣ, ಗಾಳಿ ಇಲ್ಲದೇ ಬೆಳೆಯುವುದು ಹೇಗೆ ಎಂಬ ಯೋಚನೆ ಬರುವುದು ಸಹಜ. ಇವುಗಳ ಬದಲಿಯಾಗಿ ಗಿಡಗಳಿಗೆ ಎಲ್ಇಡಿ ಹಾಗೂ ಸ್ಪಾಟ್ಲೈಟ್ ಬಳಸಿಕೊಳ್ಳಲಾಗಿದೆ.

ಅಲ್ಲೇ ಬೆಳೆದು ಅಲ್ಲೇ ತಿನ್ನಿ
ಇಲ್ಲಿ ಬೆಳೆದ ಯಾವುದೇ ಸಾಮಗ್ರಿಯೂ ನೌಕರರಿಗೇ ಮೀಸಲು. ಇಲ್ಲಿ ಕೊಯ್ಲು ಮಾಡಿ, ಇಲ್ಲೇ ನೌಕರರಿಗೆ ಕೆಫೆಟೇರಿಯಾದಲ್ಲಿ ಊಟಕ್ಕೆ ನೀಡಲಾಗುತ್ತದೆ. ಬೇಕೆಂದಾಗ ಹಣ್ಣು, ತರಕಾರಿಯನ್ನು ಕಿತ್ತು ತಿನ್ನುವ ಸ್ವಾತಂತ್ರ್ಯವೂ ಇದೆ. ಕ್ರಿಮಿನಾಶಕ ಬಳಸದೆ ಇರುವುದರಿಂದ ಆರೋಗ್ಯಯುತ ತರಕಾರಿ ತಿನ್ನುವ ಅವಕಾಶ ಇಲ್ಲಿನವರಿಗೆ. ಕಟ್ಟಡದ ಹೊರ ಮೈ ಕೂಡ ಹಸಿರು ಆವೃತ್ತವಾಗಿದ್ದು, ಕಟ್ಟಡವನ್ನು ತಂಪಾಗಿಟ್ಟಿದೆ.

ಇಡೀ ಕಾಂಪ್ಲೆಕ್ಸ್ನ ತಾಪಮಾನ ಕಂಪ್ಯೂಟರ್ ನಿಯಂತ್ರಿತ. ಸ್ವಯಂಚಾಲಿತ ನೀರಾವರಿ ವ್ಯವಸ್ಥೆ, ಸ್ಮಾರ್ಟ್ ಕ್ಲೈಮೇಟ್ ಟೆಕ್ನಾಲಜಿ ಮಾನಿಟರ್ ತೇವಾಂಶ, ತಾಪಮಾನವನ್ನು ಕೆಲಸದ ವೇಳೆಗೆ ತಕ್ಕಂತೆ ನಿಯಂತ್ರಣ ಮಾಡುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.