ಈಗಿಗ ಮನುಷ್ಯರಿಗೆ ನಾಯಿಯ ಮೇಲಿನ ಪ್ರೀತಿ ಹೆಚ್ಚುತ್ತಿದೆ. ಕಾರಿನಲ್ಲಿ ಅಡ್ಡಾಡುವಾಗಲೂ ನಾಯಿ ಜೊತೆಯಲ್ಲಿಯೇ ಇರಬೇಕು. ಆದರೆ ತಾವು ಶಾಪಿಂಗ್ ಮಾಡುವಾಗ ಮಾತ್ರ ನಾಯಿಯನ್ನು ಕಾರಿನಲ್ಲಿಯೇ ಕುಳ್ಳರಿಸಿ ಹೋಗುವುದು ಸಾಮಾನ್ಯ.

ರಷ್ಯಾದಲ್ಲೂ ಹೀಗೆ ಆಗಿದೆ. ಅದರ ಮಾಲೀಕಳು ನಾಯಿ ‘ಜಿನಿಯಸ್’ ಅನ್ನು ಕಾರಿನಲ್ಲಿ ಕುಳ್ಳರಿಸಿ ಶಾಪಿಂಗ್ಗೆ ಹೋಗಿದ್ದಾಳೆ. ಮಹಿಳೆಯರ ಶಾಪಿಂಗ್ ಎಂದ ಮೇಲೆ ಕೇಳಬೇಕೇ? ಹೋಗಿ ಒಂದೆರಡು ಗಂಟೆಯಾದರೂ ವಾಪಸ್ ಬರಲೇ ಇಲ್ಲ. ಪಾಪ ‘ಜೀನಿಯಸ್’ಗೆ ಕೋಪ ನೆತ್ತಿಗೇರಿಬಿಟ್ಟಿತು. ಆದರೆ ಏನೂ ಮಾಡಲು ಆಗದು. ಕಾರು ಲಾಕ್ ಆಗಿರುವ ಕಾರಣ ಅದರಿಂದ ಜಿಗಿಯುವ ಹಾಗೂ ಇರಲಿಲ್ಲ.

ಅದಕ್ಕೇನು ‘ತುರ್ತು ಪರಿಸ್ಥಿತಿ’ ಇತ್ತೋ ಗೊತ್ತಿಲ್ಲ. ಒಟ್ಟಿನಲ್ಲಿ ತನ್ನ ಮಾಲೀಕಳನ್ನು ಕರೆಯಲು ಕೂಗಿ ಕೂಗಿ ಸುಸ್ತಾದ ನಾಯಿ ಕೊನೆಗೆ ಸಾರ್ವಜನಿಕರ ಗಮನ ಸೆಳೆಯಲು ಉಪಾಯ ಮಾಡಿತು. ಅದೇನೆಂದರೆ ಕಾರಿನ ಹಾರ್ನ್ ಹೊಡೆಯುವುದು. ಒಂದು ಸಲ ಹಾರ್ನ್ ಮಾಡಿದರೆ ಯಾರ ಗಮನಕ್ಕೂ ಬರುವುದಿಲ್ಲವೆಂದು ತಿಳಿದ ನಾಯಿ, ನಿರಂತರವಾಗಿ 15–20 ನಿಮಿಷ ಹಾರ್ನ್ ಹೊಡೆಯುತ್ತಲೇ ಹೋಯಿತಂತೆ.

ಮೊದಮೊದಲು ಜನರು ಅದನ್ನು ನೋಡಿ ಸುಮ್ಮನೇ ಹೋದರು, ಕೆಲವರು ಇದ್ಯಾರಿದು ಈ ಪರಿಯಲ್ಲಿ ಹಾರ್ನ್ ಮಾಡುತ್ತಿದ್ದಾರೆ ಎಂದು ಶಪಿಸುತ್ತಾ ಹೋದರು. ಆಮೇಲೆ ಹಾರ್ನ್ ಪ್ರಮಾಣ ತೀವ್ರವಾದಾಗ ಬೇಸ್ತು ಬಿದ್ದ ಜನರು ಏನೋ ಅವಘಡ ಸಂಭವಿಸಿದೆ ಎಂದು ಇಣುಕಿ ನೋಡಿದಾಗ ನಾಯಿ ಈ ರೀತಿ ಮಾಡುತ್ತಿದ್ದುದು ಕಂಡುಬಂತು.

ಕೊನೆಗೂ ಈ ಹಾರ್ನ್ ಉಪಟಳ ಜಾಸ್ತಿಯಾಯಿತೋ, ಅಲ್ಲಿದ್ದವರೆಲ್ಲ ಆ ನಾಯಿಯ ಮಾಲೀಕಳನ್ನು ಕೊನೆಗೂ ಹುಡುಕಿ ತಂದು ಮಾಲೀಕಳ ಶಾಪಿಂಗ್ಗೆ ಮಂಗಳ ಹಾಡಿದರು! ನಾಯಿಯ ಹಾರ್ನ್ ತರ್ಲೆಯನ್ನು ಈ ಲಿಂಕ್ ಟೈಪಿಸಿ ನೋಡಬಹುದು. goo.gl/Jegaqp

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.