ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿನ್ನ ಮನದಲ್ಲಿಷ್ಟು ಜಾಗ ಕೊಡು ಪ್ಲೀಸ್

Last Updated 27 ನವೆಂಬರ್ 2017, 19:30 IST
ಅಕ್ಷರ ಗಾತ್ರ

* ನಾವೇನೋ ಆಗಾಗ ಸುಳ್ಳು ಹೇಳ್ತೀವಿ. ಹಾಗಂತ ನೀವು ಹುಡುಗರು ಸುಳ್ಳು ಹೇಳಿದ್ರೆ ನಮಗೆ ಇಷ್ಟ ಆಗಲ್ಲ

* ನಮ್ಮ ಜೊತೆಗೆ ತಿರುಗುವಾಗ ಹುಡುಗರು ಒಳ್ಳೇ ಬಟ್ಟೆ ಅಷ್ಟೇ ಅಲ್ಲ, ಒಳ್ಳೇ ಚಪ್ಪಲಿ–ಶೂ ಕೂಡಾ ಹಾಕಿರಬೇಕು

* ಕೇಳಿಸಿಕೊಳ್ಳೋಕೆ ಹುಡುಗಿ ಇದ್ದಾಳೆ ಅಂದ್ರೆ ಸಾಕು, ಈ ಹುಡುಗ್ರು ಸಿಕ್ಕಾಪಟ್ಟೆ ಮಾತಾಡ್ತಾರೆ. ನಮಗೂ ಮಾತನಾಡೋಕೆ ಅವಕಾಶಕೊಡಿ. ನಾವು ಹೇಳೋದನ್ನೂ ಕೇಳಿಸಿಕೊಳ್ಳಿ.

* ಕಮಿಟ್ ಆಗೋಕೆ ಮೊದ್ಲು ಕಾರಣ ಹುಡುಕಿ ಗಿಫ್ಟ್‌ ಕೊಡ್ತಾರೆ. ಆಮೇಲೆ, ಹೇಗೂ ಕಮಿಟ್ ಆಗಿದ್ದಾಳೆ ಅಂತ ನೆಗ್ಲೆಕ್ಟ್ ಮಾಡ್ತಾರೆ. ಇದು ತಪ್ಪು ಅನಿಸಲ್ವಾ? ಕ್ರಶ್, ಕಮಿಟ್, ಲವ್, ಮದ್ವೆ ನಿಮ್ಮ ಪ್ರೀತಿ ಯಾವ ಹಂತದಲ್ಲಿ ಬೇಕಾದ್ರೂ ಇರಲಿ. ಆಗಾಗ ಸಣ್ಣಪುಟ್ಟ ಗಿಫ್ಟ್‌ ಕೊಡಿ.

* ಜಗತ್ತಿನಲ್ಲಿ ನಿಮಗೊಬ್ಬರಿಗೆ ಕೆಲಸ ಇರೋದಲ್ಲ. ಪ್ರೀತಿಯ ಹುಡುಗಿ ಫೋನ್ ಮಾಡಿದಾಗ ಹಲೊ ಅನ್ನಿ. ಆಫೀಸಲ್ಲಿದ್ರೆ ಎರಡು ನಿಮಿಷ ಹೊರಗೆ ಬಂದು ಮಾತನಾಡಿ. ಅವಳು ಫೋನ್ ಮಾಡಿದಾಗ ಕಟ್ ಮಾಡಬೇಡಿ, ರಿಸೀವ್ ಮಾಡಿ ‘ಬ್ಯುಸಿ ಇದ್ದೀನಿ’ ಅನ್ನಿ. ನಿಮ್ಮ ಕೆಲಸದ ಒತ್ತಡ ಅರ್ಥಮಾಡಿಕೊಳ್ಳದಷ್ಟು ದಡ್ಡರಲ್ಲ ನಾವು.

* ಹುಡುಗಿಯರಿಗೆ ಹೊಗಳಿಕೆ ಇಷ್ಟ. ಹಾಗಂತ ಮುಖಸ್ತುತಿ ಮಾಡಿದರೆ ಅಸಹ್ಯ ಆಗುತ್ತೆ. ಅತಿ ಎನಿಸದಂತೆ, ಆದರೆ ಆಕೆಗೆ ಇಷ್ಟವಾಗುವಂತೆ ಇಷ್ಟಿಷ್ಟೇ ಹೊಗಳಿನೋಡಿ. ಅವಳು ನೀವು ಅಂದ್ರೆ ಪ್ರಾಣ ಬಿಡ್ತಾಳೆ.

* ಹುಡುಗೀರು ಸಾಮಾನ್ಯವಾಗಿ ಪಟಾಕಿ ಹಾರಿಸೋ (ಜೋಕ್ಸ್‌ ಮಾಡುವ) ಹುಡುಗನ್ನೇ ಇಷ್ಟಪಡ್ತಾರೆ. ತಮಾಷೆ ಮಾಡಿ, ಹಾಗಂತ ಅತಿಯಾಗಿ ಆಡಬೇಡಿ.

* ಏನಾದ್ರೂ ಕೆಲಸ ಮಾಡಿದ ಮೇಲೆ ಜಂಭ ಕೊಚ್ಚಿಕೊಳ್ಳುವವರನ್ನು ಕಂಡ್ರೆ ಈಗಿನ ಕಾಲದ ಹುಡುಗಿಯರಿಗೆ ಆಗಲ್ಲ. ಕೆಲಸ ಆರಂಭಿಸುವ ಮೊದಲು ಅವಳಿಗೆ ಒಂದು ಮಾತು ತಿಳಿಸಿ. ಆಗಷ್ಟೇ ಅವಳಿಗೆ ತಾನು ನಿಮ್ಮ ಬದುಕಿನ ಭಾಗ ಅನಿಸುತ್ತೆ.

* ನಿಮಗೆ ನಿಮ್ಮ ಅಪ್ಪ–ಅಮ್ಮನಷ್ಟೇ, ಆಕೆಗೆ ಅವಳ ಅಪ್ಪ–ಅಮ್ಮನೂ ಮುಖ್ಯ. ತಮಾಷೆಗೂ ಆಕೆಯ ಪೋಷಕರ ಬಗ್ಗೆ ಹೀಗಳೆದು ಮಾತನಾಡದಿರಿ.

* ನೀವು ಅವಳನ್ನು ಇಷ್ಟಪಡುವುದು ಆಕೆಯ ಸ್ವಾತಂತ್ರ್ಯಕ್ಕೆ ನಿರ್ಬಂಧ ಆಗಬಾರದು. ವಿಪರೀತ ಪೊಸೆಸಿವ್ ಆಗಿರುವ ಹುಡುಗರನ್ನು ಕಂಡರೆ ಹುಡುಗೀರಿಗೆ ಓಡಿಹೋಗಬೇಕು ಅನಿಸುತ್ತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT