ಇತ್ತೀಚಿನ ದಿನಗಳಲ್ಲಿ ಕಂಪ್ಯೂಟರ್ ಸಂಬಂಧಿತ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಹ್ಯಾಕಿಂಗ್, ಫಿಶಿಂಗ್, ಐಡೆಂಟಿಟಿ ಥೆಫ್ಟ್ ಹೀಗೆ ನಾನಾ ವಿಧದಲ್ಲಿ ಕಂಪ್ಯೂಟರ್ ದುರ್ಬಳಕೆ ಆಗುತ್ತಿದೆ.

ಈಚೆಗಷ್ಟೆ ಜಾಗತಿಕವಾಗಿ ಲಕ್ಷಾಂತರ ಮಂದಿಯ ಆನ್ ಲೈನ್ ಬ್ಯಾಂಕಿಂಗ್ ಪಾಸ್ ವರ್ಡ್ ದೋಚಿದ ಅಪಾಯಕಾರಿ ವೈರಸ್ ‘ಹಾರ್ಟ್ ಬ್ಲೀಡ್’ ಭಾರತಕ್ಕೂ ಕಾಲಿಟ್ಟಿದೆ. ಇದು ಆನ್ ಲೈನ್ ರಕ್ಷಣಾ ವ್ಯವಸ್ಥೆಯಾದ ಸೆಕ್ಯೂರ್ ಸಾಕೇಟ್ಸ್ ಲೇಯರ್ (ಎಸ್ ಎಸ್ ಎಲ್) ಅನ್ನು ಹ್ಯಾಕ್ ಮಾಡಿ ಪಾಸ್‌ವರ್ಡ್‌ಗಳನ್ನು ಕದಿಯುವ ಆತಂಕ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಕಚೇರಿ ಬಳಕೆಯ ಅಥವಾ ಸ್ವಂತ ಬಳಕೆಯ ಕಂಪ್ಯೂಟರ್ ರಕ್ಷಣೆಗೆ ಅನುಸರಿಸಬಹುದಾದ ಕೆಲವು ಉಪಾಯಗಳು ಇಲ್ಲಿವೆ.

ಸೂಕ್ತ ಪಾಸ್ವರ್ಡ್ ಬಳಕೆ
ಕಂಪ್ಯೂಟರ್ ಪಾಸ್‌ವರ್ಡ್ ಬಳಕೆ ಈಗ ಸಾಮಾನ್ಯವಾಗಿದೆ. ಆದರೆ ಎಲ್ಲದಕ್ಕೂ ಒಂದೇ ರೀತಿಯ ಸರಳ ಪಾಸ್‌ವರ್ಡ್ ಬಳಕೆ, ‘ಪಾಸ್ ವರ್ಡ್ ಹ್ಯಾಕ್’ಗೆ ಕಾರಣವಾಗಿದೆ.

ಹೀಗಾಗಿ ಅಕ್ಷರ, ಸಂಖ್ಯೆ, ಚಿಹ್ನೆಗಳುಳ್ಳ ಕನಿಷ್ಠ 14 ಸಂಕೇತದ ಪಾಸ್‌ವರ್ಡ್ ಬಳಸಿದರೆ ಸುಲಭಕ್ಕೆ ಬ್ರೇಕ್ ಮಾಡಲಾಗದು. ಉದಾಹರಣೆಗೆ, raghu@ramana183.

ಹೀಗಿದ್ದರೂ ತಿಂಗಳಿಗೆ ಒಮ್ಮೆ ಪಾಸ್‌ವರ್ಡ್ ಬದಲಿಸಲೇಬೇಕು. ಒಂದೊಮ್ಮೆ ಮರೆತರೆ ಕನಿಷ್ಠ ಮೂರು ತಿಂಗಳಿಗೆ ಒಮ್ಮೆ ಪಾಸ್‌ವರ್ಡ್ ಬದಲಿಸುವುದು ಅತ್ಯಗತ್ಯ.

ಡೆಸ್ಕ್ ಟಾಪ್ ಲಾಕ್
ಬಹಳಷ್ಟು ಜನ ಪಾಸ್‌ವರ್ಡ್ ಬಳಸಿ ಕಂಪ್ಯೂಟರ್ ಲಾಗ್ ಇನ್ ಮಾಡುತ್ತಾರೆ. ಆದರೆ ವಿರಾಮದ ವೇಳೆ ಹೊರ ಹೋಗುವಾಗ ಡೆಸ್ಕ್‌ಟಾಪ್ ಲಾಕ್ ಮಾಡುವುದು ಮರೆಯುತ್ತಾರೆ. ಇದು ಸಹ ಕಂಪ್ಯೂಟರ್ ದುರ್ಬಳಕೆಗೆ ಮುಖ್ಯ ಕಾರಣ. ಹೀಗಾಗಿ ಡೆಸ್ಕ್ ಟಾಪ್ ಲಾಗ್ ಮಾಡಲು Windows key+L ಕೀ ಬಳಸುವುದು ಸೂಕ್ತ.

ಫಿಶಿಂಗ್ ದಾಳಿ, ಐಡೆಂಟಿಟಿ ಥೆಫ್ಟ್ ತಡೆ
ಇಂದು ಆನ್‌ಲೈನ್ ಬಳಕೆದಾರರನ್ನು ಹೆಚ್ಚು ಕಾಡುತ್ತಿರುವುದು ಫಿಷಿಂಗ್ ದಾಳಿ ಮತ್ತು ವೈಯಕ್ತಿಕ ಮಾಹಿತಿ ಕಳವು.
ಫೇಸ್‌ಬುಕ್, ಯಾಹೂ, ಗೂಗಲ್ ಅಮೆಜಾನ್ ನಂತಹ ಜನಪ್ರಿಯ ವೆಬ್ ಸೈಟ್ ಗಳಿಗೆ ನಕಲಿ ಇಮೇಲ್, ವೆಬ್ ಲಿಂಕ್ ಕಳುಹಿಸಿ, ಪಾಸ್‌ವರ್ಡ್ ದೋಚುವುದು, ಇಮೇಲ್ ನಲ್ಲಿರುವ ವೈಯಕ್ತಿಕ ಮಾಹಿತಿ ಕಳವು ಮಾಡಿ ಜಾಹೀರಾತು ಕಂಪೆನಿಗಳಿಗೆ ಮಾರಲಾಗುತ್ತಿದೆ. ಇದೆಲ್ಲದರಿಂದ ರಕ್ಷಣೆ ಪಡೆಯಲು ಕಾಲಕಾಲಕ್ಕೆ ಹೊಸ ಆವೃತ್ತಿಯ (latest version) ವೆಬ್ ಬ್ರೌಸರ್ ಬಳಸುವುದು ಒಳಿತು.

ಸಾಫ್ಟ್ ವೇರ್ ಅಪ್ ಡೇಟ್
ಹೇಗೆ ಹೊಸ ಸಾಫ್ಟ್‌ವೇರ್ ರೂಪುಗೊಳ್ಳು ತ್ತವೋ ಅಂತೆಯೇ ಹೊಸ ಹೊಸ ವೈರಸ್‌ಗಳೂ ಹುಟ್ಟಿಕೊಳ್ಳುತ್ತಲೇ ಇರುತ್ತವೆ. ಹೀಗಾಗಿ ವಿಂಡೋಸ್ ಅಪ್‌ಡೇಟ್ ಜತೆಗೆ ವೆಬ್ ಬ್ರೌಸರ್, ಆ್ಯಂಟಿ ವೈರಸ್ ಸಾಫ್ಟ್‌ವೇರ್ ಅನ್ನು ಅತ್ಯಗತ್ಯವಾಗಿ ಕಾಲಕಾಲಕ್ಕೆ ಅಪ್‌ಡೇಟ್ ಮಾಡುತ್ತಲೇ ಇರಬೇಕು. ಸದಾ ಆನ್ ಲೈನ್ ನಲ್ಲಿರುವವರು ನಾಲ್ಕು ಗಂಟೆಗೆ ಒಮ್ಮೆ, ಅಪರೂಪಕ್ಕೆ ಆನ್‌ಲೈನ್ ಬಳಸುವವರು ಕನಿಷ್ಟ 15 ದಿನಕ್ಕೊಮ್ಮೆ ಅಪ್‌ಡೇಟ್ ಮಾಡುವುದು ಅತ್ಯಗತ್ಯ. ಆಗ ಮಾತ್ರ ಕಂಪ್ಯೂಟರ್ ರಕ್ಷಣೆ ಮತ್ತು ಮಾಹಿತಿ ಸುರಕ್ಷತೆ ಸಾಧ್ಯ. ಕೆಲವು ಉಚಿತ ಆ್ಯಂಟಿ ವೈರಸ್ ತಕ್ಕ ಮಟ್ಟಿಗೆ ಪರಿಣಾಮಕಾರಿಯಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.