ಬೆಂಗಳೂರು: ದಾಬಾಸ್ ಪೇಟೆ – ಹೊಸಕೋಟೆ ಹೆದ್ದಾರಿ ಬಳಿಯ ಸತ್ಯವಾರದ ಬಳಿ ಸರಣಿ ಅಪಘಾತ ಸಂಭವಿಸಿ, ಏಳು ಜನ ಮೃತಪಟ್ಟ ಘಟನೆ ಶುಕ್ರವಾರ ಬೆಳ್ಳಂಬೆಳಗ್ಗೆ ನಡೆದಿದೆ. ಈ ಸುದ್ದಿ ಕೇಳಿದವರೊಬ್ಬರು ‘ಅಯ್ಯೋ, ಇವತ್ತು 13ನೇ ತಾರೀಕಲ್ವಾ’ ಎಂದು ಉದ್ಘರಿಸಿದರು.

13ನೇ ತಾರೀಕಾದ್ರೆ ಏನು ವಿಶೇಷ ಎಂಬುದು ಮರು ಪ್ರಶ್ನೆಯಾಗಿತ್ತು. 13ನೇ ತಾರೀಕು ಅದೂ ಶುಕ್ರವಾರ ಇಂಥ ದುರ್ಘಟನೆ ನಡೆಯುತ್ತವೆ ಎಂಬ ಉತ್ತರ ಅವರದ್ದಾಗಿತ್ತು.

ಹೌದು, 13ನೇ ತಾರೀಕು ಶುಕ್ರವಾರವಾದರೆ ಮುಂದುವರಿದ ಪಾಶ್ಚಾತ್ಯ ರಾಷ್ಟ್ರಗಳನ್ನೂ ಒಳಗೊಂಡು ಜಗತ್ತಿನ ಬಹುತೇಕ ಕಡೆ ಬೆಚ್ಚಿ ಬೀಳುತ್ತಾರೆ.

ಶತಮಾನಗಳಿಂದಲೂ ಇಂಥದ್ದೊಂದು ಭಯ ಪಾಶ್ಚಾತ್ಯರಲ್ಲಿ ಹುದುಗಿದೆ. ಈ ದಿನವನ್ನು ಅಶುಭ ಎಂದೂ ಕರೆಯುವವರುಂಟು. ಶುಕ್ರವಾರ ದಿನಾಂಕ 13ರಾಗಿದ್ದರೆ ಮನೆಯಿಂದ ಹೊರಬರುವವರೂ ವಿರಳ. ದೊಡ್ಡ ನಿರ್ಧಾರಗಳಾವುವನ್ನೂ ಈ ದಿನ ತೆಗೆದುಕೊಳ್ಳುವುದಿಲ್ಲ. ಹೊಸ ಯೋಜನೆಗಳ ಆರಂಭವಂತೂ ಇಲ್ಲವೇ ಇಲ್ಲ.

ಇಷ್ಟು ಮಾತ್ರವಲ್ಲ ಶುಕ್ರವಾರ ಮತ್ತು 13ನೇ ತಾರೀಕು ಜತೆಗೂಡಿ ಸೃಷ್ಟಿಸಿರುವ ಭಯಕ್ಕೆ ಇಂಗ್ಲಿಷ್ ನಿಘಂಟುವಿನಲ್ಲಿ ಹೆಸರೇ ಸೃಷ್ಟಿಯಾಗಿದೆ ಎಂದರ ಈ ಭಯವನ್ನು ಅಂದಾಜಿಸಬಹುದು. ಪ್ಯಾರಾಸ್ಕೆವಿಡೆಕಟ್ರಿಯಾಫೋಬಿಯಾ (paraskevidekatriaphobia) ಎಂಬ ಹೆಸರನ್ನು ಮನೋವಿಜ್ಞಾನಿ ಡಾ. ಡೊನಾಲ್ಡ್ ಡೋಸ್ಸಿ ಅವರು ಸೃಷ್ಟಿಸಿದರು. ಸಂಖ್ಯೆ 13ರ ಕುರಿತು ಉಂಟಾಗುವ ಭಯಕ್ಕೆ ‘ಟ್ರೈಸ್ಕೀಡೆಕಾಫೋಬಿಯಾ’ ಎಂದೂ ಕರೆಯಲಾಗುತ್ತದೆ. ಅಮೆರಿಕದಲ್ಲಿ ಸುಮಾರು 2 ಕೋಟಿಯಷ್ಟು ಜನ ಶುಕ್ರವಾರ–13ರ ಸಂಖ್ಯೆಯ ಭಯ ಹೊಂದಿದ್ದಾರೆ ಎಂದು ವಿಜ್ಞಾನಿ ಹೇಳಿದ್ದಾರೆ.

ಅಷ್ಟಕ್ಕೂ ಈ ಭಯ ಹುಟ್ಟುಕೊಂಡಿದ್ದಾದರೂ ಎಲ್ಲಿಂದ?

ಮೂಡನಂಬಿಕೆ ಆಧಾರಿತ ಈ ಭಯದ ಮೂಲ ಯಾವುದು ಎಂಬುದು ಸ್ಪಷ್ಟವಾಗಿಲ್ಲ. ಆದರೆ ಧಾರ್ಮಿಕ ಹಾಗೂ ಇತಿಹಾಸದ ಹಲವು ಘಟನೆಗಳನ್ನು ಆಧರಿಸಿ ಇಂಥದ್ದೊಂದು ಭಯವನ್ನು ಕೆಲವರು ಬೆಳೆಸಿಕೊಂಡಿದ್ದಾರೆ.

ದೇವಲೋಕದಲ್ಲಿ 12 ದೇವರು ಭೋಜನಕ್ಕೆ ಕುಳಿತಾಗ ಲೋಕಿ ಎಂಬುವವರು 13ನೇ ಅತಿಥಿಯಾಗಿ ಕೂಟ ಪ್ರವೇಶ ಮಾಡಿದಾಗ ಗಂಡಾಂತರ ಸಂಭವಿಸಿತಂತೆ. ಲಾಸ್ಟ್ ಸಪ್ಪರ್ನಲ್ಲಿ ಜೀಸಸ್ನ ಶಿಷ್ಯರಾಗಿ ಅವರಿಗೆ ವಂಚಿಸಿದ ವ್ಯಕ್ತಿ 13ನೇ ಅತಿಥಿಯಾಗಿ ಪಾಲ್ಗೊಂಡಿದ್ದರು ಎಂಬ ನಂಬಿಕೆಯೂ ಇದೆ. ಇವೆಲ್ಲವೂ ಸೇರಿ ಜನರ ಮನಸ್ಸಿನಲ್ಲಿ 13ನೇ ತಾರೀಕು ಶುಕ್ರವಾರ ಎಂದರೆ ಭಯ ಮೂಡಿದೆ.

ಐರೋಪ್ಯ ರಾಷ್ಟ್ರಗಳಲ್ಲಿ ಕ್ಯಾಲೆಂಡರ್ ಮಾತ್ರವಲ್ಲ, ಕೆಲ ಕಟ್ಟಡಗಳಲ್ಲಿ 13 ಎಂಬ ಸಂಖ್ಯೆಯನ್ನೇ ತೆಗೆದಿರುವ ಉದಾಹರಣೆಗಳೂ ಇವೆ. ಇನ್ನೂ ಕೆಲವರು ಈ ದಿನಾಂಕ ಹತ್ತಿರ ಬಂತೆಂದರೆ ಭಯದಿಂದ ಅನಾರೋಗ್ಯಕ್ಕೆ ತುತ್ತಾಗುವುದೂ ಇದೆ.

ಇಷ್ಟು ಸಾಲದು ಎಂಬಂತೆ ಜಗತ್ತಿನ ಕೆಲ ದುರ್ಘಟನೆಗಳು ಇದೇ ದಿನ ಸಂಭವಿಸಿದ ಉದಾಹರಣೆಗಳೂ ಇವೆ. 2012ರ ಜನವರಿಯ 13ರಂದು ಶುಕ್ರವಾರ ಗಿಗಿಲಿಯೊ ದ್ವೀಪದಲ್ಲಿ ಕೋಸ್ಟ ಕಾನ್ಕಾರ್ಡಿಯಾ ಕ್ರೂಸ್ ಹಡಗು ಮುಳುಗಿ 32 ಜನ ಮೃತಪಟ್ಟಿದ್ದರು. 1972ರ ಅಕ್ಟೋಬರ್ 13 (ಶುಕ್ರವಾರ) ಉರುಗ್ವೆ ವಿಮಾನ ಪತನಗೊಂಡಿತ್ತು. 1939ರ ಫೆ. 13 (ಶುಕ್ರವಾರ) ಆಸ್ಟ್ರೇಲಿಯಾದಲ್ಲಿ ಕಾಳ್ಗಿಚ್ಚು ಹಬ್ಬಿದ್ದರಿಂದ 71 ಜನ ಮೃತಪಟ್ಟಿದ್ದರು. ಇವೆಲ್ಲವೂ ಕೆಲವರ ಮೂಡನಂಬಿಕೆಯನ್ನು ಇನ್ನಷ್ಟು ಗಾಢವನ್ನಾಗಿಸಿವೆ.

2026ರಲ್ಲಿ ಯಾವಾಗೆಲ್ಲಾ ಶುಕ್ರವಾರ–13 ಜತೆಯಾಗಲಿದೆ

2026ರಲ್ಲಿ ಒಟ್ಟು ಮೂರು ದಿನ ಇಂಥದ್ದೊಂದು ‘ಸಂಗಮ’ವಾಗಲಿದೆ. ಫೆಬ್ರುವರಿ 13, ಮಾರ್ಚ್ 13 ಮತ್ತು ನವೆಂಬರ್ 13ರ ದಿನ ಶುಕ್ರವಾರವಾಗಲಿದೆ

ಹಾಗಿದ್ದರೆ 13ನೇ ತಾರೀಕು ಶುಕ್ರವಾರ ಅಶುಭವೇ?

ಶುಕ್ರವಾರದಂದು 13ನೇ ತಾರೀಕು ಬಂದಲ್ಲಿ ಅದನ್ನು ಅಶುಭ ಎಂದು ಶತಮಾನಗಳಿಂದ ನಂಬಿಕೆ ಉಳಿದುಕೊಂಡೇ ಬಂದಿದೆ. ಆದರೆ ಇದು ವೈಜ್ಞಾನಿಕವಾಗಿ ಸಾಬೀತಾಗಿಲ್ಲ. ಅಪಘಾತ, ಹಣಕಾಸು ನಷ್ಟ ಅಥವಾ ಇನ್ಯಾವುದೇ ಕೆಟ್ಟ ಸಂಗತಿಗಳು ಈ ದಿನದಂದು ಹೆಚ್ಚಾದ ಉದಾಹರಣೆಯೇ ಇಲ್ಲ. ಭಾರತದಲ್ಲಂತೂ ಇಂಥದ್ದೊಂದು ಮೂಢನಂಬಿಕೆ ಇಲ್ಲ.

ಈ ದಿನವನ್ನು ಶುಭವೆಂದುಕೊಂಡರೆ ಶುಭ, ಅಶುಭವೆಂದುಕೊಂಡರೆ ಅಶುಭದಂತೆ ಭಾಸವಾಗುತ್ತದೆ ಎಂದು ಮನೋವಿಜ್ಞಾನಿಗಳು ಹೇಳಿದ್ದಾರೆ.

‘ಭಾರತದ ವೈದಿಕ ಜ್ಯೋತಿಷ್ಯದ ಪ್ರಕಾರ ಶುಭ ಅಶುಭ ದಿನವನ್ನು ತಿಥಿ, ವಾರ, ನಕ್ಷತ್ರ, ಯೋಗ, ಕರಣಗಳನ್ನು ಆಧರಿಸಿ ನಿರ್ಧಾರ ಮಾಡಲಾಗುತ್ತದೆ. ಗ್ರಹಗಳ ಸ್ಥಾನ ಬದಲಾವಣೆ, ರಾಹು-ಕೇತುಗಳ ಪ್ರಭಾವ ಹಾಗೂ ಶುಭ ಮುಹೂರ್ತಗಳನ್ನು ನೋಡಿ ಹೇಳಲಾಗುತ್ತದೆ. ದಿನಾಂಕ ಮೂಲಕ ಶುಭ– ಅಶುಭ ದಿನ ಎಂದು ಹೇಳುವ ಪದ್ದತಿ ನಮ್ಮ ಭಾರತೀಯ ಜ್ಯೋತಿಷ್ಯ ಪದ್ಧತಿ ಪ್ರಕಾರ ಯಾವ ಜ್ಯೋತಿಷ್ಯ ಗ್ರಂಥಗಳಲ್ಲಿಯೂ ತಿಳಿಸಿಲ್ಲ’ ಎಂದೆನ್ನುತ್ತಾರೆ ಜ್ಯೋತಿಷಿ ವಿಠಲ ಭಟ್.

ಭಯವನ್ನೂ ಮೀರಿಸುವ ಸಂಭ್ರಮಾಚರಣೆ

ಇದನ್ನೂ ಮೀರುವ ಸಲುವಾಗಿಯೇ ಜಗತ್ತಿನ ಹಲವೆಡೆ 13ನೇ ತಾರೀಕು ಶುಕ್ರವಾರದಂದು ‘ಭಯ’ದ ಬದಲಾಗಿ ಹೆಚ್ಚು ಸಂಭ್ರಮ, ಸಂತೋಷದಿಂದ ಕಳೆಯಲು ಹಲವು ಸಂಕಲ್ಪ ಮಾಡಿದ್ದಾರೆ. ಇದಕ್ಕಾಗಿ ಹಲವೆಡೆ ಸ್ನೇಹಿತರ ಜತೆಗೂಡಿ ಭಯ ಮೂಡಿಸುವ ಹಾರಾರ್ ಚಿತ್ರಗಳನ್ನು ನೋಡಿ ಸಂಭ್ರಮಪಡುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ಇನ್ನೂ ಕೆಲವೆಡೆ ಸಣ್ಣ ಪಾರ್ಟಿಗಳನ್ನು ಆಯೋಜಿಸಲಾಗುತ್ತದೆ. ಮೂಡನಂಬಿಕೆ ಮೀರುವ ಸವಾಲುಗಳುಳ್ಳ ಆಟಗಳನ್ನು ಆಡಿಸಿ ಸಂಭ್ರಮಿಸಲಾಗುತ್ತದೆ. ಇನ್ನೂ ಕೆಲವರು ಇತರ ದಿನಗಳಂತೆ ಇದೂ ಒಂದು ದಿನ ಎಂದು ಕಳೆಯುತ್ತಾರೆ. ಹೀಗಾಗಿ ಇದು ನೈಜತೆಗಿಂತ ಭಿನ್ನವಾಗಿ ಸಾಂಸ್ಕೃತಿಕವಾಗಿ ಕುತೂಹಲ ಮೂಡಿಸುವ ದಿನವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.