ಆಫ್ಘಾನಿಸ್ತಾನ ಅಧ್ಯಕ್ಷ ಹಮೀದ್ ಕರ್ಜೈ ಅವರು ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳ ಪಾಲ್ಗೊಳ್ಳುವಿಕೆ ಇಲ್ಲದೇ ಭಯೋತ್ಪಾದಕರೊಂದಿಗೆ ಶಾಂತಿ ಒಪ್ಪಂದ ಮಾಡಿಕೊಳ್ಳುವ ಉದ್ದೇಶದಿಂದ ತಾಲಿಬಾನ್ ಸಂಘಟನೆ ಜೊತೆ ರಹಸ್ಯ ಸಂಪರ್ಕ ಸಾಧಿಸಿರುವುದು ಅಮೆರಿಕದ ಅಸಮಾಧಾನಕ್ಕೆ ಕಾರಣವಾಗಿದೆ. ಈಗಾಗಲೇ ಹದಗೆಟ್ಟಿರುವ ಉಭಯ ರಾಷ್ಟ್ರಗಳ ನಡುವಣ ಸಂಬಂಧಕ್ಕೆ ಈ ಬೆಳವಣಿಗೆ ಇನ್ನಷ್ಟು ಹುಳಿ ಹಿಂಡಿದೆ.

ಈ ವರ್ಷದ ಕೊನೆಗೆ ಆಫ್ಘಾನಿಸ್ತಾನದಲ್ಲಿ ಭಯೋತ್ಪಾದಕರ ವಿರುದ್ಧದ ಸಮರ ಸ್ಥಗಿತಗೊಂಡ ನಂತರವೂ ತರಬೇತಿ ಮತ್ತು ಭಯೋತ್ಪಾದನೆ ನಿಗ್ರಹ ಕಾರ್ಯಗಳಿಗಾಗಿ ಅಮೆರಿಕ ಸೇನೆ ಅಲ್ಲಿ ಉಳಿದುಕೊಳ್ಳಲು ಅವಕಾಶ ಕಲ್ಪಿಸುವ ಸುದೀರ್ಘ ಅವಧಿಯ ಭದ್ರತಾ ಒಪ್ಪಂದಕ್ಕೆ ಅಮೆರಿಕದೊಂದಿಗೆ ಸಹಿ ಹಾಕಲು ಹಮೀದ್ ಕರ್ಜೈ ನಿರಾಕರಿಸುತ್ತಿದ್ದಾರೆ. ಬದಲಿಗೆ, ಜೈಲಿನಲ್ಲಿರುವ ತಾಲಿಬಾನ್ ಉಗ್ರರನ್ನು ಬಿಡುಗಡೆ ಮಾಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಅಮೆರಿಕದ ನೀತಿಗಳ ವಿರುದ್ಧ ಕಿಡಿ ಕಾರುತ್ತಿರುವ ಅವರು ಅಮೆರಿಕ ನಡೆಸಿರುವ ಯುದ್ಧಾಪರಾಧಗಳಿಗೆ ಸಾಕ್ಷ್ಯಗಳು ಎಂದು ಹೇಳಲಾದ ದಾಖಲೆಗಳನ್ನು ಹಂಚುತ್ತಿದ್ದಾರೆ.

ತಾಲಿಬಾನ್ ಸಂಘಟನೆಯೊಂದಿಗೆ ಕರ್ಜೈ ಹೊಂದಿರುವ ರಹಸ್ಯ ಸಂಪರ್ಕ ಅವರಿಗೆ ಹೇಳುವಷ್ಟು ಮಟ್ಟಿಗೆ ಲಾಭ ತಂದಿಲ್ಲ ಎಂದು ರಹಸ್ಯ ಸಂಪರ್ಕದ ಬಗ್ಗೆ ಮಾಹಿತಿ ಉಳ್ಳವರು ಹೇಳುತ್ತಾರೆ. ಆದರೆ, ಇದು ಅಮೆರಿಕ ಮತ್ತು ಕರ್ಜೈ ನಡುವೆ ಉಳಿದುಕೊಂಡಿದ್ದ ಅಲ್ಪ ಸ್ವಲ್ಪ ನಂಬಿಕೆಯನ್ನು ಹಾಳುಗೆಡವಿದೆ. ಜೊತೆಗೆ, ಕೊನೆ ತಲುಪಿದ್ದರೂ ಗೊಂದಲದ ಗೂಡಾಗಿ ಮಾರ್ಪಟ್ಟಿರುವ ಆಫ್ಘನ್ ಬಿಕ್ಕಟ್ಟನ್ನು ಮತ್ತಷ್ಟು ಗೋಜಲಾಗಿಸಿದೆ.

ಇತ್ತ, ಅಮೆರಿಕದ ಕಾಂಗ್ರೆಸ್ನಲ್ಲಿ ಸರ್ಕಾರದ ಯುದ್ಧ ಪ್ರಯತ್ನಗಳಿಗೆ ಬೆಂಬಲ ಕಡಿಮೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಕರ್ಜೈ ಸರ್ಕಾರದೊಂದಿಗೆ ಅಥವಾ ಏಪ್ರಿಲ್ನಲ್ಲಿ ನಡೆಯುವ ಚುನಾವಣೆ ನಂತರ ಅಧಿಕಾರಕ್ಕೆ ಬರುವ ಹೊಸ ಸರ್ಕಾರದೊಂದಿಗೆ ಕನಿಷ್ಠ ಪ್ರಮಾಣದ ಭದ್ರತಾ ಸಹಕಾರ ಸಾಧಿಸಲು ಸಾಧ್ಯವಾಗುತ್ತದೋ ಇಲ್ಲವೋ ಎಂಬ ಬಗ್ಗೆ ಅಮೆರಿಕದ ಅಧಿಕಾರಿಗಳಲ್ಲಿ ಸಂದೇಹ ಮೂಡಿದೆ.

ಭದ್ರತಾ ಒಪ್ಪಂದಕ್ಕೆ ಸಹಿ ಹಾಕಲು ಕರ್ಜೈ ನಿರಾಕರಿಸುತ್ತಿರುವುದರಿಂದ ಹತಾಶೆಗೆ ಒಳಗಾಗಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ಆಫ್ಘಾನಿಸ್ತಾನದಲ್ಲಿ ಅಮೆರಿಕ ಕೈಗೊಳ್ಳುತ್ತಿರುವ ಸೇನಾ ಕಾರ್ಯಾಚರಣೆಯ ಭವಿಷ್ಯದ ಬಗ್ಗೆ ಚರ್ಚಿಸಲು ಕಳೆದ ಮಂಗಳವಾರ ಉನ್ನತ ಸೇನಾ ಅಧಿಕಾರಿಗಳನ್ನು ಶ್ವೇತಭವನಕ್ಕೆ ಕರೆಸಿಕೊಂಡಿದ್ದರು.

ರಹಸ್ಯ ಸಂಪರ್ಕಕ್ಕೆ ಯತ್ನಿಸಿದ್ದು ಯಾವಾಗ?
ಕಳೆದ ನವೆಂಬರ್ನಲ್ಲಿ ಹಮೀದ್ ಕರ್ಜೈ ಮತ್ತು ಮಿತ್ರರಾಷ್ಟ್ರಗಳ ನಡುವೆ ಅಪನಂಬಿಕೆ ತೀವ್ರಗೊಂಡ ಸಂದರ್ಭದಲ್ಲಿ ತಾಲಿಬಾನ್ ಸಂಘಟನೆ ಆಫ್ಘನ್ ಸರ್ಕಾರದ ಮುಂದೆ ಸ್ನೇಹಹಸ್ತ ಚಾಚಿತ್ತು ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಗಳು ಹೇಳುತ್ತಾರೆ. ತಾಲಿಬಾನ್ ಜೊತೆ ಸಂಧಾನ ನಡೆಸಿ, ಅಮೆರಿಕಕ್ಕೆ ಸಾಧಿಸಲು ಸಾಧ್ಯವಾಗದ್ದನ್ನು ಅಥವಾ ಮಾಡಲು ಇಚ್ಛೆ ಇಲ್ಲದ್ದನ್ನು ಸಾಧಿಸಿ ದೇಶದಲ್ಲಿ ಹಿಂಸಾಚಾರಕ್ಕೆ ಶಾಶ್ವತವಾಗಿ ಕೊನೆ ಹಾಡಲು ಸಿಕ್ಕಿರುವ ಅವಕಾಶ ಎಂದು ಅಂದುಕೊಂಡು ಕರ್ಜೈ ತಾಲಿಬಾನ್ ಪ್ರಸ್ತಾವಕ್ಕೆ ಒಪ್ಪಿಕೊಂಡರು ಎಂಬ ಭಾವನೆ ಆಫ್ಘನ್ ಅಧ್ಯಕ್ಷರ ಆಪ್ತ ವಲಯದಲ್ಲಿದೆ.

ತಾಲಿಬಾನ್ ಮುಖಂಡರೊಂದಿಗೆ ರಹಸ್ಯ ಸಂಪರ್ಕ ಹೊಂದಿರುವುದನ್ನು ಕರ್ಜೈ ವಕ್ತಾರ ಐಮಲ್ ಫೈಜಿ ದೃಢ ಪಡಿಸಿದ್ದಾರೆ. ‘ಕಳೆದ ಎರಡು ತಿಂಗಳ ಸಂಬಂಧ ಅತ್ಯಂತ ಧನಾತ್ಮಕವಾಗಿತ್ತು. ಆ ಸಂಬಂಧ ಇನ್ನೂ ಮುಂದುವರಿದಿದೆ’ ಎಂದು ಫೈಜಿ ಹೇಳಿದ್ದಾರೆ. ಆಫ್ಘನ್ನಲ್ಲಿ ಉಗ್ರರ ವಿರುದ್ಧದ ಸಮರ ಆರಂಭಗೊಂಡ ನಂತರ ತಾಲಿಬಾನರ ಜತೆ ಅಧ್ಯಕ್ಷರ ಕಚೇರಿ ಸಾಧಿಸಿದ್ದ ಸಂಪರ್ಕಗಳಲ್ಲಿ ಇದು ಅತ್ಯಂತ ಮಹತ್ವವಾದದ್ದು ಎಂದು ಹೇಳಿರುವ ಫೈಜಿ, ಅಮೆರಿಕದೊಂದಿಗಿನ ದ್ವಿಪಕ್ಷೀಯ ಭದ್ರತಾ ಒಪ್ಪಂದದ ಕುರಿತಂತೆ ಅಧ್ಯಕ್ಷರ ನಿಲುವಿನಿಂದ ತಾಲಿಬಾನರು ಪ್ರೇರಣೆಗೊಂಡಿದ್ದಾರೆ ಎಂದು ನುಡಿದಿದ್ದಾರೆ.

ಆದರೆ, ಆಫ್ಘನ್ ಮತ್ತು ಅಮೆರಿಕದ ಅಧಿಕಾರಿಗಳು ಭಿನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಕರ್ಜೈ ಮತ್ತು ತಾಲಿಬಾನ್ ನಡುವಣ ಸಂಪರ್ಕ ಮುರಿದು ಬಿದ್ದಿದೆ. ಆರಂಭದಲ್ಲಿ ಗೆಳೆತನ ಸಾಧಿಸಲು ತಾಲಿಬಾನ್ ಮುಂದೆ ಬಂದಂತೆ ತೋರಿದರೂ, ಆಫ್ಘನ್ ಸರ್ಕಾರದೊಂದಿಗೆ ಮಾತುಕತೆ ನಡೆಸುವ ಯಾವ ಉದ್ದೇಶವೂ ಅದಕ್ಕೆ ಇರಲಿಲ್ಲ. ಆಫ್ಘಾನಿಸ್ತಾನದ ಉನ್ನತ ಅಧಿಕಾರಿಗಳು ಇತ್ತೀಚೆಗೆ ದುಬೈ, ಯುಎಇ ಮತ್ತು ರಿಯಾದ್ನಲ್ಲಿ ತಾಲಿಬಾನಿನ ಪ್ರಭಾವಿ ನಾಯಕರೊಂದಿಗೆ ಮಾತುಕತೆ ನಡೆಸಿದ್ದರು. ‘ಆದರೆ, ಯಾವುದೇ ಶಾಂತಿ ಮಾತುಕತೆ ನಡೆಯುವ ಸಾಧ್ಯತೆಯನ್ನು ಇನ್ನು ನಿರೀಕ್ಷಿಸಬೇಡಿ. ಆ ಸಮಯ ಮೀರಿದೆ ’ಎಂದು ತಾಲಿಬಾನ್ ನಾಯಕರು ಅಧಿಕಾರಿಗಳಿಗೆ ಸ್ಪಷ್ಟಪಡಿಸಿದ್ದರು ಎಂದು ಆಫ್ಘನ್ ಮತ್ತು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ.

ಯಾವುದೇ ಮಾತುಕತೆ ನಡೆಯಬೇಕಿದ್ದರೂ ಅದಕ್ಕೆ ತಾಲಿಬಾನ್ ಚಳವಳಿಯ ನಾಯಕ ಮುಲ್ಲಾ ಮೊಹಮ್ಮದ್ ಒಮರ್ನ ಸಮ್ಮತಿ ಅತ್ಯಗತ್ಯ. ಹಾಗಾಗಿ ಕರ್ಜೈ ಅವರು ಸಂಪರ್ಕದಲ್ಲಿರುವ ಸಂಧಾನಕಾರರು ಒಮರ್ ಜತೆ ಸಂಪರ್ಕ ಹೊಂದಿದ್ದಾರೆಯೇ? ಎಂದು ಪ್ರಶ್ನಿಸುತ್ತಾರೆ ಈ ಅಧಿಕಾರಿಗಳು. ಭಯೋತ್ಪಾದಕರ ವಿರುದ್ಧ ಯುದ್ಧ ಆರಂಭಗೊಂಡಾಗಿನಿಂದಲೂ ಆಫ್ಘಾನಿಸ್ತಾನ ಅಧಿಕಾರಿಗಳು ಮತ್ತು ತಾಲಿಬಾನ್ ನಾಯಕರ ನಡುವೆ ಅನಧಿಕೃತ ಸಂಪರ್ಕಗಳಿದ್ದರೂ, ತಮ್ಮ ಉದ್ದೇಶಗಳನ್ನು ಪರಸ್ಪರ ಅರ್ಥೈಸಿ ಕೊಳ್ಳಲು ಎರಡೂ ಕಡೆಯವರು ಕಷ್ಟಪಟ್ಟಿದ್ದರು. ಇತ್ತೀಚಿನ ವರ್ಷಗಳಲ್ಲಿ ತಾಲಿಬಾನ್ ಸಂಘಟನೆಯನ್ನು ಪ್ರತಿನಿಧಿಸುವ ಪ್ರಾಮಾಣಿಕ ವ್ಯಕ್ತಿಯನ್ನು ಗುರುತಿಸಲು ಆಫ್ಘನ್ ಅಧಿಕಾರಿಗಳು ಹೆಣಗಾಡುತ್ತಿದ್ದರು ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ.

ಮುಚ್ಚಿದ ಸಂಧಾನದ ಹಾದಿ...
ತಾಲಿಬಾನ್ ನಾಯಕರೊಂದಿಗೆ ಮಾತುಕತೆ ಏರ್ಪಡಲು ಇದ್ದ ದಾರಿ ಒಂದೇ ಒಂದು. ಅಮೆರಿಕ ಮತ್ತು ಜರ್ಮನಿಯ ರಾಜತಾಂತ್ರಿಕ ಅಧಿಕಾರಿಗಳು ಎರಡು ವರ್ಷಗಳ ಕಾಲ ಪ್ರಯತ್ನ ಪಟ್ಟು ಕತಾರ್ನಲ್ಲಿ ಶಾಂತಿ ಮಾತುಕತೆಗೆ ಮುಕ್ತ ವೇದಿಕೆ ಸೃಷ್ಟಿಸಿದ್ದರು. ಆದರೆ, ಇದಕ್ಕೆ ಕರ್ಜೈ ಅವರಿಂದ ತೀವ್ರ ಪ್ರತಿರೋಧ ಎದುರಾಯಿತು. ಇದು ತಮ್ಮನ್ನು ವಂಚಿಸುವ ಯತ್ನ ಎಂದೇ ಅವರು ಭಾವಿಸಿದ್ದರು. ಸಂಧಾನದ ಈ ಹಾದಿಯನ್ನು ಮುಚ್ಚಲು ಕರ್ಜೈ ತೆರೆಮರೆ ಯತ್ನವನ್ನೂ ನಡೆಸಿದ್ದರು.

ಅಮೆರಿಕದ ರಾಜತಾಂತ್ರಿಕ ಯತ್ನದಿಂದಾಗಿ ಕತಾರ್ನಲ್ಲಿ ತಾಲಿಬಾನ್ ಕಚೇರಿಯನ್ನು ತೆರೆಯಿತು. ಈ ವಿಚಾರದಲ್ಲಿ ಕರ್ಜೈ, ಅಮೆರಿಕದ ವಿರುದ್ಧ ಸಾರ್ವಜನಿಕವಾಗಿ ವಾಗ್ದಾಳಿ ನಡೆಸಿದ್ದರು. ಅಮೆರಿಕದ ಪಿತೂರಿಯ ಫಲ ಈ ಕಚೇರಿ ಎಂದು ಕರ್ಜೈ ಆ ಸಂದರ್ಭದಲ್ಲಿ ಸಿಡಿಮಿಡಿಗೊಂಡಿದ್ದರು. ಆಫ್ಘನ್ ಸರ್ಕಾರಕ್ಕೆ ಆ ಕಚೇರಿಯು ದೇಶಾಂತರ ಸರ್ಕಾರವೊಂದರ ರಾಯಭಾರಿ ಕಚೇರಿಯಂತೆ ಭಾಸವಾಗಿತ್ತು. (ಕಚೇರಿಯು ತನ್ನದೇ ಆದ ಧ್ವಜ ಮತ್ತು “ದಿ ಇಸ್ಲಾಮಿಕ್ ಎಮಿರೇಟ್ ಆಫ್ ಆಫ್ಘಾನಿಸ್ತಾನ” ಎಂಬ ನಾಮಫಲಕವನ್ನು ಹೊಂದಿತ್ತು). ಕೆಲವೇ ದಿನಗಳಲ್ಲಿ ಕಚೇರಿಯನ್ನು ಸ್ಥಗಿತಗೊಳಿಸಲಾಯಿತು.

ಕತಾರ್ನಲ್ಲಿ ಶಾಂತಿ ಮಾತುಕತೆ ಯತ್ನ ವಿಫಲವಾದ ಹಿನ್ನೆಲೆಯಲ್ಲಿ, ತಾಲಿಬಾನ್ ಮುಖಂಡರನ್ನು ನೇರವಾಗಿ ಸಂಪರ್ಕಿಸಲು ತಾವೇ ಹಾದಿಯನ್ನು ಕಂಡು ಹಿಡಿಯುವ ಯತ್ನವನ್ನು ಆಫ್ಘನ್ ಅಧಿಕಾರಿಗಳು ಆರಂಭಿಸಿದ್ದರು. ಕಳೆದ ವರ್ಷಾಂತ್ಯದಲ್ಲಿ ಈ ಪ್ರಯತ್ನ ಯಶಸ್ವಿಯಾಗುತ್ತಿದೆ ಎಂದು ಹಮೀದ್ ಕರ್ಜೈ ಭಾವಿಸಲು ಆರಂಭಿಸಿದರು. ಆದರೆ ತಮಗೆ ಆ ವಿಶ್ವಾಸವಿರಲಿಲ್ಲ ಎಂದು ಆಫ್ಘನ್ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಉಗ್ರರ ವಿರುದ್ಧದ ಹೋರಾಟದ ಜವಾಬ್ದಾರಿಯನ್ನು ಆಫ್ಘನ್ ಪಡೆಗೆ ಒಪ್ಪಿಸಿ, ಈ ವರ್ಷದ ಅಂತ್ಯದ ವೇಳೆಗೆ ಆಫ್ಘಾನಿಸ್ತಾನ ತೊರೆಯುವ ಸಿದ್ಧತೆಯಲ್ಲಿ ಅಮೆರಿಕ ಪಡೆಗಳಿವೆ. ಇಂತಹ ಸಮಯದಲ್ಲಿ ಕರ್ಜೈ ಸರ್ಕಾರದ ನಡೆಯ ಬಗ್ಗೆ ಅಮೆರಿಕ ಹೊಂದಿರುವ ಅಸಮಾಧಾನ ಅಧಿಕಾರಿಗಳ ಹೇಳಿಕೆಗಳಿಂದಲೇ ಗೊತ್ತಾಗುತ್ತದೆ. ‘ಕೆಲವು ವರ್ಷಗಳಿಂದ ಕರ್ಜೈ ಅವರೊಂದಿಗಿನ ನಮ್ಮ ಸಂಬಂಧದಲ್ಲಿ ಹಲವು ಏರಿಳಿತಗಳನ್ನು ಕಂಡಿದ್ದೇವೆ’ ಎಂದು ಅಮೆರಿಕ ರಾಯಭಾರಿ ಜೇಮ್ಸ್ ಬಿ ಕನ್ನಿಂಗ್ಹ್ಯಾಮ್ ಕಳೆದ ವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಆಫ್ಘಾನಿಸ್ತಾನದ ಪಾಲಿಗೆ ಮುಂದಿನ ಎರಡು ತಿಂಗಳಲ್ಲಿ ಹೊಸ ಮೈಲಿಗಲ್ಲು ದಾಖಲಾಗಲಿದೆ’ ಎಂದು ಅವರು ಹೇಳಿದ್ದಾರೆ.

ಅಮೆರಿಕವನ್ನು ವಿರೋಧಿಸುತ್ತಿರುವ ಕರ್ಜೈ
ಹಮೀದ್ ಕರ್ಜೈ, ಈಗ ತಾವು ಮಾಡಿರುವ ಸಾಧನೆ ಬಗ್ಗೆ ಹೆಚ್ಚು ಕಾಳಜಿ ತೋರುತ್ತಿದ್ದಾರೆ ಎಂಬುದು ಹಿರಿಯ ಅಧಿಕಾರಿಗಳ ಅಂಬೋಣ. ಅಮೆರಿಕದೊಂದಿಗಿನ ಬಿಕ್ಕಟ್ಟಿನ ವಿಚಾರ ಚರ್ಚೆಗೆ ಬಂದಾಗಲೆಲ್ಲಾ, ದೇಶದ ಗಲಭೆ ಪೀಡಿತ ಇತಿಹಾಸವನ್ನು ಪ್ರಸ್ತಾಪಿಸುವ ಅವರು, ವಿದೇಶಿ ಸರ್ಕಾರಗಳೊಂದಿಗೆ ವ್ಯವಹರಿಸುವಾಗ ದೇಶದ ಇತಿಹಾಸ ದೊಡ್ಡ ಪಾಠ ಎಂದು ಹೇಳುತ್ತಿರುತ್ತಾರೆ.

ಆಫ್ಘನ್ ಮತ್ತು ಅಮೆರಿಕದ ನಡುವಣ ಪ್ರಸ್ತಾವಿತ ದ್ವೀಪಕ್ಷೀಯ ಭದ್ರತಾ ಒಪ್ಪಂದವನ್ನು 1879ರಲ್ಲಿ ನಡೆದಿದ್ದ ಏಕಪಕ್ಷೀಯವಾದ ‘ಗ್ರಾಂಡಮಕ್ ಭದ್ರತಾ ಒಪ್ಪಂದ’ಕ್ಕೆ (ಈ ಒಪ್ಪಂದವು ಭಾರತದ ಗಡಿ ಭಾಗಗಳ ಭೂ ಪ್ರದೇಶಗಳನ್ನು ಬ್ರಿಟಿಷ್ ಆಡಳಿತದ ಅಧೀನಕ್ಕೆ ಒಪ್ಪಿಸಲು ಅವಕಾಶ ಕಲ್ಪಿಸಿತ್ತು ಮತ್ತು ಆಫ್ಘಾನಿಸ್ತಾನದ ವಿದೇಶಾಂಗ ನೀತಿಯ ಮೇಲೆ ಬ್ರಿಟನ್ ಸರ್ಕಾರಕ್ಕೆ ನಿಯಂತ್ರಣವನ್ನೂ ನೀಡಿತ್ತು) ಕರ್ಜೈ ಇತ್ತೀಚೆಗೆ ಹೋಲಿಸಿದ್ದರು. ಅಲ್ಲದೇ, ಅಮೆರಿಕದ ಕೆಲವು ನೀತಿಗಳನ್ನು ‘ವಸಾಹತುಶಾಹಿ ಅಧಿಕಾರದ ವರ್ತನೆ’ ಎಂದು ಸಾರ್ವಜನಿಕವಾಗಿ ಜರೆದಿದ್ದರು.

ಅಮೆರಿಕದ ಮಾಜಿ ರಕ್ಷಣಾ ಕಾರ್ಯದರ್ಶಿ ರಾಬರ್ಟ್ ಎಂ ಗೇಟ್ಸ್, ತಮ್ಮ ಆತ್ಮ ಚರಿತ್ರೆಯಲ್ಲಿ ಕರ್ಜೈ ಅವರನ್ನು ಋಣಾತ್ಮಕವಾಗಿ ಬಿಂಬಿಸಿದ್ದಕ್ಕೆ ಆಫ್ಘನ್ ಅಧ್ಯಕ್ಷರು ಕೋಪ ಗೊಂಡಿದ್ದರು. ಏಪ್ರಿಲ್ನಲ್ಲಿ ನಡೆಯಲಿರುವ ರಾಷ್ಟ್ರೀಯ ಚುನಾವಣೆಗೆ ಪ್ರಚಾರ ಆರಂಭಗೊಂಡಿರುವಂತೆಯೇ, ಆಫ್ಘಾನಿಸ್ತಾನದ ಜನರೊಂದಿಗೆ ಆತ್ಮೀಯ ಬಾಂಧವ್ಯ ಬೆಸೆ
ಯುವು ದಕ್ಕಾಗಿ ಹಮೀದ್ ಕರ್ಜೈ ಅಮೆರಿಕದ ವಿರುದ್ಧ ತಿರುಗಿಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ.ಅಮೆರಿಕನ್ನರ ವಿರುದ್ಧ ರಾಷ್ಟ್ರದ ಅಧ್ಯಕ್ಷರು ಬಿಗಿ ನಿಲುವು ಹೊಂದಿರಬೇಕು ಎಂದು ಧಾರ್ಮಿಕ ಮುಖಂಡರೂ ಸೇರಿದಂತೆ ಆಫ್ಘನ್ ಜನರು ಬಯಸುತ್ತಿರುತ್ತಾರೆ.

ಅಜಂ ಅಹ್ಮದ್, ಮ್ಯಾಥ್ಯೂ ರೋಸನ್ಬರ್ಗ್
- ಇಂಟರ್ನ್ಯಾಷನಲ್ ನ್ಯೂಯಾರ್ಕ್ ಟೈಮ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.