ಸೋಚಿ, ರಷ್ಯಾ (ಪಿಟಿಐ): ಭಾರತದ ಶಿವಕೇಶವನ್ ಅವರು ಸೋಚಿ ಚಳಿಗಾಲದ ಒಲಿಂಪಿಕ್ ಕೂಟದ ಲೂಜ್ ಸ್ಪರ್ಧೆಯ ಮೂರನೇ ಸುತ್ತಿನ ಬಳಿಕ 37ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

ಸಾಂಕಿ ಸ್ಲೈಡಿಂಗ್ ಸೆಂಟರ್ನಲ್ಲಿ ಭಾನುವಾರ ನಡೆದ ಮೂರನೇ ಸುತ್ತಿನಲ್ಲಿ ಶಿವ ಕೇಶವನ್ 54.706 ಸೆ.ಗಳಲ್ಲಿ ಸ್ಪರ್ಧೆ ಕೊನೆಗೊಳಿಸಿದರು.

ಮೂರು ಸುತ್ತುಗಳ ಬಳಿಕ ಅವರು 2:44.604 ಸೆಕೆಂಡ್ಗಳೊಂದಿಗೆ 37ನೇ ಸ್ಥಾನದಲ್ಲಿದ್ದಾರೆ. ಇನ್ನೊಂದು ಸುತ್ತಿನ ಸ್ಪರ್ಧೆ ಮಾತ್ರ ಬಾಕಿಯುಳಿದಿದ್ದು, ಶಿವ ಕೇಶವನ್ ತಮ್ಮ ಸ್ಥಾನವನ್ನು ಉತ್ತಮಪಡಿಸಿಕೊಳ್ಳುವರೇ ಎಂಬುದನ್ನು ನೋಡಬೇಕು. ಈ ಸ್ಪರ್ಧೆಯಲ್ಲಿ ಒಟ್ಟು 39 ದೇಶಗಳ ಸ್ಪರ್ಧಿಗಳು ಕಣದಲ್ಲಿದ್ದಾರೆ.

ಹಿಮಾಚಲ ಪ್ರದೇಶದ ಈ ಸ್ಪರ್ಧಿ ತಮ್ಮ ಐದನೇ ಒಲಿಂಪಿಕ್ಸ್ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಈ ಹಿಂದಿನ ಕೂಟಗಳಲ್ಲಿ ಅವರು ಕ್ರಮವಾಗಿ 28 (ಜಪಾನ್, 1998), 33 (ಅಮೆರಿಕ, 2002), 25 (ಇಟಲಿ, 2006) ಮತ್ತು 29ನೇ (ಕೆನಡಾ, 2010) ಸ್ಥಾನಗಳನ್ನು ಪಡೆದುಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.