ರಿಯೊ ಡಿ ಜನೈರೊ (ಎಎಫ್ಪಿ): ದಕ್ಷಿಣ ಆಫ್ರಿಕಾದ ವೇಡ್ ಆನ್ ನೀಕರ್ಕ್ ಅವರು 400 ಮೀಟರ್ಸ್ ಓಟದಲ್ಲಿ ನೂತನ ವಿಶ್ವದಾಖಲೆ ಬರೆದು ಚಿನ್ನ ಗೆದ್ದರು.

ಭಾನುವಾರ ರಾತ್ರಿ 43.03 ಸೆಕೆಂಡುಗಳಲ್ಲಿ ಗುರಿ ತಲುಪಿದ ವೇಡ್ ಅವರು 17 ವರ್ಷಗಳ ಹಿಂದೆ ಮೈಕೆಲ್ ಜಾನ್ಸನ್ (ಕಾಲ:42.88ಸೆ) ಅವರು ಮಾಡಿದ್ದ ದಾಖಲೆಯನ್ನು ಅಳಿಸಿ ಹಾಕಿದರು.

1999ರಲ್ಲಿ ಸ್ಪೇನ್ನಲ್ಲಿ ನಡೆದಿದ್ದ ಅಥ್ಲೆಟಿಕ್ ಚಾಂಪಿಯನ್ ಷಿಪ್ನಲ್ಲಿ ಜಾನ್ಸನ್ ದಾಖಲೆ ನಿರ್ಮಿಸಿದ್ದರು. 24 ವರ್ಷದ ವೇಡ್ ಅವರು ಗ್ರೆನೆಡಾದ ಕಿರಾನಿ ಜೇಮ್ಸ್ ಮತ್ತು ಅಮೆರಿಕದ ಲಶ್ವಾನ್ ಮೆರಿಟ್ ಅವರನ್ನು ಹಿಂದಿಕ್ಕಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಕಿರಾನಿ ಮತ್ತು ಲಶ್ವಾನ್ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಪಡೆದರು.

ಫಲಿತಾಂಶಗಳು ಪುರುಷರು:
400 ಮೀ ಓಟ: ವೇಡ್ ವಾನ್ ನೀಕರ್ಕ್ (ದಕ್ಷಿಣ ಆಫ್ರಿಕಾ) ನೂತನ ದಾಖಲೆ: ಕಾಲ: 43.03ಸೆ; (ಹಳೆಯದು:42.88ಸೆ, ಮೈಕೆಲ್ ಜಾನ್ಸನ್ 1999ರಲ್ಲಿ)–1, ಕಿರಾನಿ ಜೇಮ್ಸ್ (ಗ್ರೆನೆಡಾ)–43,76ಸೆ.–2, ಲಶ್ವಾನ್ ಮೆರಿಟ್ (ಅಮೆರಿಕ)–43.85ಸೆ. –3

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.