ಬೆಂಗಳೂರು: ಜವಾಹರ ಯೂನಿಯನ್ ಎಫ್‌ಸಿ ತಂಡ ಶನಿವಾರ ಅಶೋಕನಗರದ ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ನಡೆದ ಸೂಪರ್ ಡಿವಿಷನ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಗೋಲಿನ ಮಳೆ ಸುರಿಸಿದೆ.

ಜೈಬ್ ‘ಹ್ಯಾಟ್ರಿಕ್’ ಸಾಧನೆಯ ಬಲದಿಂದ ಈ ತಂಡ 8–0 ಗೋಲು ಗಳಿಂದ ಆರ್‌ಡಬ್ಲ್ಯುಎಫ್ ಎಫ್‌ಸಿ ವಿರುದ್ಧ ಗೆದ್ದಿದೆ.

ಆರಂಭದಿಂದಲೇ ಚುರುಕಿನ ಆಟ ಆಡಿದ ತಂಡಕ್ಕೆ ಮೊದಲ ನಿಮಿಷದಲ್ಲೇ ಜೈಬ್ ಮುನ್ನಡೆ ತಂದುಕೊಟ್ಟರು. 14ನೇ ನಿಮಿಷದಲ್ಲಿ ಸುದರ್ಶನ್ ಗೋಲು ಗಳಿಸಿದರು. 21 ಮತ್ತು 32ನೇ ನಿಮಿಷಗಳಲ್ಲೂ ಮೋಡಿ ಮಾಡಿದ ಜೈಬ್, ಜವಾಹರ ತಂಡ ಮುನ್ನಡೆಯನ್ನು 4–0ಗೆ ಹೆಚ್ಚಿಸಿಕೊಳ್ಳಲು ನೆರವಾದರು.

ಬಳಿಕ ಸುಹಾಸ್ (56 ಮತ್ತು 73ನೇ ನಿಮಿಷ) ಎದುರಾಳಿಗಳ ರಕ್ಷಣಾ ಕೋಟೆ ಭೇದಿಸಿದರು. ಇಷ್ಟಕ್ಕೆ ಜವಾಹರ್ ತಂಡದ ಆಟಗಾರರ ಗೋಲಿನ ದಾಹ ನೀಗಿದಂತೆ ಕಾಣಲಿಲ್ಲ. ನಿಕೊಲಸ್ 64 ಮತ್ತು 83ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಸೇರಿಸಿ ಸಂಭ್ರಮಿಸಿದರು.

ಯಂಗ್ ಚಾಲೆಂಜರ್ಸ್ ಎಫ್‌ಸಿ ಮತ್ತು ಡಿವೈಇಎಸ್ ಎಫ್‌ಸಿ ನಡುವಣ ‘ಎ’ ಡಿವಿಷನ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯ ಗೋಲು ರಹಿತ ಡ್ರಾದಲ್ಲಿ ಅಂತ್ಯಕಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.