ಶನಿವಾರ, ಮಾರ್ಚ್ 28, 2020
19 °C

ಅಥ್ಲೆಟಿಕ್ಸ್: ಅರ್ಪಿತಾಗೆ ಚಿನ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಖನೌ: ಕರ್ನಾಟಕದ ಅರ್ಪಿತಾ ಮಂಜುನಾಥ್ ಇಲ್ಲಿ ನಡೆಯುತ್ತಿರುವ 59ನೇ ರಾಷ್ಟ್ರೀಯ ಅಂತರರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್ ನ ಮಹಿಳೆಯರ 400 ಮೀಟರ್ಸ್‌ ಹರ್ಡಲ್ಸ್‌ನಲ್ಲಿ ಚಿನ್ನದ ಪದಕ ಗೆದ್ದರು.

ಕೂಟದ ಎರಡನೇ ದಿನವಾದ ಒಟ್ಟು ಮೂರು ಪದಕ ಗಳಿಸಿದರು. ಅರ್ಪಿತಾ 59.98ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಚಿನ್ನ ಗೆದ್ದರು. ಪುರುಷರ ವಿಭಾಗದ 400 ಮೀ ಓಟದಲ್ಲಿ ಸಚಿನ್ ರಾಬಿ ಕಂಚು ಮತ್ತು  ಟ್ರಿಪಲ್ ಜಂಪ್‌ನಲ್ಲಿ ಯು ಕಾರ್ತಿಕ್ ಬೆಳ್ಳಿಪದಕ ಪಡೆದರು.

ಪುರುಷರು:  400 ಮೀ: ಅಲೆಕ್ಸ್‌ ಎ ಅಂಥೋನಿ (ಕೇರಳ;46.17ಸೆ)–1, ಹರ್ಷ ಬಲ್ಜೀತ್ ಸಿಂಗ್ (ಹರಿಯಾಣ)–2, ಸಚಿನ್ ರಾಬಿ (ಕರ್ನಾಟಕ; 46.96ಸೆ)–3;  400 ಮೀ ಹರ್ಡಲ್ಸ್‌: ಮೆಹದಿ ಪೀರ್‌ಜಹಾನ್ (ಇರಾನ್; 49.33ಸೆ)–1, ಜಗದೀಶ್ ಚಂದ್ರ (ಕರ್ನಾಟಕ)–2, ಜಿತಿನ್ ಪಾಲ್ (ಕೇರಳ)–3. ಟ್ರಿಪಲ್ ಜಂಪ್: ಅರ್ಪಿಂದರ್ ಸಿಂಗ್ (ಪಂಜಾಬ್; 15.83ಮೀಟರ್ಸ್)–1, ಯು. ಕಾರ್ತಿಕ್ (ಕರ್ನಾಟಕ; 16.80ಮೀ)–2, ಸಲಾಹುದ್ದೀನ್ ಮೊಹಮ್ಮದ್ (ತಮಿಳುನಾಡು)–3.

ಮಹಿಳೆಯರು: ಅರ್ಪಿತಾ ಮಂಜುನಾಥ (ಕರ್ನಾಟಕ; 59.98ಸೆ)–1, ಆರತಿ (ತಮಿಳುನಾಡು)–2, ದಿವ್ಯಾ (ತಮಿಳುನಾಡು)–3,

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)