ಬೆಂಗಳೂರು: ವಿಶ್ವದ ಶ್ರೀಮಂತ ಕ್ರೀಡಾ ಸಂಸ್ಥೆಗಳಲ್ಲಿ ಒಂದಾಗಿರುವ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ‘ಲಿಂಗ ತಾರತಮ್ಯ’ ಮಾಡುತ್ತಿದೆ ಎಂದು ಮಹಿಳಾ ಕ್ರಿಕೆಟಿಗರು ತೀವ್ರ ಅಸ ಮಾಧಾನ ವ್ಯಕ್ತಪಡಿಸಿದ್ದಾರೆ.

ಅದಕ್ಕೆ ಕಾರಣ ಮಂಡಳಿಯು ಗುರುವಾರ ಪ್ರಕಟಿಸಿರುವ ಗುತ್ತಿಗೆ ಪಟ್ಟಿಯಲ್ಲಿ ನೀಡಿರುವ ಸಂಭಾವನೆಯ ಪ್ರಮಾಣ. ಇದರಲ್ಲಿ ಪುರುಷ ಮತ್ತು ಮಹಿಳೆಯರಿಗೆ ನೀಡುವ ಸಂಭಾವನೆ ಯಲ್ಲಿ ವ್ಯತ್ಯಾಸವಿದೆ ಎಂದು ಆಟ ಗಾರ್ತಿಯರು ಕಿಡಿಕಾರಿದ್ದಾರೆ.

ಮಹಿಳೆಯರ ಗುತ್ತಿಗೆಯ ಎ ದರ್ಜೆಯವರಿಗೆ ₹50 ಲಕ್ಷ, ಬಿ ಮತ್ತು ಸಿ ಗುಂಪಿನವರಿಗೆ ಕ್ರಮವಾಗಿ ₹ 30 ಲಕ್ಷ ಹಾಗೂ ₹ 10 ಲಕ್ಷ ನೀಡಲಾಗಿದೆ. ಪುರುಷರ ವಿಭಾಗದಲ್ಲಿ ₹ 7 ಕೋಟಿ (ಎ +), ₹ 5 ಕೋಟಿ (ಎ), ₹ 3 ಕೋಟಿ (ಬಿ) ಮತ್ತು ₹ 1 ಕೋಟಿ (ಸಿ) ನೀಡಲಾಗುತ್ತಿದೆ. ನಾಲ್ಕು ವರ್ಷಗಳ ಹಿಂದಷ್ಟೇ ಮಹಿಳಾ ವಿಭಾಗಕ್ಕೆ ಗುತ್ತಿಗೆ ಪದ್ಧತಿ ಶುರುವಾಗಿತ್ತು. ಆಗ ಕೇವಲ ಎ ಮತ್ತು ಬಿ ವಿಭಾಗಗಳು ಇದ್ದವು. ಈಗ ಸಿ ವಿಭಾಗವನ್ನೂ ಸೇರ್ಪಡೆ ಮಾಡಲಾಗಿದೆ.

‘ನಾನು ಆಯ್ಕೆ ಸಮಿತಿಯಲ್ಲಿದ್ದಾಗ ಒತ್ತಾಯ ಮಾಡಿ ಈ ಕಾಂಟ್ರ್ಯಾಕ್ಟ್ ಪದ್ದತಿ ಜಾರಿಗೊಳಿಸಲಾಗಿತ್ತು. ಈ ವ್ಯತ್ಯಾಸಗಳು ಇವತ್ತಿನದಲ್ಲ. ಮೊದಲಿನಿಂದಲೂ ಹೀಗೆ ಇದೆ. ಸಿಒಎ (ಕ್ರಿಕೆಟ್ ಆಡಳಿತ ಸಮಿತಿ) ಮೊದಲ ದರ್ಜೆಯವರಿಗೆ ₹ 50 ಲಕ್ಷ ಮಾಡಿತು. ಮೊದಲಿಗೆ ಅದಕ್ಕಿಂತ ಕಡಿಮೆ ಮೊತ್ತ ಇತ್ತು. ಮಹಿಳೆಯರ ಕ್ರಿಕೆಟ್ನಿಂದ ಆದಾಯ ಕಡಿಮೆ ಎಂದು ಈ ಧೋರಣೆ ಅನುಸರಿಸಲಾಗುತ್ತಿದೆ. ಯಾವುದೇ ಕುಟುಂಬದಲ್ಲಿ ಕಡಿಮೆ ಸಂಬಳ ತರುವ ಮಗಳಿಗೆ ಕಡಿಮೆ ಆಸ್ತಿ ಕೊಡುತ್ತಾರೆಯೇ? ಹೆಣ್ಣುಮಕ್ಕಳಿಗೆ ಆಸ್ತಿಯಲ್ಲಿ ಸಮಪಾಲು ನೀಡಬೇಕು ಎಂಬ ಕಾನೂನು ಇದೆಯ ಲ್ಲವೇ? ಕ್ರಿಕೆಟ್ನಲ್ಲಿ ಏಕಿಲ್ಲ ಎಂಬುದೇ ಅರ್ಥವಾಗುತ್ತಿಲ್ಲ. ಮುಂದಿನ ಸಲ ವಾದರೂ ಈಗ ಕೊಡುತ್ತಿರುವ ಸಂಭಾವ ನೆಯ ದುಪ್ಟಟ್ಟು ಕೊಡುವಂತಾಗಲಿ’ ಎಂದು ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸದಸ್ಯೆ ಶಾಂತಾ ರಂಗಸ್ವಾಮಿ ಒತ್ತಾಯಿಸುತ್ತಾರೆ.

ಸದ್ಯ ಭಾರತ ಮಹಿಳಾ ತಂಡದಲ್ಲಿ ರುವ ಕೆಲವು ಆಟಗಾರ್ತಿಯರೂ ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ನಮ್ಮ ಕಾಲದಲ್ಲಿಯೂ ನಾವು ಮಲತಾಯಿ ಧೋರಣೆ ಎಂದು ಆರೋ ಪಿಸುತ್ತಿದ್ದೆವು. ಈಗಲೂ ಅದೇ ಮುಂದುವರಿದಿರುವುದು ಬೇಜಾರಿನ ಸಂಗತಿ. ಸೌರವ್ ಗಂಗೂಲಿಯವರು ಇತ್ತ ಗಮನ ಹರಿಸಬೇಕು. ಈ ಹಿಂದೆ ರಾಜ್ಯದ ಶಾಂತಾ ರಂಗಸ್ವಾಮಿ ಅವರು ಕಮಿಟಿಯಲ್ಲಿದ್ದಾಗ ಈ ಪದ್ಧತಿ ಆರಂಭಿಸಲು ಕಾರಣರಾಗಿದ್ದರು. ಈಗ ಅವರೇ ಅಪೆಕ್ಸ್ ಕೌನ್ಸಿಲ್ನಲ್ಲಿದ್ದಾರೆ. ನಮ್ಮೆಲ್ಲರ ಪರವಾಗಿ ಅವರು ಧ್ವನಿಯೆತ್ತುವ ವಿಶ್ವಾಸವಿದೆ. ಇವತ್ತು ಆಟಗಾರ್ತಿಯರು ತುಂಬಾ ಚೆನ್ನಾಗಿ ಆಡುತ್ತಿದ್ದಾರೆ. ಅದಕ್ಕೆ ತಕ್ಕಂತೆ ಜಾಸ್ತಿ ಸಂಭಾವನೆ ನೀಡಬೇಕು’ ಎಂದು ಹಿರಿಯ ಕ್ರಿಕೆಟ್ ಆಟಗಾರ್ತಿ ವಿ.ಕಲ್ಪನಾ ಒತ್ತಾಯಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.