ಮಂಗಳವಾರ, ಆಗಸ್ಟ್ 20, 2019
22 °C

ಬಿಎಫ್‌ಸಿ ಜೊತೆ ಮ್ಯಾನುಯೆಲ್‌ ಒಪ್ಪಂದ

Published:
Updated:
Prajavani

ಬೆಂಗಳೂರು: ಸ್ಪೇನ್‌ ಆಟಗಾರ ಮ್ಯಾನುಯೆಲ್‌ ಒನ್ವು ವಿಲ್‌ಫ್ರಾಂಕಾ ಅವರು ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡದ ಜೊತೆ ಒಂದು ವರ್ಷದ ಅವಧಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.

2019–20ರ ಸಾಲಿಗೆ ತಂಡದ ಪರ ಅವರು ಕಣಕ್ಕಿಳಿಯಲಿದ್ದಾರೆ ಎಂದು ಕ್ಲಬ್‌ ಬುಧವಾರ ಘೋಷಿಸಿದೆ.

31 ವರ್ಷದ ಮ್ಯಾನುಯೆಲ್ ಬಿಎಫ್‌ಸಿ ತಂಡದ ಪರ ಆಡಲಿರುವ ಸ್ಪೇನ್‌ನ 13ನೇ ಆಟಗಾರ. ಅವರ ಒಪ್ಪಂದವನ್ನು ಮತ್ತೊಂದು ವರ್ಷಕ್ಕೆ ವಿಸ್ತರಿಸುವ ಆಯ್ಕೆಯನ್ನು ಕ್ಲಬ್‌ ಹೊಂದಿದೆ.

ಸ್ಪೇನ್‌ನ ಟ್ಯುಡೆಲಾದಲ್ಲಿ ಜನಿಸಿರುವ ಮ್ಯಾನುಯೆಲ್‌, ಸ್ಪೇನ್‌ನ ಅಟ್ಲೆಟಿಕೊ ವಾಲ್ಟೆರಾನೊ ಹಾಗೂ ಸಿ ಡಿ ಟ್ಯುಡೆಲಾನೊ ತಂಡಗಳ ಪರ ಆಡಿದ್ದಾರೆ.

 

Post Comments (+)