ಮಂಗಳವಾರ, ಮಾರ್ಚ್ 21, 2023
25 °C

ರಾಜ್ಯ ಮಟ್ಟದ ವಾಲಿಬಾಲ್ ಚಾಂಪಿಯನ್‌ಷಿಪ್‌: ಫೈನಲ್‌ಗೆ ಚಾಮರಾಜನಗರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಚಾಮರಾಜನಗರ ತಂಡದವರು ರಾಜ್ಯ ಮಟ್ಟದ ವಾಲಿಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಬೆಂಗಳೂರು ದಕ್ಷಿಣ ತಂಡದವರನ್ನು ಮಣಿಸಿ ಫೈನಲ್‌ ಪ್ರವೇಶಿಸಿದರು. 

ಇಲ್ಲಿನ ಮೈಸೂರು ವಿಶ್ವವಿದ್ಯಾಲಯದ ಸ್ಪೋರ್ಟ್ಸ್ ಪೆವಿಲಿಯನ್‌ನಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನಲ್ಲಿ ಶನಿವಾರ ನಡೆದ ಮಹಿಳೆಯರ ವಿಭಾಗದ ಸೆಮಿಫೈನಲ್‌ ಪಂದ್ಯದಲ್ಲಿ 25–11, 25–14, 25–10ರಿಂದ ಎದು ರಾಳಿ ತಂಡದವರನ್ನು ಮಣಿಸಿದರು.

5 ಸೆಟ್‌ಗಳ ಪಂದ್ಯದಲ್ಲಿ ಆರಂಭ ದಿಂದಲೂ ಪಾರಮ್ಯ ಸಾಧಿಸಿದ ಚಾಮರಾಜನಗರ ತಂಡದವರು ಬ್ಲಾಕಿಂಗ್‌, ಸ್ಪೈಕಿಂಗ್‌ ಹಾಗೂ ಪಾಸಿಂಗ್‌ ಮೂಲಕ ಎಲ್ಲರ ಗಮನ ಸೆಳೆದರು. ಕಾವ್ಯಾ ಹಾಗೂ ಮಹಿಮಾ ಅವರು ಚುರುಕಿನ ಆಟದಿಂದ ಪಾಯಿಂಟ್‌ ಗಳಿಕೆ ಹೆಚ್ಚಿಸಿದರು. ಬೆಂಗಳೂರು ದಕ್ಷಿಣ ತಂಡದ ಮೋನಿಕಾ ಆಟವೂ ಮೋಡಿ ಮಾಡಿತ್ತು. 

ಫೈನಲ್‌ ಇಂದು: ಫೈನಲ್ ಪಂದ್ಯಗಳು  ಜ.29ರ ಭಾನುವಾರ ನಡೆಯಲಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು