ಭಾನುವಾರ, ಜೂನ್ 7, 2020
22 °C

ಭಾರತ–ಪಾಕ್‌ ನಡುವಿನ 1985ರ ವಿಶ್ವ ಕ್ರಿಕೆಟ್ ಫೈನಲ್‌: ಫೇಸ್‌ಬುಕ್‌ನಲ್ಲಿ ಸಂವಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವೆ ಆಸ್ಟ್ರೇಲಿಯಾದಲ್ಲಿ ನಡೆದ 1985ರ ಬೆನ್ಸನ್‌ ಅಂಡ್‌ ಹೆಜಸ್‌ ಕ್ರಿಕೆಟ್ ವಿಶ್ವ ಚಾಂಪಿಯನ್‌ಷಿಪ್‌ನ ಫೈನಲ್‌ ಪಂದ್ಯದ ಮುಖ್ಯಾಂಶಗಳನ್ನು ಸೋನಿ ಸಿಕ್ಸ್‌ ಚಾನೆಲ್‌ ಇದೇ 16ರಂದು ರಾತ್ರಿ 8.30 ರಿಂದ ಪ್ರಸಾರ ಮಾಡಲಿದೆ.

ಇದಕ್ಕೆ ಪೂರ್ವಭಾವಿಯಾಗಿ ಶನಿವಾರ ಸಂಜೆ 5 ಗಂಟೆಯಿಂದ ಮಾಜಿ ನಾಯಕರಾದ ಹಾಗೂ ಹಾಲಿ ವೀಕ್ಷಕ ವಿವರಣೆಗಾರರಾಗಿರುವ ಸುನೀಲ್‌ ಗಾವಸ್ಕರ್‌ ಮತ್ತು ರಮೀಜ್‌ ರಾಜಾ ನಡುವೆ ಸಂವಾದ ನಡೆಯಲಿದ್ದು, ಇದನ್ನು ಸೋನಿ ಸ್ಪೋರ್ಟ್ಸ್‌ ಅಧಿಕೃತ ಫೇಸ್‌ಬುಕ್‌ ಪುಟದಲ್ಲಿ ವೀಕ್ಷಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು