ಮಂಗಳವಾರ, ಸೆಪ್ಟೆಂಬರ್ 27, 2022
27 °C

ಟೆಸ್ಟ್ | ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್‌ಗೆ ಆರಂಭಿಕ ಆಘಾತ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಲಂಡನ್‌: ಕಗಿಸೊ ರಬಾಡ (36ಕ್ಕೆ 2) ಮತ್ತು ಎನ್ರಿಚ್‌ ನಾರ್ಕಿಯ (43ಕ್ಕೆ 3) ಅವರ ದಾಳಿಗೆ ನಲುಗಿದ ಇಂಗ್ಲೆಂಡ್‌ ತಂಡ, ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಕ್ರಿಕೆಟ್‌ ಟೆಸ್ಟ್‌ನಲ್ಲಿ ಆರಂಭಿಕ ಆಘಾತ ಅನುಭವಿಸಿದೆ.

ಲಾರ್ಡ್ಸ್‌ ಮೈದಾನದಲ್ಲಿ ಬುಧವಾರ ಆರಂಭವಾದ ಪಂದ್ಯದ ಮೊದಲ ದಿನದಾಟ ಮಳೆಯಿಂದಾಗ ಬೇಗನೇ ಕೊನೆಗೊಂಡಾಗ ಆತಿಥೇಯ ತಂಡ 32 ಓವರ್‌ಗಳಲ್ಲಿ 6 ವಿಕೆಟ್‌ಗೆ 116 ರನ್‌ ಗಳಿಸಿತ್ತು.

ಒಲಿ ಪೋಪ್ (ಬ್ಯಾಟಿಂಗ್‌ 61) ಅವರನ್ನು ಹೊರತುಪಡಿಸಿ, ಇಂಗ್ಲೆಂಡ್‌ನ ಬ್ಯಾಟರ್‌ಗಳು ಎದುರಾಳಿ ಬೌಲಿಂಗ್‌ ದಾಳಿಗೆ ನಲುಗಿದರು. ಪೋಪ್‌ ಮತ್ತು ನಾಯಕ ಬೆನ್‌ ಸ್ಟೋಕ್ಸ್‌ (20) ಹೊರತುಪಡಿಸಿ ಇತರ ಯಾರೂ ಎರಡಂಕಿಯ ಮೊತ್ತ ಗಳಿಸಲಿಲ್ಲ.

ಸಂಕ್ಷಿಪ್ತ ಸ್ಕೋರ್
ಮೊದಲ ಇನಿಂಗ್ಸ್‌: ಇಂಗ್ಲೆಂಡ್‌
32 ಓವರ್‌ಗಳಲ್ಲಿ 6ಕ್ಕೆ 116 (ಒಲಿ ಪೋಪ್‌ ಬ್ಯಾಟಿಂಗ್‌ 61, ಬೆನ್‌ ಸ್ಟೋಕ್ಸ್‌ 20, ಕಗಿಸೊ ರಬಾಡ 36ಕ್ಕೆ 2, ಎನ್ರಿಚ್‌ ನಾರ್ಕಿಯ 43ಕ್ಕೆ 3, ಮಾರ್ಕೊ ಜೆನ್ಸೆನ್‌ 18ಕ್ಕೆ 1)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು