ಬುಧವಾರ, ಏಪ್ರಿಲ್ 21, 2021
25 °C
ಶಿವಾಜಿ ಬಳಸುತ್ತಿದ್ದ ಖಡ್ಗವನ್ನು ಇಂಗ್ಲೆಂಡ್‌ನಿಂದ ಮರಳಿಸಲು ಆಗ್ರಹ

ಪುಣೆ: ಎಂಸಿಎ ಕ್ರಿಕೆಟ್‌ ಕ್ರೀಡಾಂಗಣಕ್ಕೆ ನುಗ್ಗಿದ ಐವರ ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

ಪುಣೆ: ‘ಇಂಗ್ಲೆಂಡ್‌ ಗೊ ಬ್ಯಾಕ್‌’ ಘೋಷಣೆಗಳನ್ನು ಕೂಗುತ್ತ ಸೋಮವಾರ ಇಲ್ಲಿನ ಗಹುಂಜೆ ಪ್ರದೇಶದಲ್ಲಿರುವ ಮಹಾರಾಷ್ಟ್ರ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದಲ್ಲಿ ನುಗ್ಗಿ ಪ್ರತಿಭಟಿಸಿದ್ದ ಐವರನ್ನು ಪೊಲೀಸರು  ಬಂಧಿಸಿದ್ದಾರೆ. ಛತ್ರಪತಿ ಶಿವಾಜಿ ಅವರು ಬಳಸುತ್ತಿದ್ದ ಖಡ್ಗವನ್ನು ಆ ದೇಶ ಇಟ್ಟುಕೊಂಡಿರುವುದು ಅವರ ಆಕ್ರೋಶಕ್ಕೆ ಕಾರಣವಾಗಿತ್ತು.

ಭಾರತ ಮತ್ತು ಇಂಗ್ಲೆಂಡ್‌ ಕ್ರಿಕೆಟ್‌ ತಂಡಗಳು, ಮಾರ್ಚ್‌ 23, 26 ಮತ್ತು 28ರಂದು ಇಲ್ಲಿ ಮೂರು ಏಕದಿನ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಲಿವೆ.

ಈ ಐವರು ಕೊಲ್ಹಾಪುರ ಮೂಲದ ಸಂಘಟನೆಯೊಂದರ ಸದಸ್ಯರು. ಶಿವಾಜಿ ಮಹಾರಾಜ ಅವರು ಬಳಸುತ್ತಿದ್ದರೆನ್ನಲಾದ ಭವಾನಿ ಖಡ್ಗವನ್ನು, ವೇಲ್ಸ್‌ನ ರಾಜಕುಮಾರ ಪ್ರಿನ್ಸ್‌ ಅವರಿಗೆ ಶಿವಾಜಿ ವಂಶಸ್ಥರಾದ ಕೊಲ್ಹಾಪುರದ ನಾಲ್ಕನೇ ಶಿವಾಜಿ ಅವರು ಉಡುಗೊರೆಯಾಗಿ ನೀಡಿದ್ದರು. ಈ ಖಡ್ಗವನ್ನು ದೇಶಕ್ಕೆ ಮರಳಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದರು.

‘ಐವರು ಆರೋಪಿಗಳು ಸೋಮವಾರ ಮಧ್ಯಾಹ್ನ ಧ್ವಜಗಳನ್ನು ಹಿಡಿದುಕೊಂಡು ಘೋಷಣೆಗಳನ್ನು ಕೂಗುತ್ತ ಕ್ರೀಡಾಂಗಣಕ್ಕೆ ಪ್ರವೇಶಿಸಿದ್ದಾರೆ. ತಾವು ಶಿವಾಜಿ ಭಕ್ತರೆಂದು ಅವರು ನಮಗೆ ತಿಳಿಸಿದ್ದಾರೆ. 1875ರಲ್ಲಿ ವೇಲ್ಸ್‌ನ ರಾಜಕುಮಾರ ಅವರು ಬಲವಂತವಾಗಿ ಆ ಖಡ್ಗವನ್ನು ತೆಗೆದುಕೊಂಡು ಹೋಗಿದ್ದಾರೆ ಎಂಬುದು ಅವರ ವಾದವಾಗಿದೆ’ ಎಂದು ತಲೆಗಾಂವ್ ದಭಾಡೆ ಪೊಲೀಸ್‌ ಠಾಣೆ ಅಧಿಕಾರಿ ತಿಳಿಸಿದರು.

ಕ್ರೀಡಾಂಗಣಕ್ಕೆ ಅತಿಕ್ರಮ ಪ್ರವೇಶ ವಿರುದ್ಧ ಭಾರತೀಯ ದಂಡ ಸಂಹಿತೆಯಡಿ ಐವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.